ಬೆಳ್ತಂಗಡಿ: ಜಗಕ್ಕೆಲ್ಲ ಪ್ರೀತಿ-ಶಾಂತಿಯ ಸಂದೇಶವನ್ನು ಸಾರುತ್ತಾ ಮಗದೊಮ್ಮೆ ಕ್ರಿಸ್ಮಸ್ ಹಬ್ಬ ಬಂತು. ನಾಡಿನ ಸಮಸ್ತ ಜನರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಕೋರುತ್ತೇನೆ.
ಕ್ರಿಸ್ಮಸ್ ಸಂತೋಷದ ಸಮಯವಾಗಿದೆ. ದೇವರ ಮನುಷ್ಯ ಅವತರಿಸಿದ ದಿನದ ಆಚರಣೆಯಾಗಿದೆ. ದೇವರ ವಚನ ನಮ್ಮ ನಡುವೆ ವಾಸಿಸಲು ಮಾನವ ರೂಪವನ್ನು ಪಡೆದುಕೊಂಡ ಸಂತಸದ ಸ್ಮರಣೆ. ದೇವರ ವಚನದ ಮನುಷ್ಯ ರೂಪವಾದ ಪ್ರಭು ಯೇಸು ಕ್ರಿಸ್ತರು ಕಲಿಸಿದ ಹಾದಿಯಲ್ಲಿ ಮುನ್ನಡೆಯಲು ಕ್ರಿಸ್ಮಸ್ ನಮ್ಮನ್ನು ಆಹ್ವಾನಿಸುತ್ತದೆ.
ಕ್ರಿಸ್ಮಸ್ ಸಮಯವು ಉಡುಗೊರೆಗಳ ವಿನಿಮಯದ ಕಾಲ. ದೇವರ ಮಾನವಕುಲಕ್ಕಿರುವ ಅತ್ಯಂತ ಅಮೂಲ್ಯ ಉಡುಗೊರೆಯೇ ದೇವರ ಮನುಷ್ಯವತಾರ. ಇದು ಸಹಜೀವಿಗಲ್ಲಿ ದೈವಿಕತೆಯ ಸಾನಿಧ್ಯವನ್ನು ಗುರುತಿಸಿ ಪ್ರೀತಿ ಮತ್ತು ಸಂತೋಷ ಹಂಚಿಕೊಳ್ಳುವ ಸಂದರ್ಭ. ನಾವು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವಾಗ ಮತ್ತು ಹಬ್ಬದ ಸಂತಸ ಹಂಚಿಕೊಳ್ಳುವಾಗ, ಜಗತ್ತಿಗೆ ಭರವಸೆಯನ್ನು ನೀಡಿ, ನಮ್ಮ ನಡುವೆ ವಾಸಿಸಲು ಬಂದ ಪ್ರಭು ಕ್ರಿಸ್ತ ಯೇಸುವಿನ ಸಾನ್ನಿಧ್ಯವನ್ನು ಅನುಭವಿಸುತ್ತೇವೆ.
ಸರ್ವ ಜನರು ಪ್ರಭು ಕ್ರಿಸ್ತ ಯೇಸುವಿನ ಪ್ರೀತಿಯ ಬೋಧನೆಯನ್ನು ಸ್ವೀಕರಿಸುವ ಮೂಲಕ ನಾಡಿನಲ್ಲಿ ಸುಖ-ಶಾಂತಿ ನೆಲೆಯಾಗಲಿ ಎಂದು ಪ್ರಾರ್ಥಿಸುತ್ತೇನೆ. ಸರ್ವರಿಗೂ ಕ್ರಿಸ್ಮಸ್ ಮತ್ತು ಹೊಸವರುಷದ ಹಬ್ಬದ ಶುಭಾಶಯಗಳು
– ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ
ಬಿಷಪ್, ಬೆಳ್ತಂಗಡಿ ಧರ್ಮಪ್ರಾಂತ