ನಿರ್ದೇಶಕ ಅರವಿಂದ್ ಕೌಶಿಕ್ ತಮ್ಮನ್ನು ಅವಮಾನಿಸಿದವರಿಗೆ, ತಮ್ಮ ಬಗ್ಗೆ ಕೀಳಾಗಿ ಮಾತನಾಡಿದವರಿಗೆ ಟಾಂಗ್ ಕೊಡಲು ಕೂಡಾ ಅದೇ ವೇದಿಕೆಯನ್ನು ಬಳಸಿಕೊಂಡರು. ಟಾಂಗ್ ಕೊಟ್ಟಿದ್ದು ಸ್ವಲ್ಪ ಸ್ಟ್ರಾಂಗ್ ಆಯಿತ್ತೆಂದು ಗೊತ್ತಾದಾಗ “ಸಾರಿ, ತೀರಾ ಪರ್ಸನಲ್ ಆಯಿತು’ ಎನ್ನುತ್ತಾ ಮತ್ತೆ ಸಿನಿಮಾ ಟ್ರ್ಯಾಕ್‌ಗೆ ಮರಳು ತ್ತಿದ್ದರು ಅರವಿಂದ್ ಕೌಶಿಕ್.
“ತಿಕ್ಲು ತಿಕ್ಲು ತಿಕ್ಲು …’
– “ಹುಲಿರಾಯ’ ಪತ್ರಿಕಾಗೋಷ್ಠಿ ಆರಂಭವಾಗಿ ಮುಗಿಯುವ ಹೊತ್ತಿಗೆ ನಿರ್ದೇಶಕ ಸೇರಿದಂತೆ ವೇದಿಕೆ ಮೇಲೆ ಕುಳಿತಿದ್ದವರ ಬಾಯಿಂದ ಅದೆಷ್ಟು ಬಾರಿ “ತಿಕ್ಲು’ ಅನ್ನೋ ಪದ ಬಂತೋ ಲೆಕ್ಕವಿಲ್ಲ. “ನಾನು ತಿಕ್ಲು, ಅವನು ತಿಕ್ಲು, ಮತ್ತೂಬ್ಬರು ತಿಕ್ಲು’ ಅನ್ನೋ ತರಹ ಮಾತನಾಡುತ್ತಲೇ ಸಿನಿಮಾ ಬಗ್ಗೆ ವಿವರಣೆ ಕೊಡುತ್ತಿತ್ತು ಚಿತ್ರತಂಡ. ಅರವಿಂದ್ ಕೌಶಿಕ್ “ಹುಲಿರಾಯ’ ಸಿನಿಮಾದ ನಿರ್ದೇಶಕರು. ಈ ಹಿಂದೆ “ನಮ್ ಏರಿಯಾಲ್ ಒಂದಿನಾ’, “ತುಘಲಕ್’ ಸಿನಿಮಾ ಮಾಡಿದ್ದ ಅರವಿಂದ್ ಕೌಶಿಕ್ ಈಗ “ಹುಲಿರಾಯ’ ಎಂಬ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಬಗ್ಗೆ ವಿವರ ಕೊಡಲು ಇತ್ತೀಚೆಗೆ ಮಾಧ್ಯಮ ಮುಂದೆ ತಮ್ಮ ಚಿತ್ರತಂಡದೊಂದಿಗೆ ಬಂದಿದ್ದರು. ಹಾಗೆ ನೋಡಿದರೆ ಅದು ಡಬಲ್ ಶೇಡ್ ಪ್ರಸ್‌ಮೀಟ್. ಕೇವಲ ಸಿನಿಮಾದ ವಿವರಣೆಯಷ್ಟೇ ಅಲ್ಲದೇ, ನಿರ್ದೇಶಕ ಅರವಿಂದ್ ಕೌಶಿಕ್ ತಮ್ಮನ್ನು ಅವಮಾನಿಸಿದವರಿಗೆ, ತಮ್ಮ ಬಗ್ಗೆ ಕೀಳಾಗಿ ಮಾತನಾಡಿದವರಿಗೆ ಟಾಂಗ್ ಕೊಡಲು ಕೂಡಾ ಅದೇ ವೇದಿಕೆಯನ್ನು ಬಳಸಿಕೊಂಡರು. ಟಾಂಗ್ ಕೊಟ್ಟಿದ್ದು ಸ್ವಲ್ಪ ಸ್ಟ್ರಾಂಗ್ ಆಯಿತ್ತೆಂದು ಗೊತ್ತಾದಾಗ “ಸಾರಿ, ತೀರಾ ಪರ್ಸನಲ್ ಆಯಿತು’ ಎನ್ನುತ್ತಾ ಮತ್ತೆ ಸಿನಿಮಾ ಟ್ರ್ಯಾಕ್‌ಗೆ ಮರಳುತ್ತಿದ್ದರು ಅರವಿಂದ್ ಕೌಶಿಕ್.
“ಹುಲಿರಾಯ’ ಅರವಿಂದ್ ಕೌಶಿಕ್ ಅವರ ಹೊಸ ಚಿತ್ರ. ಇತ್ತೀಚೆಗೆ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಯಿತು. ತಮ್ಮ ಗುರು, ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರಿಂದ ಪೋಸ್ಟರ್ ಬಿಡುಗಡೆ ಮಾಡಿಸಿದರು ಅರವಿಂದ್. ಅಶೋಕ್ ಕಶ್ಯಪ್ ಕೂಡಾ, ಅರವಿಂದ್ ಕೌಶಿಕ್ ಅವರ ಸಿನಿಮಾ ಪ್ರೀತಿ, ತಾಂತ್ರಿಕವಾಗಿ ಅವರ ಅಪ್‌ಡೇಟ್ ಆಗುವ ರೀತಿ, ತಮ್ಮದೇ ಶೈಲಿಯಲ್ಲಿ ಸಿನಿಮಾವನ್ನು ಕಟ್ಟಿಕೊಡುವಲ್ಲಿ ಕೌಶಿಕ್ ತೋರುವ ಧೈರ್ಯವನ್ನು ಮೆಚ್ಚಿಕೊಂಡರು ಅಶೋಕ್ ಕಶ್ಯಪ್.
ಅನೇಕರು ಅರವಿಂದ್ ಬಗ್ಗೆ ಆಡಿದ ಕೊಂಕು ಮಾತುಗಳಿಗೆ ಉತ್ತರವಾಗಿ “ಹುಲಿರಾಯ’ ಮೂಡಿಬಂದಿದೆಯಂತೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ ತುಂಬಾ ಅಪ್‌ಡೇಟ್ ಆದ ಸಿನಿಮಾ. 10-15 ವರ್ಷವಾದರೂ ಈ ಸಿನಿಮಾದ ವಸ್ತು ಬೇರೆ ಬೇರೆ ಚಿತ್ರಗಳಲ್ಲಿ ಬಂದು ಹೋಗಬಹುದು ಎಂಬ ವಿಶ್ವಾಸ ಅರವಿಂದ್‌ಗಿದೆ.
“ಬೆಂಗಳೂರಿನಂತಹ ಬಿಝಿ ಸಿಟಿಯಲ್ಲಿ ಉಸಿರಾಡೋದು ಕೂಡಾ ಕಷ್ಟ. ಜನಸಂಖ್ಯೆ ಹೆಚ್ಚುತ್ತಿದೆ, ಜಾಗ ಕಡಿಮೆಯಾಗುತ್ತಿದೆ. ಇಂತಹ ಬಿಝಿ ಸಿಟಿಗೆ ಕಾಡಿನಲ್ಲಿ ತನ್ನ ಪಾಡಿಗೆ ಸ್ವತ್ಛಂದವಾಗಿ ಓಡಾಡಿಕೊಂಡಿದ್ದ ಹುಲಿಯೊಂದು ಎಂಟ್ರಿಕೊಟ್ಟರೆ ಅದರ ಪರಿಸ್ಥಿತಿ, ವರ್ತನೆ ಹೇಗಾಗಬಹುದು ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ. ಇಲ್ಲಿ ಹುಲಿಯನ್ನು ಸಾಂಕೇತಿಕವಾಗಿ ಬಳಸಲಾಗಿದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಇದು ಮೆದುಳಿಕೆ ಕೈ ಹಾಕೋ ಸಿನಿಮಾವಲ್ಲ ಎಂದು ಹೇಳಲು ಅರವಿಂದ್ ಮರೆಯೋದಿಲ್ಲ. ಇನ್ನು ಈ ಸಿನಿಮಾ ಆಗಲು ಮುಖ್ಯ ಪ್ರೇರಣೆ ನಾಯಕ ಬಾಲು ನಾಗೇಂದ್ರ ಅವರಂತೆ. ಅವರಲ್ಲಿದ್ದ ಜೋಶ್, ಅವರ ಅಟಿಟ್ಯೂಡ್ ಎಲ್ಲವನ್ನು ನೋಡಿ ಈ ಕಥೆ ಮಾಡಿದ್ದಾಗಿ ಹೇಳುತ್ತಾರೆ ಕೌಶಿಕ್. ಇನ್ನು, ಅರವಿಂದ್ ಕೌಶಿಕ್ ಮತ್ತು ಬಾಲು ನಾಗೇಂದ್ರ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆಂಬ ವಿಷಯ ತಿಳಿದ ಕೆಲವರು, “ಇಬ್ಬರು ತಿಕ್ಲುಗಳು, ಆ ಸಿನಿಮಾ ಆದ್ಹಂಗೆ’ ಎಂದು ಕುಹಕವಾ ಡಿದರಂತೆ. ಆದರೆ ಈಗ ಸಿನಿಮಾ ಆಗಿದೆ. “ಟೀ ಅಂಗಡಿಯಲ್ಲಿ ಶುರುವಾದ ಚರ್ಚೆ ಈಗ ಸಿನಿಮಾ ಮುಗಿಸಿ ಮೋಶನ್ ಪೋಸ್ಟರ್ ಬಿಡುಗಡೆವರೆಗೆ ಬಂದಿದೆ. ಸಿನಿಮಾವನ್ನೂ ಬಿಡುಗಡೆ ಮಾಡು ತ್ತೇವೆ. ಅದಕ್ಕಿಂತ ಹೆಚ್ಚಾಗಿ ನಾವಿಬ್ಬರು ಸೇರಿ ಕೊಂಡು ಮತ್ತೂಂದು ಸಿನಿಮಾ ಮಾಡುತ್ತೇವೆ. ಶೀಘ್ರದಲ್ಲಿಯೇ ಅನೌನ್ಸ್ ಮಾಡುತ್ತೇನೆ’ ಎನ್ನುತ್ತಾ ಉರೊRಳ್ಳೋರು ಇನ್ನಷ್ಟು ಉರೊRಳ್ಳಿ ಎಂಬ ಧಾಟಿಯಲ್ಲಿ ಹೇಳಿದರು ಅರವಿಂದ್.
ನಾಯಕ ಬಾಲು ನಾಗೇಂದ್ರ ಅವರಿಗೆ ಈ ಸಿನಿಮಾ ಮೂಲಕ ಬ್ರೇಕ್ ಸಿಗುವ ವಿಶ್ವಾಸವಿದೆ. “ಇದು ಬೇರೆ ರೀತಿಯ ಪ್ರಯತ್ನ. ಚಿತ್ರದಲ್ಲಿ ಈ ಹಿಂದೆ ನೋಡಿರದಂತಹ ಜಾಗಗಳನ್ನು ತೋರಿಸಿದ್ದೇವೆ. ನಿರ್ದೇಶಕರಂತೂ ಯಾವುದಕ್ಕೂ ಕಾಂಪ್ರಮೈಸ್ ಆಗುತ್ತಿರಲಿಲ್ಲ’ ಎಂದರು ನಾಗೇಂದ್ರ. ಈ ಚಿತ್ರವನ್ನು ನಾಗೇಶ್ ಕೋಗಿಲು ಈ ಚಿತ್ರದ ನಿರ್ಮಾಪಕರು. ಅರವಿಂದ್ ಕೌಶಿಕ್ ಮಾಡಿದ ಟೀಸರ್ ನೋಡಿ ಖುಷಿಯಾದ ನಾಗೇಶ್ ಸಿನಿಮಾ ಮಾಡಿದ್ದಾರೆ. ಕನ್ನಡ ಸಿನಿಮಾ ಮಾಡಬೇಕೆಂಬ ಅವರ ಆಸೆ ಈಗ ಈಡೇರಿದೆಯಂತೆ. ಚಿತ್ರದಲ್ಲಿ ದಿವ್ಯಾ ಎನ್ನುವವರು ನಾಯಕಿಯಾಗಿ ನಟಿಸಿದ್ದಾರೆ. ಇವರಿಗೆ ಇದು ಮೊದಲ ಸಿನಿಮಾ. ಮೋಶನ್ ಪೋಸ್ಟರ್ ಮಾಡಿದ ಸಂತೋಷ್ ರಾಧಾಕೃಷ್ಣ ಕೂಡಾ ಚಿತ್ರದ ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತವಿದೆ.