Advertisement
ಬಿಬಿಎಂಪಿ ಕೇಂದ್ರ ಕಚೇರಿ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿ ಎಂಬ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲೆಂದರಲ್ಲಿ ಉಗುಳುವುದರಿಂದ ಕೊರೊನಾ, ಕ್ಷಯ ರೋಗ ಸೇರಿದಂತೆ ಇನ್ನಿತರೆ ರೋಗಗಳು ಹರಡಲಿವೆ ಎಂದರು. ನಗರದ ಪಾದಚಾರಿ ಮಾರ್ಗ, ಬಸ್ ನಿಲ್ದಾಣ, ಬಸ್ ತಂಗುದಾಣ, ಟ್ರಾಫಿಕ್ ಸಿಗ್ನಲ್ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಉಗುಳುವುದರಿಂದ ಅಲ್ಲಿ ಸ್ವಚ್ಛತೆ ಹಾಳಾಗುವುದರ ಜತೆಗೆ ಸೌಂದರ್ಯವೂ ಹಾಳಾಗುತ್ತದೆ. ಅಲ್ಲದೆ ನೋಡುಗರಿಗೆ ಕೆಟ್ಟದಾಗಿ ಕಾಣುತ್ತದೆ. ಈನಿಟ್ಟಿನಲ್ಲಿ ಎಲ್ಲೂ ಉಗುಳಬಾರದು ಎಂಬುದರ ಬಗ್ಗೆ ನಾಗರಿಕರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
Related Articles
Advertisement
100 ರೂ. ದಂಡಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು, ಘಟಕ, ಕಾರ್ಯಾಗಾರ ಮತ್ತು ಕಚೇರಿಯ ಪ್ರದೇಶಗಳಲ್ಲಿ ಉಗುಳುವವರಿಗೆ 100 ರೂ. ದಂಡ
ವಿಧಿಸಲಾಗುತ್ತಿದೆ. ಅದರಂತೆ 2020ರ ಜೂನ್ ನಿಂದ 2021ರ ಮಾರ್ಚ್‌ವರೆಗೆ 4,66,500 ರೂ. ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ.
ಅದೇ ರೀತಿ, 2021ರ ಏಪ್ರಿಲ್‌ನಿಂದ 2021ರ ಜೂನ್‌ವರೆಗೆ 17,100 ರೂ. ದಂಡ ವಿಧಿಸಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ. ವಿಶೇಷ ವಾಹನಕ್ಕೆ ಚಾಲನೆ
ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿಷೇಧಿಸುವ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ವಾಹನಕ್ಕೆ ಶುಕ್ರವಾರ ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಆರ್. ಚಂದ್ರಶೇಖರ್, ಕೊರೊನಾ ಮಹಾಮಾರಿಯು ಪ್ರಪಂಚವನ್ನೇ ತಲ್ಲಣ
ಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಅಭಿಯಾನವನ್ನು ಎಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಹಾಗೂ ಈ ಸಂದೇಶವನ್ನು ಎಲ್ಲಾ ಕಡೆಗೂ ಸಾರಬೇಕು ಎಂದುಮನವಿಮಾಡಿದರು. ನಿಗಮದ ಪರಿಸರ ಅಧಿಕಾರಿ ಸತೀಶ್,”Beautiful Bangalore’ ತಂಡದ ಸಂಸ್ಥಾಪಕರಾದ ಒಡೆಟ್ ಕಾತರಕ್ ಹಾಗೂ “ಸಾರೆ ಜಹಾ ಸೆ ಅಚ್ಛಾ’ ತಂಡದ ಸಂಸ್ಥಾಪಕ ನಿರ್ದೇಶಕರಾದ ರಾಜಾ ನರಸಿಂಹನ್ ಹಾಗೂ ಪ್ರೀತಿ ರಾಜಾ ಮತ್ತು ರೋಟರಿ ಕ್ಲಬ್ ವತಿಯಿಂದ ಪ್ರಭು ಕಾಶೀನಾಥ್ ಜಾಗೃತಿ ಮೂಡಿಸಿದರು. ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿಡಿಯೊ ಸಂದೇಶವನ್ನು ಪ್ರದರ್ಶಿಸಲಾಯಿತು.