Advertisement
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಇರುವ ಕ್ರೈಸ್ತ ಅಭಿವೃದ್ಧಿ ಪರಿಷತ್ತನ್ನು ಅಭಿವೃದ್ಧಿ ನಿಗಮವಾಗಿ ಮಾಡಬೇಕೆಂದು 4 ವರ್ಷದಿಂದ ಆಗ್ರಹಿಸಲಾಗುತ್ತಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಿದ್ದವು. ಅಧಿವೇಶನದಲ್ಲಿ ಬಜೆಟ್ ಚರ್ಚೆಯ ಸಂದರ್ಭ ತಾನು ವಿಧಾನ ಪರಿಷತ್ನಲ್ಲಿ ಈ ಬಗ್ಗೆ ಪ್ರಸ್ತಾವಿಪಿಸಿದೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಯವರು ನಿಗಮ ರಚನೆಗೆ ತಾತ್ವಿಕ ಒಪ್ಪಿಗೆ ನೀಡಿದರು ಎಂದರು.ಶೀಘ್ರವೇ ಪೂರಕ ಪ್ರಕ್ರಿಯೆಗಳನ್ನು ಕೈಗೊಂಡು ನಿಗಮ ರಚಿಸಬೇಕು. ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಕ್ರೈಸ್ತ ಅಭಿವೃದ್ಧಿ ಪರಿಷತ್‌ಗೆ ನೀಡಿದ್ದ 200 ಕೋ.ರೂ.ಗೆ ಹೆಚ್ಚುವರಿಯಾಗಿ 100 ಕೋ.ರೂ. ಸೇರಿಸಿ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮನೆ -ಮಳಿಗೆ ಯೋಜನೆ ಕೋಮು ಗಲಭೆ, ಪ್ರಾಕೃತಿಕ ವಿಕೋಪದಿಂದ ಮನೆ, ವ್ಯಾಪಾರ ಸ್ಥಳ ಕಳೆದುಕೊಂಡ ಅಲ್ಪಸಂಖ್ಯಾಕರಿಗೆ, ಸನ್ನಡತೆ ಆಧಾರದಲ್ಲಿ ಕಾರಾಗೃಹ ದಿಂದ ಬಿಡುಗಡೆಗೊಂಡ ಅಲ್ಪ ಸಂಖ್ಯಾಕ ಕೈದಿಗಳಿಗೆ ಹಾಗೂ ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿ ಆರೋಪ ಸಾಬೀತು ಆಗದೆ ಬಿಡುಗಡೆಗೊಂಡ ಅಲ್ಪಸಂಖ್ಯಾಕ ನಿರಪ ರಾಧಿಗಳಿಗೆ 10 ಲಕ್ಷ ರೂ. ಸಾಲ ಸೌಲಭ್ಯ
ನೀಡಲಾಗುತ್ತಿದೆ ಎಂದರು. ಲೋಕಸಭಾ ಚುನಾ ವಣೆಗೆ ಸಂಬಂಧಪಟ್ಟು ಕಾಂಗ್ರೆಸ್ 28 ಸ್ಥಾನ ಗಳಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಇರಿಸಿಕೊಳ್ಳಲಾಗಿದೆ ಎಂದರು. ಸಂತೋಷ್ ಕುಮಾರ್ ಶೆಟ್ಟಿ, ಹಬೀಬ್ ಕಣ್ಣೂರು, ಮುದಾಸ್ಸಿರ್ ಕುದ್ರೋಳಿ, ಪುನೀತ್, ಮನುರಾಜ್, ಐ. ಮೋನು, ಸತೀಶ್ ಪೆಂಗಾಲ್, ನಜೀರ್ ಬಜಾಲ್ ಉಪಸ್ಥಿತರಿದ್ದರು.