Advertisement
ಮಾಲಿನ್ಯ ನಿಯಂತ್ರಣ ಮಂಡಳಿ ಸೂಚ್ಯಂಕದ ಪ್ರಕಾರ ನಗರದಲ್ಲಿ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಏರದೆ ಮಿತಿಯೊಳಗೇ ಇದೆ ಎಂಬುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಯಾವುದೇ ಒಂದು ಪ್ರದೇಶದಲ್ಲಿ ನಾವು ಉಸಿರಾಡುವ ಗಾಳಿಯ ಸೂಚ್ಯಂಕ 0ಯಿಂದ 50 ಇದ್ದರೆ ಅದು ಶುದ್ಧ ಗಾಳಿಯಾಗಿರುತ್ತದೆ. 51ರಿಂದ 100ರ ಒಳಗೆ ಇದ್ದರೆ ಅದು ಸಮಾಧಾನಕರವಾಗಿರುತ್ತದೆ. 101ರಿಂದ 200 ಇದ್ದರೆ ಪರವಾಗಿಲ್ಲ.
Related Articles
Advertisement
233 ಶಬ್ದ ಮಾಪನ ಯಂತ್ರಕ್ಕೆ ಟೆಂಡರ್: ಬೆಂಗಳೂರಿನ ವಿವಿಧ ಕಡೆ 20 ಶಬ್ದ ಮಾಪನ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 233 ಯಂತ್ರಗಳಿಗೆ ಟೆಂಡರ್ ಕರೆಯಲಾಗಿದೆ. ಇದರಲ್ಲಿ 100 ಯಂತ್ರಗಳನ್ನು ಸಂಚಾರ ಪೊಲೀಸ್ ವಿಭಾಗಕ್ಕೆ ನೀಡಲಾಗುವುದು. ಉಳಿದ 133 ಯಂತ್ರಗಳನ್ನು ಎಲ್ಲೆಲ್ಲಿ ಅಳವಡಿಸಬೇಕೆಂದು ಗುರುತು ಮಾಡಲಾಗುತ್ತಿದೆ. ಒಂದು ಯಂತ್ರಕ್ಕೆ 3.5 ಲಕ್ಷ ರೂ. ವೆಚ್ಚವಾಗಲಿದ್ದು, ಯಂತ್ರ ಅಳವಡಿಸಿದರೆ ಬೆಂಗಳೂರಲ್ಲಿ ಎಷ್ಟು ಶಬ್ದ ಮಾಲಿನ್ಯವಾಗುತ್ತಿದೆ ಎಂಬ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಬಸವರಾಜ್ ವಿ. ಪಾಟೀಲ್ ಹೇಳಿದರು.
ಯಾವ ತಿಂಗಳು ಎಲ್ಲೆಲ್ಲಿ, ಎಷ್ಟೆಷ್ಟು ಗುಣಮಟ್ಟದ ಗಾಳಿ?ಸ್ಥಳ ಜುಲೈ ಆಗಸ್ಟ್ ಸೆಪ್ಟಂಬರ್ ಅಕ್ಟೋಬರ್(21ರಂದು) ನವೆಂಬರ್ (2ರಂದು)
ಸಿಟಿ ರೈಲು ನಿಲ್ದಾಣ 109 90 100 110 123
ಎಸ್.ಜಿ.ಹಳ್ಳಿ 38 41 45 51 43
ಹೆಬ್ಬಾಳ 49 27 35 46 61
ಜಯನಗರ 5ನೇ ಬ್ಲಾಕ್ 42 35 45 75 72
ಮೈಸೂರು ರಸ್ತೆ 51 45 44 73 56
ನಿಮ್ಹಾನ್ಸ್ 36 30 34 35 61
ಸೆಂಟ್ರಲ್ ಸಿಲ್ಕ್ ಬೋರ್ಡ್ 75 76 70 90 40 ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ವಾಯು ಮಾಲಿನ್ಯ ಕಡಿಮೆಯಾಗುತ್ತಿದೆ. ಬಹುತೇಕ ವಾಯು ಮಾಲಿನ್ಯ ಮಾಪನ ಕೇಂದ್ರಗಳಲ್ಲಿ 30ರಿಂದ 70ರವರೆಗಿದೆ. ಈ ಬಾರಿ ಹೆಚ್ಚಿನ ಮಳೆಯಿಂದಲೂ ಮಾಲಿನ್ಯ ಕಡಿಮೆಯಾಗಿದೆ.
-ಬಸವರಾಜ್ ವಿ. ಪಾಟೀಲ್, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ವಾಯು ಮಾಲಿನ್ಯದಿಂದ ಉಸಿರಾಟದ ತೊಂದರೆ ಮಾತ್ರ ಆಗುವುದಿಲ್ಲ. ಹೃದಯ ಸಂಬಂಧ ರೋಗಗಳೂ ಬರುತ್ತವೆ. ಬೆಂಗಳೂರಿನಲ್ಲಿ ಮಾಲಿನ್ಯ ಕಡಿಮೆ ಇದ್ದರೂ, ವಾಹನ ದಟ್ಟಣೆಯಲ್ಲಿ ನಿಲ್ಲುವುದರಿಂದ ವಿಷಗಾಳಿ ಸೇವಿಸಬೇಕಾಗುತ್ತದೆ. ಜಯದೇವ ಹೃದ್ರೋಗ ಸಂಸ್ಥೆಯ ಸಂಶೋಧನೆ ಪ್ರಕಾರ ಹೃದಯಾಘಾತವಾದ ಜನರ ಪೈಕಿ ಶೇ.25ರಷ್ಟು ವಾಹನ ಚಾಲಕರು ಇದ್ದಾರೆ.
-ಡಾ.ಸಿ.ಎನ್.ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ * ಮಂಜುನಾಥ್ ಗಂಗಾವತಿ