Advertisement
ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನೋಳಿ ಧರ್ಮನಗರದ ಹರೀಶ್ ಹಾಗೂ ನಂದನ್ ಕುಮಾರ್ ಗಾಯ ಗೊಂಡವರು.
ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಮತ್ತು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರ ವಿಜಯೋತ್ಸವದ ಅಂಗವಾಗಿ ಬೋಳಿಯಾರು ಬಿಜೆಪಿ ಗ್ರಾಮಸಮಿತಿ ವತಿಯಿಂದ ಚೇಳೂರು, ಬೋಳಿಯಾರು ಮಾರ್ಗವಾಗಿ ಧರ್ಮನಗರದ ವರೆಗೆ ವಿಜಯೋತ್ಸವ ಮೆರವಣಿಗೆ ಆಯೋಜಿಸಲಾಗಿತ್ತು. ರ್‍ಯಾಲಿ ಮುಗಿಸಿ ಮನೆಗೆ ತೆರಳಿದ್ದ ಹರೀಶ ಮತ್ತು ನಂದನ್ ಅಂಗಡಿಯಿಂದ ಯಾವುದೋ ಸಾಮಗ್ರಿ ಖರೀದಿಸಿ ತರಲೆಂದು ಬೋಳಿಯಾರು ಕ್ರಾಸ್‌ನತ್ತ ಮರಳಿ ಬಂದಿದ್ದರು. ಮನೆಗೆ ಮರಳು ವಾಗ ಅವರು ಕೇಸರಿ ಶಾಲು ಧರಿಸಿದ್ದನ್ನು ನೋಡಿದ ತಂಡವೊಂದು ತಡೆದು ಬೆದರಿಸಿದ್ದಲ್ಲದೆ ಬೈಕಿನ ಮುಂದೆ ಹರೀಶ್ ಅವರ ಹೊಟ್ಟೆಗೆ ಮತ್ತು ನಂದನ್ ಅವರ ಬೆನ್ನಿಗೆ ಚೂರಿಯಿಂದ ಇರಿಯಿತು. ಬಳಿಕ ಕೃತ್ಯ ಎಸಗಿದ ತಂಡ ಪರಾರಿಯಾಗಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿದೆ.
Related Articles
Advertisement
ಕೊಣಾಜೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.