Advertisement

karnataka Polls: ಚಿತ್ತಾಪುರದಲ್ಲಿ ಅಪರಾಧ ಹಿನ್ನೆಲೆಯ ಮಣಿಕಂಠ ರಾಠೋಡಗೆ ಬಿಜೆಪಿ ಟಿಕೆಟ್

12:02 PM Apr 12, 2023 | Team Udayavani |

ವಾಡಿ ( ಚಿತ್ತಾಪುರ): ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಹಾಗೂ ರಾಜ್ಯದ ಗಮನ ಸೆಳೆದಿರುವ ಜಿಲ್ಲೆಯ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ  ಅಪರಾಧ ಹಿನ್ನೆಲೆ ಪಟ್ಟಿಯಲ್ಲಿರುವ ಮಣಿಕಂಠ ರಾಠೋಡಗೆ ಬಿಜೆಪಿ ಟಿಕೆಟ್ ನೀಡಿದ್ದು, ಪ್ರಬಲ ಪೈಪೋಟಿಗೆ ಮುಂದಾಗಲಾಗಿದೆ.

Advertisement

ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರದ ಮೂಲಕ ಮುಜುಗರ ಉಂಟು ಮಾಡುತ್ತಾ ಬಂದಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಈ ಸಲ ಸೋಲಿಸಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಮುಂದಾಗಿದ್ದರಿಂದ ಅಭ್ಯರ್ಥಿ ಯಾರಾಗುತ್ತಾರೆಂಬ ಕುತೂಹಲ ಬಹಳವಿತ್ತು.‌ ಹೀಗಾಗಿ ಎಲ್ಲ ಅಳೆದು ತೂಗಿ ಮಣಿಕಂಠ ರಾಠೋಡಗೆ ಮಣೆ ಹಾಕಲಾಗಿದೆ.

ಕಳೆದ ಏಳು ತಿಂಗಳ ಹಿಂದೆ ವಿವಿಧ ಪ್ರಕರಣಗಳ ಆಧಾರದ ಮೇಲೆ ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತರು ಅಪರಾಧ ಹಿನ್ನೆಲೆ ಪಟ್ಟಿ ರೂಪಿಸಿದ್ದರು.‌ ತದನಂತರ ಇದಕ್ಕೆ ಮಣಿಕಂಠ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.‌

ಇದನ್ನೂ ಓದಿ: Punjab Military: ಬಟಿಂಡಾ ಸೇನಾ ಘಟಕದಲ್ಲಿ ಗುಂಡಿನ ದಾಳಿ; ನಾಲ್ವರು ಯೋಧರ ದುರಂತ ಅಂತ್ಯ

ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ ಅವರಿಗೆ ಬಿಜೆಪಿ ಟಿಕೇಟ್ ಪಕ್ಕಾ ಎಂದು ಬಲವಾದ ಚರ್ಚೆ ನಡೆಯುತ್ತಿದ್ದಾಗಲೇ ಬಿಜೆಪಿ ಬಿಗ್ ಶಾಕ್ ನೀಡಿದೆ. ಕಳೆದ ಒಂದು ವರ್ಷದಿಂದ ಚಿತ್ತಾಪುರ ಕ್ಷೇತ್ರದಲ್ಲಿ ಹಗಲಿರಳು ಓಡಾಟ ನಡೆಸಿದ್ದ ಮಣಿಕಂಠ ರಾಠೋಡ, ಯವಜನರ ಮನದಲ್ಲಿ ಮನೆಮಾಡುವ ಮೂಲಕ ಕಳೆದ ಗಮನ ಸೆಳೆದಿದ್ದರು.‌ ಪ್ರಮುಖವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ದ ಕೆಲ ದಾಖಲೆಗಳೊಂದಿಗೆ ಮಣಿಕಂಠ ರಾಠೋಡ ಟೀಕಾ ಪ್ರಹಾರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಹ ನಡೆದಿದ್ದವು.

Advertisement

ಹತ್ತಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಣಿಕಂಠಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರಿಯಾಂಕ್ ಖರ್ಗೆಗೆ ಕಳೆದ ಒಂದು ವರ್ಷದಿಂದ ಕಂಠಕವಾಗಿ ಕಾಡುತ್ತಿದ್ದ ಮಣಿಕಂಠ, ಅಭ್ಯರ್ಥಿಯಾದರೆ ಪ್ರಬಲ ಪೈಪೋಟಿ ನೀಡಬಹುದು. ಖರ್ಗೆ ಕುದುರೆಯನ್ನು ಕಟ್ಟಿಹಾಕಬಹುದು ಎಂಬ ಲೆಕ್ಕಾಚಾರದಡಿ ಮಣಿಕಂಠ ಅವರನ್ನು ಅಭ್ಯರ್ಥಿಯನ್ನಾಗಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next