Advertisement

ಚಿತ್ತಾಪುರದಲ್ಲಿ ಕಮಲ ಅರಳಿಸಲು ತಂತ್ರ

03:15 PM Jul 04, 2021 | Team Udayavani |

ವಾಡಿ: ಜಿಪಂ, ತಾಪಂ ಚುನಾವಣೆಗೆ ಕ್ಷೇತ್ರವಾರು ಮೀಸಲು ಪ್ರಕಟಗೊಳ್ಳುತ್ತಿದ್ದಂತೆ ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ದಿ|ವಾಲ್ಮೀಕಿ ನಾಯಕ ಪುತ್ರ ವಿಠuಲ ನಾಯಕ ರಾಜಕೀಯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

Advertisement

ಹಿರಿಯ ಮುಖಂಡರಾಗಿದ್ದ ವಾಲ್ಮೀಕಿ ನಾಯಕ ಅಗಲಿದ ಮೇಲೆ ಬಿಜೆಪಿಗೆ ನಾಯಕರಾರು ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮೂಡುತ್ತಿರುವಾಗಲೇ ರಾಜಕೀಯ ಕಣಕ್ಕೆ ಧುಮುಕಿರುವ ಯುವ ಮುಖಂಡ ವಿಠuಲ ನಾಯಕ ಕಾಂಗ್ರೆಸ್‌ ಪಕ್ಷದ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಪಣ ತೊಟ್ಟಿದ್ದಾರೆ. ಶಾಸಕ ಪ್ರಿಯಾಂಕ್‌ ಖರ್ಗೆ ವಿರುದ್ಧ ಹೋರಾಡಲು ರಾಜ್ಯ ನಾಯಕರ ಮಾರ್ಗದರ್ಶನಕ್ಕಾಗಿ ಈಗಿನಿಂದಲೇ ಸುತ್ತಾಟ ಆರಂಭಿಸಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅವರನ್ನು ಶನಿವಾರ ಗಾಣಗಾಪುರದ ತೋಟದ ಮನೆಯಲ್ಲಿ ಸ್ಥಳೀಯ ಮುಖಂಡರೊಂದಿಗೆ ಭೇಟಿ ಮಾಡಿದ್ದ ವಿಠuಲ ನಾಯಕ, ಕ್ಷೇತ್ರ ರಾಜಕಾರಣ ಕುರಿತು ಸುದೀರ್ಘ‌ ಮಾತುಕತೆ ನಡೆಸುವ ಮೂಲಕ ಜಿಪಂ-ತಾಪಂ ಚುನಾವಣೆ ಎದುರಿಸಲು ಮಾರ್ಗದರ್ಶನ ಕೋರಿದ್ದಾರೆ.

ಅಲ್ಲದೇ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಚುನಾವಣೆ ಗೆಲ್ಲುವವರೆಗೂ ಜತೆಗಿದ್ದು, ಪ್ರಚಾರ ತಂತ್ರದ ಸೂತ್ರ ತಿಳಿಸುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ. ಚಿತ್ತಾಪುರದ ಮುಂದಿನ ಶಾಸಕ ಸ್ಥಾನದ ಮೇಲೂ ಕಣ್ಣಿಟ್ಟಿರುವ ವಿಠuಲ ನಾಯಕ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಸಚಿವರಾದ ಕೆ.ಎಸ್‌. ಈಶ್ವರಪ್ಪ, ಮುರುಗೇಶ ನಿರಾಣಿ, ಸಂಸದ ಡಾ| ಉಮೇಶ ಜಾಧವ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next