Advertisement
ನಗರಸಭೆಯ ಅಧ್ಯಕ್ಷೆ ಸುಮಿತ್ರಾ ರಮೇಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ಮಧ್ಯಾಹ್ನ 12:15 ಗಂಟೆಗೆ ಕರೆಯಲಾಗಿತ್ತು. ಆದರೆ, ನಗರಸಭೆ ಸದಸ್ಯರು ತಮ್ಮ ಕಚೇರಿಯಲ್ಲಿ ಠರಾವು ಪುಸ್ತಕವನ್ನು ತರಿಸಿಕೊಂಡು ಬೆಳಿಗ್ಗೆ ನಡೆದ ಆಯವ್ಯಯ ಸಭೆಯಲ್ಲಿ ಅನೇಕ ಸದಸ್ಯರು ಭಾಗವಹಿಸಿಲ್ಲ. ನಗರಸಭಾ ಸದಸ್ಯರ ಆರೋಗ್ಯ ಸರಿಯಿಲ್ಲದ ಕಾರಣದಿಂದ ಸಭೆಯನ್ನು ಮುಂದೂಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
Related Articles
Advertisement
ಗೊಂದಲದ ವಾತಾವರಣ ಸೃಷ್ಟಿ : ನಗರಸಭೆ ಉಪಾಧ್ಯಕ್ಷ ಮತ್ತು ಸದಸ್ಯರ ಒತ್ತಡಕ್ಕೆ ಮಣಿದ ಪೌರಾಯುಕ್ತರು ಹಿರಿಯ ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸಭೆಯಲ್ಲಿ ನಡೆದಿರುವ ಬೆಳವಣಿಗೆಗಳನ್ನು ವಿವರಿಸಿದರು. ಅದಕ್ಕೆ ಪ್ರತಿಯಾಗಿ ಕೂಡಲೇ ನಗರಸಭೆ ಅಧ್ಯಕ್ಷರಿಗೆ ಪತ್ರಬರೆದು ಸಭೆ ನಡೆಸುವಂತೆ ಮಾಹಿತಿ ನೀಡಲು ಸೂಚನೆಯನ್ನು ನೀಡಿದರು.
ಈ ಪ್ರಕ್ರಿಯೆಗೆ ಸಮಯ ಮೀರಿತ್ತು. ಇದೇ ವೇಳೆ ನಗರಸಭಾ ಸದಸ್ಯ ಮಂಜುನಾಥ್ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿ ಪೋಲಿಸರಿಗೆ ದೂರು ನೀಡುವುದಾಗಿ ಎಚ್ಚರಿಸಿದರು.
ಈ ವೇಳೆಯಲ್ಲಿ ನಗರಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ನಗರಸಭಾ ಸದಸ್ಯರ ಮಧ್ಯೆ ಪ್ರವೇಶ ಮಾಡಿ ಗಲಾಟೆಯನ್ನು ಶಮನಗೊಳಿಸಿದರಲ್ಲದೆ ಸಾಮಾನ್ಯ ಸಭೆಯೂ ನಡೆಯದೆ ಸದಸ್ಯರು ವಾಪಸ್ ಮರಳಿದರು.
ಪೋಲಿಸರ ಸರ್ಪಗಾವಲು: ಸಾಮಾನ್ಯ ಸಭೆ ನಡೆವ ವೇಳೆಯಲ್ಲಿ ಸದಸ್ಯರ ನಡುವೆ ಗಲಾಟೆ ನಡೆಯುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆರಕ್ಷಕ ವೃತ್ತ ನಿರೀಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ಸಭೆ ನಡೆಯುವ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.
ಭಾವುಕರಾದ ನಗರಸಭಾಧ್ಯಕ್ಷೆ : ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಕೆಲ ಸದಸ್ಯರು ಅನಗತ್ಯವಾಗಿ ಅಡ್ಡಗಾಲು ಹಾಕುತ್ತಿದ್ದಾರೆ. ಪ್ರತಿಯೊಂದು ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುವ ಕಾಯಕ ಮಾಡಿಕೊಂಡಿದ್ದಾರೆ. ನಾನು ಒಬ್ಬ ದಲಿತ ಮಹಿಳೆ ಆಗಿದ್ದರಿಂದ ನನ್ನ ಅವಧಿಯಲ್ಲಿ ಯಾವುದೇ ರೀತಿಯ ಪ್ರಗತಿ ಆಗಬಾರದೆಂದು ಷಡ್ಯಂತರ ಮಾಡುತ್ತಿದ್ದಾರೆ ಎಂದು ಭಾವುಕರಾಗಿ ನಗರಸಭೆಯ ಅಧ್ಯಕ್ಷೆ ಸುಮಿತ್ರ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಸದಸ್ಯರ ಕೊರತೆ ನಡುವೆ 53 ಲಕ್ಷ ರೂ,ಗಳ ಉಳಿತಾಯ ಬಜೆಟ್ ಮಂಡಿಸಿದ್ದಾರೆ. 16 ಜನರಿಗೆ 11 ತಿಂಗಳ ವೇತನ ನೀಡಿಲ್ಲ, ಕನಿಷ್ಠ ವೇತನ ಪಾವತಿಯಾಗಿಲ್ಲ, ಡೀಸೆಲ್ ಬಾಕಿ, ಎಲೆಕ್ಟ್ರಿಷಿಯನ್ ಗುತ್ತಿಗೆದಾರರ 30 ಲಕ್ಷಕ್ಕೂ ಅಧಿಕವಾಗಿ ಬಾಕಿ ಪಾವತಿಸಬೇಕು, ನಗರಸಭಾ ಸದಸ್ಯರಿಗೆ ಗೌರವಧನ ಇಲ್ಲ ಆದರೂ ಉಳಿತಾಯ ಬಜೆಟ್ ಮಂಡಿಸಿರುವುದು ಹಾಸ್ಯಸ್ಪದ. – ಬಿ.ಅಫ್ಸರ್ ಪಾಷ. ನಗರಸಭೆ ಉಪಾಧ್ಯಕ್ಷ