Advertisement
ಮುಖ್ಯ ಅತಿಥಿಯಾಗಿದ್ದ ಸಚಿವ ಬಿ. ರಮಾನಾಥ ರೈ ಮಾತನಾಡಿ, ಪರಧರ್ಮ ಸಹಿಷ್ಣುತೆ ಹಿಂದೂ ಧರ್ಮದ ಸಾರವಾಗಿದ್ದು, ಮನುಷ್ಯ ಮನುಷ್ಯರ ನಡುವೆ ನಮ್ಮ ವರು ಎಂಬ ಭಾವನೆ ಬಂದಾಗ ಜಗತ್ತನ್ನು ಗೆಲ್ಲಲು ಸಾಧ್ಯ. ಸನಾತನ ಹಿಂದೂ ಧರ್ಮದ ಘೋಷಣೆ ಯಾದ ವಸುಧೈವ ಕುಟುಂಬಕಂ ಎಂಬ ಮಾತು ಕೇವಲ ಘೋಷಣೆಗೆ ಸೀಮಿತವಾಗಬಾರದು ಎಂದರು.
Related Articles
Advertisement
ಸಚಿವ ರಮಾನಾಥ ರೈ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಎ.ಜೆ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ, ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಕೆ.ಎಸ್. ಕಲ್ಲೂರಾಯ, ಸುಧಾಕರ ರಾವ್ ಪೇಜಾವರ, ಕೃಷ್ಣಮೂರ್ತಿ, ದಿಯಾ ಸಿಸ್ಟಮ್‌ನ ರವಿಚಂದ್ರನ್ ಉಪಸ್ಥಿತರಿದ್ದರು
ಮೇಯರ್ ಎಲ್ಲಿ ?ಸಚಿವ ರಮಾನಾಥ ರೈ ಅವರು ಭಾಷಣ ಪ್ರಾರಂಭಿಸುತ್ತಿದ್ದಂತೆ, ಮೇಯರ್ ಕವಿತಾ ಸನಿಲ್ ಅವರನ್ನು ಏಕೆ ಕರೆದಿಲ್ಲ ಎಂದು ಪ್ರಶ್ನಿಸಿದರು. ತನ್ನನ್ನು ಸಮಾರಂಭಕ್ಕೆ ಕರೆದಿಲ್ಲ ಎಂದು ಮೇಯರ್ ಕರೆ ಮಾಡಿದ್ದಾರೆ. ಪೌರ ಸಮ್ಮಾನದಲ್ಲಿ ಮೇಯರ್ ಇರಬೇಕಿತ್ತು. ಈ ಹಿಂದೆ ಪೇಜಾವರ ಶ್ರೀಗಳಿಗೆ ನಡೆದ ಪೌರ ಸಮ್ಮಾನ ನಡೆದ ವೇಳೆ ಅಂದಿನ ಮೇಯರ್ ಉಪಸ್ಥಿತರಿದ್ದರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಕ್ರಮ ಆಯೋಜಕರು, 3 ಬಾರಿ ಮೇಯರ್ ಅವರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದು, ತಾನು ಆಗಮಿಸುತ್ತೇನೆ ಎಂದು ಹೇಳಿದ್ದರು ಎಂದರು.