Advertisement

City in England; ಸ್ವತಃ ದಿವಾಳಿ ಎಂದು ಘೋಷಿಸಿಕೊಂಡ ಬರ್ಮಿಂಗ್‌ಹ್ಯಾಮ್‌

12:15 AM Sep 10, 2023 | Team Udayavani |

ಲಂಡನ್‌: ಬ್ರಿಟನ್‌ನ ಎರಡನೇ ಅತ್ಯಂತ ದೊಡ್ಡ ನಗರ ಬರ್ಮಿಂಗ್‌ಹ್ಯಾಮ್‌ ಸ್ವತಃ ದಿವಾಳಿ ಎಂದು ಘೋಷಿಸಿಕೊಂಡಿದೆ. ನಗರವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಈ ಸಂಬಂಧ ಲೇಬರ್‌ ಪಕ್ಷದ ನೇತೃತ್ವದ ಆಡಳಿತವು ನೋಟಿಸ್‌ ಹೊರಡಿಸಿದೆ. ಇದರ ಪ್ರಕಾರ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲದಕ್ಕೂ ಹಣಕಾಸು ಬಿಡುಗಡೆಯನ್ನು ಸ್ಥಗಿತಗೊಳಿಸಲಾಗಿದೆ.

Advertisement

ಸಮಾನ ವೇತನ ಜಾರಿಗೆ ಬಂದ ಹಿನ್ನೆಲೆಯಲ್ಲಿ ಬರ್ಮಿಂಗ್‌ಹ್ಯಾಮ್‌ ತೀವ್ರ ಆರ್ಥಿಕ ದುಃಸ್ಥಿತಿ ಎದುರಿಸುತ್ತಿದೆ. ಈ ಹಿಂದೆ ಪುರುಷ ಸರಕಾರಿ ಉದ್ಯೋಗಿಗಳಿಗಿಂತ ಮಹಿಳಾ ಸರಕಾರಿ ಉದ್ಯೋಗಿಗಳಿಗೆ ಕಡಿಮೆ ವೇತನ ನೀಡಲಾಗುತ್ತಿತ್ತು. ಹೋರಾಟದ ಫ‌ಲವಾಗಿ ಸಮಾನ ವೇತನ ಜಾರಿಗೆ ತರಲಾಯಿತು. ಇದರಿಂದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆಯಾಯಿತು. ಆದರೆ ಇದೀಗ ಸರಕಾರಿ ಉದ್ಯೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ವೇತನ ಪಾವತಿಸಲು ಕೂಡ ಬರ್ಮಿಂಗ್‌ಹ್ಯಾಮ್‌ ಆಡಳಿತಕ್ಕೆ ಸಾಧ್ಯವಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next