Advertisement

ಸಾರ್ವಜನಿಕರಿಗೆ ಪಿಪಿಇ ಕಿಟ್‌ ವಿತರಣೆ

01:05 PM Apr 16, 2020 | Naveen |

ಚಿತ್ರದುರ್ಗ: ಕೋವಿಡ್‌-19 ಹಾವಳಿಗೆ ತತ್ತರಿಸಿರುವ ಜನತೆಗೆ ನೆರವಾಗುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೇದಾಂತ ಕಬ್ಬಿಣದ ಅದಿರು ಉದ್ಯಮ ಸ್ಯಾನಿಟೈಸರ್‌, ಮಾಸ್ಕ್, ಪಿಪಿಇ ಕಿಟ್‌ ನೀಡಿದೆ.

Advertisement

ಜಿಲ್ಲಾಧಿಕಾರಿ ಕಚೇರಿ ಮೂಲಕ 500 ಸ್ಯಾನಿಟೈಸರ್‌ ಬಾಟಲಿ, 2500 ಟ್ರಿಪಲ್‌ ಲೇಯರ್‌ ಎನ್‌-95 ಮಾಸ್ಕ್, 500 ಪಿಪಿಇ ಕಿಟ್‌ ಹಾಗೂ ತುರ್ತು ಸೇವೆಗಾಗಿ ಒಂದು ಅಂಬ್ಯುಲೆನ್ಸ್‌ ನೀಡಲಾಗಿದೆ. ಇದರೊಟ್ಟಿಗೆ ಭೀಮಸಮುದ್ರ ಹೋಬಳಿ ಭಾಗದ ಸ್ವಸಹಾಯ ಸಂಘದ ಮಹಿಳೆಯರು ಕೈಯಿಂದ ತಯಾರಿಸಿದ ಮೂರು ಲೇಯರ್ನ್ 600 ಬಟ್ಟೆ ಮಾಸ್ಕ್ ಗಳನ್ನು ಪೊಲೀಸ್‌ ಹಾಗೂ ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ, ಜನರಿಗೆ ವಿತರಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ಇದೇ ವೇಳೆ ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೆ ದೇಶದ ವಿವಿಧೆಡೆ ಕೋವಿಡ್‌ 19 ಹತ್ತಿಕ್ಕಲು ನೆರವಾಗುವ ಉದ್ದೇಶದಿಂದ ವೇದಾಂತ ಗ್ರೂಪ್‌ ಸಾಕಷ್ಟು ಉಪಕ್ರಮಗಳನ್ನು ಕೈಗೊಂಡಿದೆ. ಪ್ರತಿಯೊಬ್ಬರೂ ಮನೆಯಲ್ಲೇ ಇದ್ದೂ ರೋಗ ನಿವಾರಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next