Advertisement

ಗುಂಡಿ ಮುಚ್ಚಲು ಆರಂಭಿಸಿದ ಮನಪಾ

10:40 AM Jun 20, 2018 | Team Udayavani |

ಮಹಾನಗರ: ಮಳೆಯ ಕಾರಣದಿಂದ ನಗರದ ರಸ್ತೆಗಳಲ್ಲಿ ಕಾಣಿಸಿಕೊಂಡಿರುವ ಅಪಾಯಕಾರಿ ಗುಂಡಿಗಳನ್ನು
ಮುಚ್ಚುವ ಕೆಲಸಕ್ಕೆ ಈಗ ಪಾಲಿಕೆ ಮುಂದಾಗಿದೆ. ‘ಉದಯವಾಣಿ- ಸುದಿನ’ ಕಳೆದ ಎರಡು ವಾರದಿಂದ
ಅಪಾಯಕಾರಿ ಗುಂಡಿಗಳ ಕುರಿತ ವಿಶೇಷ ವರದಿಯನ್ನು ಬರೆದಿದ್ದು, ಮಂಗಳವಾರದಿಂದಲೇ ಗುಂಡಿ ಮುಚ್ಚಲು ಪಾಲಿಕೆ ಶುರುಮಾಡಿದೆ.ಕೊಟ್ಟಾರಚೌಕಿ ವ್ಯಾಪ್ತಿಯಲ್ಲಿರುವ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರವಾಗಿದ್ದ ಹೊಂಡಕ್ಕೆ ತಾತ್ಕಾಲಿಕ ತೇಪೆ ಹಚ್ಚಲಾಯಿತು. ಮಳೆಯ ಮಧ್ಯೆಯೇ ಮನಪಾದ ಕೆಲವು ಕಾರ್ಮಿಕರು ಹೊಂಡ ಮುಚ್ಚುವ ಕೆಲಸದಲ್ಲಿ ತೊಡಗಿದರು. ಪಾಲಿಕೆ ಮೇಯರ್‌ ಭಾಸ್ಕರ್‌, ಮುಖ್ಯಸಚೇತಕ ಶಶಿಧರ ಹೆಗ್ಡೆ ಈ ಸಂದರ್ಭ ಉಪಸ್ಥಿತರಿದ್ದರು.

Advertisement

ಪಾಲಿಕೆ ಎಂಜಿನಿಯರ್‌ಗಳ ಸಭೆ
‘ಸುದಿನ’ ಜತೆಗೆ ಮಾತನಾಡಿದ ಮೇಯರ್‌ ಭಾಸ್ಕರ್‌ ಅವರು, ‘ಉದಯವಾಣಿ ಸುದಿನದಲ್ಲಿ ಬಂದ ವರದಿಯನ್ವಯ ಮಂಗಳವಾರದಿಂದ ಗುಂಡಿ ಮುಚ್ಚುವ ಕೆಲಸವನ್ನು ಆರಂಭಿಸಿದ್ದೇವೆ. ಸುದ್ದಿಯ ಆಧಾರದಂತೆ ಸಾರ್ವಜನಿಕರಿಗೆ ಹೆಚ್ಚು ತೊಂದರೆ ಆಗುವ ರಸ್ತೆಯನ್ನು ಮೊದಲ ಹಂತದಲ್ಲಿ ಕೈಗೊಳ್ಳಲಾಗುವುದು. ಬುಧವಾರ ಪಾಲಿಕೆ ಎಂಜಿನಿಯರ್‌ಗಳ ಸಭೆ ಕರೆದು ಈ ಬಗ್ಗೆ ವಿಶೇಷ ತಂಡ ರಚಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next