Advertisement

ವಿಶ್ವಕರ್ಮರಿಗೆ ಕುಲಕಸುಬೆ ಕಾಯಕ

10:17 AM Sep 18, 2017 | Team Udayavani |

ಕಲಬುರಗಿ: ತಮ್ಮ ಕುಲಕಸುಬನ್ನೇ  ಯಕವನ್ನಾಗಿಸಿಕೊಂಡು ಜೀವಿಸುವುದರೊಂದಿಗೆ ಸಮಾಜಕ್ಕೆ ಶ್ರಮ ಸಂಸ್ಕೃತಿ ಪರಿಚಯಿಸಿದ ಕೊಡುಗೆ ವಿಶ್ವಕರ್ಮ ಸಮಾಜಕ್ಕೆ ಸಲ್ಲಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ರವಿವಾರ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ವಿಶ್ವಕರ್ಮ ಮಹೋತ್ಸವ ಸಮನ್ವಯ ಸಮಿತಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಭಾಗದ ಖ್ಯಾತ ಕಲಾವಿದರಾಗಿದ್ದ ಶಿಲ್ಪಿ ಡಾ| ಎಸ್‌. ಎಂ.ಪಂಡಿತ ನೆನಪಿನಲ್ಲಿ ಇಲ್ಲಿನ ರಂಗಮಂದಿರಕ್ಕೆ ಅವರ ಹೆಸರಿಡಲಾಗಿದೆ. ಇದೀಗ ರಂಗಮಂದಿರ ಆವರಣದಲ್ಲಿ ಡಾ|ಎಸ್‌.ಎಂ. ಪಂಡಿತ ಅವರ ಪುತ್ಥಳಿ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಅದನ್ನು ಆದಷ್ಟು ಶೀಘ್ರವಾಗಿ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಅಶೋಕ ಪೋದ್ದಾರ ಹರಸೂರ ಉಪನ್ಯಾಸ ನೀಡಿ, ಸರ್ವಧರ್ಮ ಸಮನ್ವಯ ಕ್ಷೇತ್ರವಾದ ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪ್ರಾಧಿಕಾರ ರಚಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದರು.

ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ, ವಿಶ್ವಕರ್ಮ ಪೂಜಾ ಮಹೋತ್ಸವ
ಸಮನ್ವಯ ಸಮಿತಿ ಅಧ್ಯಕ್ಷ ಮೋಹನ ಎಸ್‌.ಪಂಡಿತ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ
ತೆಗ್ಗೆಳ್ಳಿ, ಶಿಷ್ಠಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್‌ ಹಾಗೂ ವಿಶ್ವಕರ್ಮ ಸಮಾಜದ ಗಣ್ಯರು ಹಾಜರಿದ್ದರು.
ಶಿವಾನಂದ ಅಣಜಗಿ ಸ್ವಾಗತಿಸಿದರು.

Advertisement

ಇದಕ್ಕೂ ಮುನ್ನ ನಗರದ ಸಂತ್ರಾಸವಾಡಿ ಕಾಳಿಕಾ ಮಂದಿರದಿಂದ ಸರಾಫ ಬಜಾರ, ಕಪಡಾ ಬಜಾರ, ಚೌಕ್‌
ಪೊಲೀಸ್‌ ಠಾಣೆ, ಸೂಪರ್‌ ಮಾರ್ಕೇಟ್‌, ಜಗತ್‌ ವೃತ್ತದಿಂದ ಡಾ| ಎಸ್‌.ಎಂ.ಪಂಡಿತ ರಂಗಮಂದಿರದ ವರೆಗೆ ವಿಶ್ವಕರ್ಮ ಭಾವಚಿತ್ರದ ಮತ್ತು ವಿವಿಧ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next