Advertisement

ಪುನೀತ್‌ ರಾಜಕುಮಾರ್‌ ಕೈಯಲ್ಲಿ ‘ಚೌಕಾಬಾರ’ಪೋಸ್ಟರ್

11:23 AM Feb 12, 2021 | Team Udayavani |

“ಶ್ರೀಲಕ್ಷ್ಮಿ ಗಣೇಶ್‌ ಪ್ರೊಡಕ್ಷನ್ಸ್‌’ ಮತ್ತು “ನವಿ ನಿರ್ಮಿತಿ’ ಬ್ಯಾನರ್‌ನಲ್ಲಿ ನಿರ್ಮಾಣವಾದ “ಚೌಕಾಬಾರ’ ಚಿತ್ರದ ಟೈಟಲ್‌ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಯಿತು. ವಿಕ್ರಂ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಚೌಕಾಬಾರ’ದ ಟೈಟಲ್‌ ಪೋಸ್ಟರ್‌ ಅನ್ನು ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

Advertisement

ಇದೇ ವೇಳೆ ಮಾತನಾಡಿದ ಪುನೀತ್‌ ರಾಜಕುಮಾರ್‌, “ಚಿಕ್ಕಂದಿನಿಂದಲೂ ಸಿನಿಮಾ ನಿರ್ಮಾಣ ಮಾಡಬೇಕೆಂದ ಆಸೆ ಇತ್ತು. ಮನೆಯಲ್ಲಿ ಅಮ್ಮ ಸಾಕಷ್ಟು ಚಿತ್ರ ನಿರ್ಮಿಸಿದ್ದರು. ಈಗಾಗಲೇ ಕೆಲವು ಸಿನಿಮಾ ಮಾಡಿದ್ದೇನೆ. ಒಳ್ಳೇ ಕಂಟೆಂಟ್‌ ಸಿಕ್ಕರೆ ಮುಂದೆಯೂ ಸದಭಿರುಚಿ ಸಿನಿಮಾ ಮಾಡುತ್ತೇನೆ’ ಎಂದರು.

ಇದನ್ನೂ ಓದಿ:ತೆರೆಮೇಲೆ ಐವರು ನಿರ್ದೇಶಕರ ಕನಸು: ಇಂದು ಐದು ಚಿತ್ರಗಳು ರಿಲೀಸ್‌

ಇನ್ನು “ಚೌಕಾಬಾರ’ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿಕ್ರಂ ಸೂರಿ, “ಇದೊಂದು ಕಾದಂಬರಿ ಆಧರಿತ ಸಿನಿಮಾ. ಮಣಿ ಆರ್‌. ರಾವ್‌ ಕಾದಂಬರಿಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದೇವೆ. ಪ್ರೀತಿ, ಸ್ನೇಹ ಮತ್ತು ಸಂಬಂಧದ ಸುತ್ತ ಇಡೀ ಸಿನಿಮಾ ಸಾಗಲಿದೆ. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣ ಗೊಂಡಿದ್ದು, ಕಳೆದ ವರ್ಷವೇ ಸಿನಿಮಾ ರಿಲೀಸ್‌ ಮಾಡುವ ಪ್ಲಾನ್‌ ಇತ್ತು. ಆದರೆ, ಕೊರೊನಾದಿಂದಾಗಿ ರಿಲೀಸ್‌ ಸಾಧ್ಯವಾಗಲಿಲ್ಲ. ಮಾರ್ಚ್‌ ವೇಳೆಗೆ ಸಿನಿಮಾದ ಆಡಿಯೋ ರಿಲೀಸ್‌ ಆಗಲಿದ್ದು, ಶೀಘ್ರದಲ್ಲಿಯೇ ಸಿನಿಮಾ ರಿಲೀಸ್‌ ಮಾಡಲಿದ್ದೇವೆ’ ಎಂದರು

“ಚೌಕಾಬಾರ’ ಚಿತ್ರದಲ್ಲಿ ವಿಹಾನ್‌ ಪ್ರಭಂಜನ್‌, ನಮಿತಾ ರಾವ್‌, ಕಾವ್ಯಾ ರಮೇಶ್‌, ಸುಜಯ್‌ ಗೌಡ, ಸಂಜಯ್‌ ಸೂರಿ, ಸುಮಾ ರಾಜ್‌, ಡಾ. ಸೀತಾ ಕೋಟೆ, ಕೀರ್ತಿ ಬಾನು, ಮಧೂ ಹೆಗಡೆ, ಶಶಿಧರ್‌ ಕೋಟೆ, ಪ್ರಥಮಾ ಪ್ರಸಾದ್‌. ದಮಯಂತಿ ನಾಗರಾಜ್‌, ಆ್ಯಡಮ್‌ ಪಾಷಾ, ಪ್ರದೀಪ್‌, ಕಿರಣ್‌ ವಟಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ರೂಪಾ ಪ್ರಭಾಕರ್‌ ಸಂಭಾಷಣೆ, ಅಶ್ವಿ‌ನ್‌ ಕುಮಾರ್‌ ಸಂಗೀತ, ರವಿರಾಜ್‌ ಹೊಂಬಳ ಛಾಯಾಗ್ರಹಣ, ಶಶಿಧರ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಚೈತ್ರಾ, ವ್ಯಾಸರಾಜ್‌ ಸೋಸಲೆ, ನಕುಲ್‌ ಅಭಯಂಕರ್‌, ರಮ್ಯ ಭಟ್‌, ಸಿದ್ಧಾರ್ಥ್ ಬೆಳಮನ್ನು ದನಿಯಾಗಿದ್ದಾರೆ.

Advertisement

ಚಿತ್ರದಲ್ಲಿನ ಹಾಡುಗಳಿಗೆ ಹೆಚ್.ಎಸ್. ವೆಂಕಟೇಶ್‌ ಮೂರ್ತಿ, ಬಿ.ಆರ್. ಲಕ್ಷ್ಮಣ ರಾವ್‌, ವಿಕ್ರಂ ಸೂರಿ, ಹರೀಶ್‌ ಭಟ್‌, ಅಲೋಕ್‌ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಕಾರವಾರ, ದಾಂಡೇಲಿ, ಮೈಸೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next