Advertisement

ಚುನಾವಣಾ ವಿಜಯಕ್ಕಾಗಿ ಮೋದಿಗೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅಭಿನಂದನೆ

04:35 PM May 24, 2019 | Sathish malya |

ಬೀಜಿಂಗ್‌ : 2019ರ ಲೋಕಸಭಾ ಚುನಾವಣೆಯಲ್ಲಿನ ಪ್ರಚಂಡ ವಿಜಯಕ್ಕಾಗಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.

Advertisement

ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯಗಳನ್ನು ಹೊಸ ಎತ್ತರಕ್ಕೆ ಒಯ್ಯಲು ಜತೆಗೂಡಿ ಶ್ರಮಿಸುವುದಾಗಿ ಚೀನ ಅಧ್ಯಕ್ಷರು ಹೇಳಿದ್ದಾರೆ.

ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 296 ಸೀಟುಗಳಲ್ಲಿ ಮುಂದಿದೆ; ಎದುರಾಳಿ ಕಾಂಗ್ರೆಸ್‌ ಕೇವಲ 51 ಸೀಟುಗಳಲ್ಲಿ ಮುಂದಿದೆ.

ಚೀನ ಅಧ್ಯಕ್ಷರು ಪ್ರಧಾನಿ ಮೋದಿ ಅವರಿಗೆ ಕಳುಹಿಸಿರುವ ಪತ್ರದಲ್ಲಿ ಮೋದಿ ನಾಯಕತ್ವದ ಎನ್‌ಡಿಎ ಮೈತ್ರಿ ಕೂಟ ಚುನಾವಣೆಯಲ್ಲಿ ಸಾಧಿಸಿರುವ ಅದ್ಭುತ ವಿಜಯಕ್ಕಾಗಿ ಅಭಿನಂದಿಸಿದ್ದಾರೆ ವಿದೇಶ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next