Advertisement
ಮೆನ್ನಬೆಟ್ಟು ವ್ಯಾಪ್ತಿಯ ರೋಟರ್ಯಾಕ್ಟ್ ಸಂಸ್ಥೆ ಕೆಲವು ವರ್ಷಗಳ ಹಿಂದೆ ಜನಪರ ಕಾಳಜಿಯಿಂದ ಪ್ಲಾಸ್ಟಿಕ್ ಸೌಧ ಕಟ್ಟಿಕೊಟ್ಟಿತ್ತು. ಉತ್ತಮ ರೀತಿಯಲ್ಲಿ ಉಪಯೋಗ ಆಗುತ್ತಿತ್ತು. ಆದರೆ, ಗ್ರಾಮ ಪಂಚಾಯತ್ ನಿರ್ಣಯದಂತೆ ಪ್ಲಾಸ್ಟಿಕ್ ಸೌಧ ಮುಚ್ಚಲಾಗಿದೆ. ಸಾರ್ವಜನಿಕರು ತ್ಯಾಜ್ಯವನ್ನು ಸೌಧದ ಮುಂದೆಯೇ ಎಸೆದು ಹೋಗುತ್ತಿರುವುದು ಈಗಲೂ ನಡೆದಿದೆ. ಕಟೀಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪದವಿ ಕಾಲೇಜಿನ ಸಮೀಪ ನಿರ್ಮಾಣಗೊಂಡ ಪ್ಲಾಸ್ಟಿಕ್ ಸೌಧವನ್ನು ಮುಚ್ಚಲಾಗಿದೆ. ಇದರ ಮುಂದೆಯೂ ಕಸ ಎಸೆದು ಹೋಗುತ್ತಿದ್ದಾರೆ. ಗುತ್ತಕಾಡು ಬಸ್ ನಿಲ್ದಾಣದ ಬದಿಯಲ್ಲಿ ಹಾಗೂ ಗುತ್ತಕಾಡು ಮೂಲಕ ಕೊಲ್ಲೂರುಪದವು ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿಗಳು ಕಂಡುಬರುತ್ತಿವೆ.
ಕಟೀಲು ಹಾಗೂ ಮನ್ನೆಬೆಟ್ಟು ಗ್ರಾ.ಪಂ. ಗಳು ಪ್ರತಿ ಮನೆಯಿಂದ ತಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಯೋಜನೆ ಹಮ್ಮಿಕೊಂಡಿದ್ದು, ಎರಡು ಚಿಕ್ಕ ವಾಹನಗಳ ಮೂಲಕ ದಿನಂಪ್ರತಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಿಲೆಂಜೂರು, ನಡುಗೋಡು ಹಾಗೂ ಕೊಂಡೆಮೂಲ ಗ್ರಾಮಗಳಿದ್ದು, 3 ಪ್ಲಾಟ್‌ಗಳು, 1,495 ಮನೆಗಳು, 113 ಅಂಗಡಿ ಹಾಗೂ ಹೊಟೇಲ್ ಇವೆ. ಪ್ರತಿ ದಿನ ಪ್ಲಾಸ್ಟಿಕ್ ಹಾಗೂ ಕಸ ಸಂಗ್ರಹಿಸಲಾಗುವುದು, ಹಸಿ ಕಸವನ್ನು ಮನೆಗಳಲ್ಲೇ ವೀಲೇವಾರಿ ಮಾಡಲಾಗುತ್ತಿದೆ ಎಂದು ಪಂಚಾಯತ್ ಮೂಲಗಳು ತಿಳಿಸಿವೆ.
Related Articles
Advertisement
ಸಿಸಿ ಕೆಮರಾ ಅಳವಡಿಸುವ ಚಿಂತನೆಮನ್ನೆಬೆಟ್ಟು ಗ್ರಾ.ಪಂ.ನ ರಾಮನಗರದ ಹತ್ತಿರವಿರುವ ಪ್ಲಾಸ್ಟಿಕ್ ಸೌಧವನ್ನು ಮುಚ್ಚಲಾಗಿದೆ. ಕಸ ಹಾಕದಂತೆ
ಸೂಚನಾ ಫಲಕ ಅಳವಡಿಸಲಾಗಿದೆ. ಗ್ರಾಮಸ್ಥರಲ್ಲಿ ಮನವಿ ಮಾಡಲಾಗಿದೆ. ಆದರೂ ಗೋಣಿ ಚೀಲ, ಪ್ಲಾಸ್ಟಿಕ್ ಚೀಲದಲ್ಲಿ ತಂದು ತ್ಯಾಜ್ಯ ಹಾಕುತ್ತಿದ್ದು, ಸಮಸ್ಯೆಯಾಗಿದೆ. ನಮ್ಮ ಗ್ರಾ.ಪಂ. ಮಾತ್ರವಲ್ಲದೆ, ಬೇರೆ ಗ್ರಾ.ಪಂ.ಗಳ ವ್ಯಾಪ್ತಿಯ ನಿವಾಸಿಗಳೂ ಕಸ ಹಾಕುತ್ತಿರುವ ಬಗ್ಗೆ ಸಂಶಯವಿದ್ದು, ಇಲ್ಲಿ ಸಿಸಿ ಕೆಮರಾ ಅಳವಡಿಸುವ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
–ರಮ್ಯಾ, ಪಿಡಿಒ,ಮನ್ನೆಬೆಟ್ಟು ಗ್ರಾ.ಪಂ. ಮನೆ-ಮನೆ ತ್ಯಾಜ್ಯ ಸಂಗ್ರಹ ಕಷ್ಟ ಸಾಧ್ಯ
ನಮ್ಮ ಗ್ರಾಮಗಳು ದೂರವಿದ್ದು, ಮನೆ- ಮನೆಗಳಿಂದ ತ್ಯಾಜ್ಯ ಸಂಗ್ರಹ ಕಷ್ಟ ಸಾಧ್ಯ. ಆದುದರಿಂದ ಪೇಟೆಯ ವ್ಯಾಪ್ತಿಯ
ಅಂಗಡಿ, ಹೊಟೇಲ್, ಪ್ಲಾಟ್‌ನಲ್ಲಿ ಹಸಿ ಹಾಗೂ ಒಣ, ಪ್ಲಾಸ್ಟಿಕ್ ಕಸಗಳನ್ನು ಪಡೆದು ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
–ಅರುಣ್ ಪ್ರದೀಪ್ ಡಿ’ಸೋಜಾ,
ಪಿಡಿಒ,ಕಿನ್ನಿಗೋಳಿ ಗ್ರಾ.ಪಂ. ಕಸ ವಿಲೇವಾರಿ ದರ ಪಟ್ಟಿ
ಕಿನ್ನಿಗೋಳಿಯಲ್ಲಿ ಕಸ ವಿಲೇವಾರಿಗೆ ದೊಡ್ಡ ಅಂಗಡಿ, ಹೊಟೇಲ್‌ಗಳಿಗೆ ದಿನವಹಿ 10 ರೂ., ಸಣ್ಣ ಅಂಗಡಿ – 5 ರೂ., ಫ್ಯಾನ್ಸಿ ಇನ್ನಿತರ – 1 ರೂ. ಸಂಗ್ರಹಿಸಲಾಗುತ್ತಿದೆ. ದರ ಸಂಗ್ರಹ ವಾರ್ಷಿಕವಾಗಿ ನಡೆಯುತ್ತಿದೆ.