Advertisement

ಸಿಟಿ ಯೂನಿಯನ್‌ ಬ್ಯಾಂಕ್‌ ನಿವ್ವಳ ಲಾಭ 28 ಕೋಟಿ

12:06 PM Feb 10, 2018 | |

ಚೆನ್ನೈ: ಸಿಟಿ ಯೂನಿಯನ್‌ ಬ್ಯಾಂಕ್‌ (ಸಿಯುಬಿ) 2017-18ನೇ ಸಾಲಿನ ಆರ್ಥಿಕ ವರ್ಷದ ಮೂರನೇ ತ್ತೈಮಾಸಿಕದಲ್ಲಿ 28 ಕೋಟಿ ನಿವ್ವಳ ಲಾಭ ಗಳಿಸಿದೆ. 2ನೇ ತ್ತೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ.22ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಡಾ.ಎನ್‌.ಕಾಮಕೋಟಿ ತಿಳಿಸಿದ್ದಾರೆ.

Advertisement

ಚೆನ್ನೈನಲ್ಲಿ ಅವರು ಮಾತನಾಡಿ, ಪ್ರಸಕ್ತ ಹಣಕಾಸು ವರ್ಷದ ಮೂರು ತ್ತೈಮಾಸಿಕಗಳಲ್ಲಿ ಸಾಲ ವಿತರಣೆ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಈ ತ್ತೈಮಾಸಿಕದಲ್ಲಿ ಬಡ್ಡಿ ರೂಪದಲ್ಲಿ ಬಂದ ಲಾಭ 154.80 ಕೋಟಿ ರೂ.ಗೆ ತಲುಪಿದೆ. ಇದು 2ನೇ ತ್ತೈಮಾಸಿಕದಲ್ಲಿ 126.62 ಕೋಟಿ ರೂ.ಗಳಲ್ಲಿತ್ತು. ಬಡ್ಡಿಯಿಂದ ಬಂದ ನಿವ್ವಳ ಆದಾಯವು ಶೇ.19 ರಷ್ಟು ಹೆಚ್ಚಳವಾಗಿದ್ದು, ಅಂದರೆ 365.14 ಕೋಟಿಗೆ ತಲುಪಿದೆ ಎಂದರು.

2017-18ನೇ ಸಾಲಿನ ಒಂಬತ್ತು ತಿಂಗಳಲ್ಲಿ ಬ್ಯಾಂಕು ಸಾಕಷ್ಟು ಸಾಧನೆ ಮಾಡಿದ್ದು, ಒಟ್ಟಾರೆ ನಿವ್ವಳ ಲಾಭ 439.87 ಕೋಟಿ ಗಳಿಸಿದೆ. ಬಡ್ಡಿ ಮೇಲಿನ ಆದಾಯ ಒಟ್ಟು 2373.88 ಕೋಟಿಯಿಂದ 2531.76 ಕೋಟಿ ರೂ. ಗೆ (ಶೇ.7) ತಲುಪಿದೆ. ಎಲ್ಲ ಮೂಲಗಳಿಂದ ಗಳಿಸಿರುವ ಒಟ್ಟು ಆದಾಯ ಶೇ.8 ರಷ್ಟು ಅಂದರೆ 2944.03 ಕೋಟಿ ರೂ. ಆಗಿರುವುದು ಸಂತಸ ತಂದಿದೆ.

ಒಟ್ಟಾರೆ ಠೇವಣಿ 29,986 ಕೋಟಿ ರೂ.ಗಳಿಂದ 31,339 ಕೋಟಿ ರೂ.ಗಳಿಗೇರಿದ್ದಲ್ಲದೆ (ಶೇ.5 ರಷ್ಟು) ಸಾಲ ಪ್ರಮಾಣದಲ್ಲೂ ಶೇ.20 ಏರಿಕೆಯಾಗಿದೆ. 2017ರ ಡಿಸೆಂಬರ್‌ ಅಂತ್ಯದಲ್ಲಿ ಬ್ಯಾಂಕಿನ ನಿವ್ವಳ ಅನುತ್ಪಾದಕ ಆಸ್ತಿ (ಎನ್‌ಪಿಎ) ಶೇ.1.74ರಲ್ಲಿ ನಿಂತಿದೆ. ಸಿಯುಬಿ 561 ಶಾಖೆಗಳನ್ನು ಹಾಗೂ 1584 ಎಟಿಎಂಗಳನ್ನು ಹೊಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next