Advertisement

ವಿಶಿಷ್ಟ ಚಂದ್ರಯಾನಕ್ಕೆ ಚೀನ ಸಜ್ಜು

06:00 AM Jan 04, 2018 | Harsha Rao |

ಬೀಜಿಂಗ್‌: ಆರ್ಥಿಕತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶ್ವದ ದೊಡ್ಡ ರಾಷ್ಟ್ರಗಳಿಗೇ ಸೆಡ್ಡು ಹೊಡೆದಿರುವ ಚೀನ, ಇದೀಗ ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ಆ ಕ್ಷೇತ್ರದ ದಿಗ್ಗಜರಾದ ಅಮೆರಿಕ, ರಷ್ಯಾಗಳನ್ನು ಹಿಂದಿಕ್ಕಲು ಸಜ್ಜಾಗಿದೆ. 

Advertisement

ಕೆಲ ವರ್ಷಗಳ ಹಿಂದೆಯೇ, ಚೀನ ಘೋಷಿಸಿದ್ದ ಚಂದ್ರ ಗ್ರಹ ಅಧ್ಯಯನದ ಮಹತ್ವದ ಯೋಜನೆ ಈಗ ಅಂತಿಮ ರೂಪ ಪಡೆಯುತ್ತಿದೆ. “ಚಾಂಗ್‌ 4′ ಎಂಬ ಹೆಸರಿನ ಈ ಯೋಜನೆಯು 2018ರ ಜೂನ್‌ನಲ್ಲಿ ಸಾಕಾರಗೊಳ್ಳಲಿದೆ. ಈ ಯೋಜನೆಯಲ್ಲಿ ಚಂದ್ರನ ಮೇಲೆ “ಚಾಂಗ್‌ 4′ ಎಂಬ ಉಪಗ್ರಹವನ್ನು ಚೀನ ಇಳಿಸಲಿದೆ. ಈ ಯೋಜನೆಯ ವಿಶೇಷವೆಂದರೆ, ಭೂಮಿಗೆ ಕಾಣದಿರುವ ಚಂದ್ರನ ಮತ್ತೂಂದು ಮಗ್ಗು ಲಿನ ಮೇಲೆ ತನ್ನ ಉಪಗ್ರಹವನ್ನು ಇಳಿಸಿ ಆ ಪಾರ್ಶ್ವದ ಅಧ್ಯಯನ ಮಾಡುವುದು.

ಈ ಹಿಂದೆ, ಅಮೆರಿಕ, ರಷ್ಯಾ ದೇಶಗಳು ಚಂದ್ರನಲ್ಲಿಗೆ ತಮ್ಮ ನೌಕೆಗಳನ್ನು ಕಳುಹಿಸಿ ಅಲ್ಲಿನ ಮಣ್ಣು, ಕಲ್ಲು ಇತ್ಯಾದಿಗಳನ್ನು ಪರೀಕ್ಷೆಗಾಗಿ ಭೂಮಿಗೆ ತಂದಿದ್ದವು. ಆದರೆ, ನಾವು ಕಾಣದ ಚಂದ್ರನ ಮಗ್ಗುಲಿಗೆ ಉಪಗ್ರಹವನ್ನು ಕಳುಹಿಸಿರಲಿಲ್ಲ. ಇದೀಗ, ಆ ಕೆಲಸಕ್ಕೆ ಚೀನ ಕೈ ಹಾಕಿದೆ. ಈ ಯೋಜನೆ ಯಶಸ್ವಿಯಾದರೆ, ಚಂದ್ರನ ಅಧ್ಯಯನದಲ್ಲಿ ಅಮೆರಿಕ, ರಷ್ಯಾ ಮಾಡಿರುವ ಸಾಧನೆಗಳನ್ನು ಚೀನ ಹಿಂದಿಕ್ಕಿದಂತಾಗುತ್ತದೆ. 

ಅಂದಹಾಗೆ, 1976ರಲ್ಲಿ ಚಾಂಜ್‌-3 ಯೋಜನೆಯಡಿ, ಜೇಡ್‌ ರಾಬಿಟ್‌ ರೋವರ್‌ ಎಂಬ ನೌಕೆಯನ್ನು ಚೀನ ಚಂದ್ರನ ನಾವು ಕಾಣುವ ಪಾರ್ಶ್ವದ ಮೇಲ್ಮೆ„ ಮೇಲೆ ಇಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next