ಚಿತ್ರಾಪುರ: ಅಸುರರಿಂದ ದುರಿತಗಳು ಹೆಚ್ಚಾದಾಗ ಮಾತೆ ಶ್ರೀ ದುರ್ಗಾಪರಮೇಶ್ವರೀ ನಿಗ್ರಹ ಮಾಡಿದಂತೆ, ಪ್ರಸಕ್ತ ಸಮಾಜದಲ್ಲಿ ನಮ್ಮ ಧರ್ಮಕ್ಕೆ ಧಕ್ಕೆಯಾದಾಗ ಇಂತಹ ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಅಲ್ಲಿ ದೇವರ ಶಕ್ತಿ ಹೆಚ್ಚುವುದರಿಂದ ಧರ್ಮಕ್ಕೆ ಜಯವಾಗುತ್ತದೆ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಚಿತ್ರಾಪುರ ಮಠದಲ್ಲಿ ನಡೆಯುತ್ತಿರುವ ಬ್ರಹ್ಮಕಲಶಾಭೀಷೇಕ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವವಚನ ನೀಡಿದರು.
ದೇವಾಲಯ ಸನಾತನ ಹಿಂದೂ ಸಂಸ್ಕೃತಿಯ ಪ್ರತೀಕ. ದೇವರ ಭಕ್ತಿಯಿಂದ ಧರ್ಮದ ಪುನರುತ್ಥಾನ ಸಾಧ್ಯ ಎಂದರು. ಚಿತ್ರಾಪುರಮಠದ ಶ್ರೀ ವಿದ್ಯೆàಂದ್ರ ತೀರ್ಥ ಸ್ವಾಮೀಜಿ ಆಶೀರ್ವವಚನವಿತ್ತರು.
ಸುರತ್ಕಲ್ ಹೋಬಳಿ ಉಪತಹಾಶೀಲ್ದಾರ್ ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಣ್ಣೀರುಬಾವಿ ಮೊಗವೀರ ಸಭಾ ಅಧ್ಯಕ್ಷ ಲೀಲಾಧರ್ ತಣ್ಣೀರುಬಾವಿ, ಮಂಗಳೂರು ಬಂದರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಂಘದ ಉಪಾಧ್ಯಕ್ಷ ಬಾಬು ಸಾಲ್ಯಾನ್, ವಿಎಚ್‌ಎಸ್ ಅಧ್ಯಕ್ಷ ಜಯಚಂದ್ರ ಹತ್ವಾರ್ ಹೊಸಬೆಟ್ಟು, ಉದ್ಯಮಿ ಕೃಷ್ಣ ಶೆಟ್ಟಿ ಶ್ರೀದ್ವಾರ, ಹೊಸಬೆಟ್ಟು ಶ್ರೀ ಮುಖ್ಯ ಪ್ರಾಣಮಠದ ಮೋಹನ್ ದಾಸ್ ಎಚ್., ಬೈಕಂಪಾಡಿ ಕೈಗಾರಿಕೆ ಪ್ರದೇಶದ ಬದವಿದೆ ಶ್ರೀ ವಿಶ್ವನಾಥ ದೇವಸ್ಥಾನದ ವಿಶ್ವೇಶ್ವರ ಬದವಿದೆ, ಚಿತ್ರಾಪುರ ಶ್ರೀ ನವದುರ್ಗಾ ಸೇವಾ ವೃಂದದ ಅಧ್ಯಕ್ಷ ಸುರೇಶ್ ಸಿ., ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ಭಜನಾಮಂಡಳಿಯ ಹರೀಶ್ ಭಟ್, ಉ ದ್ಯಮಿಗಳಾ ದ ಸುರೇಶ್ ಕುಮಾರ್, ನಿಶ್ಚಲ್ ನಿಖೀತ್, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ| ಮೂ| ಐ. ರಮಾನಂದ ಭಟ್ ಧಾರ್ಮಿಕ ಉಪನ್ಯಾಸವಿತ್ತರು. ಹರೀಶ್ಚಂದ್ರ ಆರ್. ಬೈಕಂಪಾಡಿ, ಯಶವಂತ ಬೋಳೂರು ನಿರೂಪಿಸಿದರು.
ಶನಿವಾರ ಇಲ್ಲಿನ ಚಿತ್ರಾಪುರ ಮಠದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಿಗೆ ಬ್ರಹ್ಮಕಲಶಾಭಿಷೇಕ ಜರಗಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ರವಿವಾರದ ಕಾರ್ಯಕ್ರಮ
ಮಾ. 12ರಂದು ಬೆಳಗ್ಗೆ ಚಂಡಿಕಾ ಯಾಗ, ಮಧ್ಯಾಹ್ನ ಮಹಾಪೂಜೆ, ಸಂಜೆ ಭಜನೆ ಹಾಗೂ 5ಕ್ಕೆ ಸಾಮೂಹಿಕ ಕುಂಕುಮಾರ್ಚನೆ, 6ರಿಂದ ಧಾರ್ಮಿಕ ಸಭೆ, 7.30ರಿಂದ ಶಿವಪುರ್ಸದ ಬಬ್ಬರ್ಯೆ ನಾಟಕ ನಡೆಯಲಿದೆ. ಸೋಮವಾರ ಬೆಳಗ್ಗೆ ಶ್ರೀ ದುರ್ಗಾಪರಮೆಶ್ವರೀ ದೇವಿಗೆ ಬ್ರಹ್ಮಕಲಶೋತ್ಸವ ನೆರವೇರಲಿದೆ.
ಇದನ್ನೂ ಓದಿ: ದೆಹಲಿ ಅಬಕಾರಿ ಹಗರಣ; ಇಡಿ ತಮ್ಮ ಹೇಳಿಕೆಗಳನ್ನು ನಕಲಿ ಮಾಡಿದೆ : ಪಿಳ್ಳೈ ಆರೋಪ