Advertisement

ವಿಂಡೀಸ್‌ ಟಿ20 ತಂಡಕ್ಕೆ ಮರಳಿದ ಗೇಲ್‌

03:45 AM Jul 06, 2017 | |

ಸಬೀನಾ ಪಾರ್ಕ್‌: ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರು ಪ್ರವಾಸಿ ಭಾರತ ತಂಡದೆದುರಿನ ಏಕೈಕ ಟ್ವೆಂಟಿ 20 ಪಂದ್ಯಕ್ಕಾಗಿ ವೆಸ್ಟ್‌ಇಂಡೀಸ್‌ ತಂಡಕ್ಕೆ ಮರಳಿದ್ದಾರೆ. ಈ ಪಂದ್ಯ ರವಿವಾರ ಸಬೀನಾ ಪಾರ್ಕ್‌ನಲ್ಲಿ ನಡೆಯಲಿದೆ.

Advertisement

ಟ್ವೆಂಟಿ20 ಮಾದರಿಯ ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಆಗಿರುವ ಗೇಲ್‌ 35.32 ಸರಾಸರಿಯಂತೆ 1519 ರನ್‌ ಗಳಿಸಿದ್ದಾರೆ. ಅವರು ರನ್ನಿಗಾಗಿ ಒದ್ದಾಡುತ್ತಿರುವ ಲೆಡ್ಲ್ ಸಿಮನ್ಸ್‌ ಬದಲಿಗೆ ತಂಡದಲ್ಲಿ ಸೇರಿಕೊಂಡಿದ್ದಾರೆ. ಇತ್ತೀಚೆಗಿನ ಅಫ್ಘಾನಿಸ್ಥಾನ ವಿರುದ್ಧದ ಟ್ವೆಂಟಿ20 ಸರಣಿಯಲ್ಲಿ ಸಿಮನ್ಸ್‌ ರನ್‌ ಗಳಿಸಲು ಬಹಳಷ್ಟು ಒದ್ದಾಡಿದ್ದರು.

ತವರಿನ ಮೈದಾನ ಸಬೀನಾ ಪಾರ್ಕ್‌ನಲ್ಲಿ ಇದು ಗೇಲ್‌ ಅವರ ಮೊದಲ ಟ್ವೆಂಟಿ20 ಪಂದ್ಯವಾಗಿದೆ. ಟ್ವೆಂಟಿ20ಯಲ್ಲಿ ಎರಡು ಶತಕ ಬಾರಿಸಿರುವ ಗೇಲ್‌ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ 2016ರ ಟ್ವೆಂಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಈ ಹಿಂದಿನ ಟ್ವೆಂಟಿ20  ಪಂದ್ಯವನ್ನಾಡಿದ್ದರು.

ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಆಲ್‌ರೌಂಡರ್‌ ಜಾಸನ್‌ ಹೋಲ್ಡರ್‌ ಅವರಿಗೆ ಮತ್ತೆ ವಿಶ್ರಾಂತಿ ನೀಡಲಾಗಿದೆ. ಅವರ ಬದಲು ಕಾರ್ಲೋಸ್‌ ಬ್ರಾತ್‌ವೇಟ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಟ್ವೆಂಟಿ20 ತಂಡಕ್ಕೆ ಮರಳಿದ ಗೇಲ್‌ ಅವರನ್ನು ನಾವು ಸ್ವಾಗತಿಸುತ್ತೇವೆ. ಈ ಮಾದರಿಯ ಕ್ರಿಕೆಟ್‌ನಲ್ಲಿ ಅವರೊಬ್ಬ ಅಸಾಧಾರಣ ಆಟಗಾರ. ಅಗ್ರ ಕ್ರಮಾಂಕದಲ್ಲಿ ಅವರು ನಮ್ಮ ತಂಡದ ಬಲ ಹೆಚ್ಚಿಸುವ ಸಾಧ್ಯತೆಯಿದೆ ಎಂದು ವೆಸ್ಟ್‌ಇಂಡೀಸ್‌ ಆಯ್ಕೆ ಸಮಿತಿಯ ಚೇರ್ಮನ್‌ ಕೋರ್ಟ್ನಿ ಬ್ರೌನ್‌ ಹೇಳಿದ್ದಾರೆ. ಶ್ರೇಷ್ಠ ಗುಣಮಟ್ಟದ ಟೀಮ್‌ ಇಂಡಿಯಾ ವಿರುದ್ಧ ಮತ್ತು ಗೇಲ್‌ ಅವರ ತವರಿನ ಮೈದಾನದಲ್ಲಿ ಆಡುವ ಅವಕಾಶ ನಮಗೆ ಸಿಕ್ಕಿದೆ ಎಂದವರು ತಿಳಿಸಿದರು.

Advertisement

ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡ 1-2 ಹಿನ್ನಡೆಯಲ್ಲಿದೆ. ಸರಣಿ ನಿರ್ಣಾಯಕ ಐದನೇ ಪಂದ್ಯ ಗುರುವಾರ ನಡೆಯಲಿದೆ.

ವೆಸ್ಟ್‌ಇಂಡೀಸ್‌ ತಂಡ: ಕಾರ್ಲೋಸ್‌ ಬ್ರಾತ್‌ವೇಟ್‌ (ನಾಯಕ), ಸಾಮ್ಯುಯೆಲ್‌  ಬದ್ರಿ, ರಾನ್ಸ್‌ಫೋರ್ಡ್‌ ಬೀಟನ್‌, ಕ್ರಿಸ್‌ ಗೇಲ್‌, ಎವಿನ್‌ ಲೆವಿಸ್‌, ಜಾಸನ್‌ ಮೊಹಮ್ಮದ್‌, ಸುನೀಲ್‌ ನಾರಾಯಣ್‌, ಕೈರನ್‌ ಪೋಲಾರ್ಡ್‌, ರೋವ¾ನ್‌ ಪೊವೆಲ್‌, ಮಾರ್ಲಾನ್‌ ಸಾಮ್ಯುಯೆಲ್ಸ್‌, ಜೆರೋಮ್‌ ಟಯ್ಲರ್‌, ಚಾಡ್ವಿಕ್‌ ವಾಲ್ಟನ್‌, ಕೇಸ್ರಿಕ್‌ ವಿಲಿಯಮ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next