Advertisement

ವೀರಶೈವ ಲಿಂಗಾಯತರಲ್ಲಿದೆ ಸಾಂಸ್ಕೃತಿಕ ಶ್ರೀಮಂತಿಕೆ: ಮುರುಘಾ ಶ್ರೀ

10:33 PM Jul 13, 2021 | Team Udayavani |

ಚಿತ್ರದುರ್ಗ: ವೀರಶೈವ ಲಿಂಗಾಯತರು ಸಾಂಸ್ಕೃತಿಕ ಶ್ರೀಮಂತರು. ಮಧ್ಯದಲ್ಲಿ ಶ್ರೀಮಂತಿಕೆ ಬಂದುಹೋಗಬಹುದು. ಆದರೆ ಕೊನೆವರೆಗೂ ಅವರಲ್ಲಿ ಶಾಶ್ವತವಾಗಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಾಣಬಹುದಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಅಖೀಲಭಾರತ ವೀರಶೈವ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಸಮಾಜ, ಚಿತ್ರದುರ್ಗ, ವೀರಶೈವ ಲಿಂಗಾಯತ ಯುವವೇದಿಕೆ, ಕರ್ನಾಟಕ ವೀರಶೈವ ಪರಿಷತ್‌ ಸಹಯೋಗದಲ್ಲಿ ಆರಂಭವಾದ ವೆಬ್‌ಸೈಟ್‌ ಅನ್ನು ಮುರುಘಾ ಮಠದಲ್ಲಿ ಸೋಮವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಸಂಘಟನೆ ಸವಾಲಿನಿಂದ ಕೂಡಿರುತ್ತದೆ.

ಬೇರೆ ಬೇರೆ ಕಾರಣಗಳಿಗಾಗಿ ವಿಘಟನೆ ಇರುತ್ತದೆ. ಸಂಘಟನೆ ಮಾಡುವವರಿಗೆ ಉನ್ನತ ಳಿರಬೇಕು.  ಸಂಘಟನೆಯಾಗಬೇಕು. ಅಂಥವರ ಬದುಕಿನಲ್ಲಿ ಸಂತೃಪ್ತಿ ನೆಲೆಸುತ್ತದೆ. ಸಮಾಜ ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ಸಮಾಜದ ಮೇಲೆ ಸದ್ಭಾವನೆ ಇರುವವರು ದೂರದೃಷ್ಟಿ ಇಟ್ಟುಕೊಂಡು ಸಂಘಟನೆ ಕಟ್ಟುತ್ತಾ ಹೋಗುತ್ತಾರೆ.

ಅಂತಹ ಸಂಘಟನೆಗಳಿಗೆ ಉತ್ತಮ ಭವಿಷ್ಯ ಇರುತ್ತದೆ. ಸಂಘಟನೆ ಜೊತೆಯಲ್ಲಿ ವಿಭಜನೆಯೂ ಇರುತ್ತದೆ ಎಂಬುದನ್ನು ಮರೆಯಬಾರದೆಂದರು. ರಾಜಕೀಯ, ಧಾರ್ಮಿಕ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿಯೂ ವಿಭಜನೆ, ಸಂಘಟನೆ ಇರುತ್ತದೆ. ಕೆಲವರು ಸಂಘಟನೆಯನ್ನು ಭಾಗ ಮಾಡುತ್ತಾರೆ. ಒಡೆಯುವವರು ಅಜ್ಞಾನದಿಂದ ಮಾಡಿರುತ್ತಾರೆ.

ಕೂಡಿಸುವವರು ಜ್ಞಾನಿಗಳಾಗಿರುತ್ತಾರೆ. ಸಾಧ್ಯವಾಗದವರು ಸಂಘಟನೆ ಮಾಡದೆ ಸುಮ್ಮನಿದ್ದರೆ ಸಾಕು. ಕಟ್ಟುವವರು ಕಟ್ಟುತ್ತಾರೆ, ಕೆಡಿಸುವವರು ಕೆಡಿಸುತ್ತಾರೆ. ಅಖಂಡವಾದ ಸಹನೆ ನಮಗೆ ವಿಜಯ ತಂದುಕೊಡುತ್ತದೆ. ಅಸಹನೆಯಿಂದ ಏನನ್ನು ಸಾ ಧಿಸಲಾಗುವುದಿಲ್ಲ ಎಂದು ತಿಳಿಸಿದರು.

Advertisement

ಮಹಾಸಭಾದ ಕಾರ್ಯದರ್ಶಿ ಜಿ.ಎನ್‌. ಮಹೇಶ್‌ ಮಾತನಾಡಿ, ವೀರಶೈವ ಲಿಂಗಾಯತರ ಎಲ್ಲ ಉಪಪಂಗಡಗಳ ಜನಗಣತಿಗೆ ವೆಬ್‌ಸೈಟ್‌ ರೂಪಿಸಿ ಚಾಲನೆ ನೀಡಲಾಗಿದೆ. ಒಂದು ಗಂಟೆಗೆ ನೂರು ಜನರ ಡಾಟಾವನ್ನು ಅಪ್‌ಲೋಡ್‌ ಮಾಡಬಹುದಾಗಿದೆ ಎಂದರು.

ಮಹಡಿ ಶಿವಮೂರ್ತಿ ಮಾತನಾಡಿದರು. ಎಸ್‌.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಎಲ್‌.ಬಿ. ರಾಜಶೇಖರ್‌, ಕಾರ್ತಿಕ್‌, ಮಂಜುನಾಥ್‌ ಎಚ್‌.ಎಂ., ಎಸ್‌. ಷಣ್ಮುಖಪ್ಪ, ಸಿದ್ದಾಪುರ ನಾಗಣ್ಣ, ಮರುಳಾರಾಧ್ಯ, ರೋಟರಿ ವೀರೇಶ್‌, ಮುರುಗೇಶ್‌, ಪರಮೇಶ್‌, ಶ್ಯಾಮಲಾ ಶಿವಪ್ರಕಾಶ್‌, ಆರತಿ ಶಿವಮೂರ್ತಿ, ಆನಂದ್‌ ಜೆ., ಶ್ರೀಹರ್ಷ, ಮನೋಹರ, ದಿವಾಕರ, ಸಂತೋಷ್‌, ತಿಪ್ಪಣ್ಣ, ಶಶಿಧರ, ಮಂಜುನಾಥಸ್ವಾಮಿ, ಜಿತೇಂದ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next