ಬೀಜಿಂಗ್: ಗಡಿಯಲ್ಲಿ ಸೈನಿಕರನ್ನು ನಿಲ್ಲಿಸಿದ ಭಾರತದ ವಿರುದ್ಧ ಕ್ರಮ ನಿಶ್ಚಿತ, ನಮ್ಮ ತಾಳ್ಮೆ ಅನಿರ್ದಿಷ್ಟಾವಧಿಯದ್ದಲ್ಲ… ಹೀಗೆಲ್ಲ ಚೀನದ ಸರಕಾರಿ ಸ್ವಾಮ್ಯದ ಪತ್ರಿಕೆಗಳು ಡೋಕ್ಲಾಮ್ ವಿವಾದ ಸಂಬಂಧ ಭಾರತದ ವಿರುದ್ಧ ಗುಟುರು ಹಾಕುತ್ತಲೇ ಇವೆ. ಇದೇ ವೇಳೆ, ಚೀನದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಟಿಬೆಟ್‌ನತ್ತ ಭಾರೀ ಪ್ರಮಾಣದ ಮಿಲಿಟರಿ ಸರಕುಗಳನ್ನು ರವಾನಿಸಿದೆ ಎಂದು ಚೀನ ಮಿಲಿಟರಿ ಮುಖವಾಣಿ ವರದಿ ಮಾಡಿದೆ.
ಸಾವಿರಾರು ಟನ್ ಸೇನಾ ಸರಂ ಜಾಮುಗಳನ್ನು ಸೇನೆಯ ಪಶ್ಚಿಮ ಕಮಾಂಡ್‌ನಿಂದ ಟಿಬೆಟ್‌ನ ಕೌನುÉನ್ ಪರ್ವತ ಪ್ರದೇಶದ ದಕ್ಷಿಣ ಭಾಗದತ್ತ¤ ಕಳಿಸಿದೆ ಎಂದು “ಪಿಎಲ್‌ಎ ಡೈಲಿ’ ವರದಿ ಮಾಡಿದೆ. ಕಳೆದ ತಿಂಗಳು ಈ ಸರಂಜಾಮುಗಳನ್ನು ಕಳಿಸಲಾಗಿದ್ದು, ರೈಲು ಮತ್ತು ರಸ್ತೆ ಮೂಲಕ ಕಳಿಸಲಾಗಿದೆ ಎಂದು ಅದು ಹೇಳಿದೆ. ಸಿಕ್ಕಿಂ ಗಡಿ ವಿವಾದದ ಬಳಿಕ ಪಿಎಲ್‌ಎ ಡೈಲಿ ಭಾರತ ವಿರುದ್ಧ ಕಿಡಿಕಾರುವ ಬರಹ, ಸುದ್ದಿಗಳನ್ನು ಪ್ರಕಟಿಸುತ್ತಲೇ ಇದ್ದು, ಈಗ ಹೊಸ ಸುದ್ದಿಗೆ ಸಂಬಂಧಿಸಿದಂತೆ ಯಾವುದೇ ಖಚಿತತೆಯನ್ನು ನೀಡಿಲ್ಲ.
ಮೊನ್ನೆಯಷ್ಟೇ ಚೀನ ಸರಕಾರಿ ಸ್ವಾಮ್ಯದ ಸಿಸಿಟಿವಿ, ಪಿಎಲ್‌ಎ ಸೈನಿಕರು ಟಿಬೆಟ್‌ನಲ್ಲಿ ಭಾರೀ ಯುದ್ಧಾಭ್ಯಾಸ ನಡೆಸಿರುವುದನ್ನು ವರದಿ ಮಾಡಿತ್ತು. ಯುದ್ಧಾಭ್ಯಾಸ ನಡೆಸಿದ ಪ್ರದೇಶ ಡೋಕ್ಲಮ್ ಪ್ರದೇಶದಿಂದ ಹೆಚ್ಚಿನ ದೂರ ದಲ್ಲೇನೂ ಇಲ್ಲ ಎಂದು ಹಾಂಕಾಂಗ್ ಮೂಲದ ಸೌತ್ ಚೀನ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿತ್ತು. ಸದ್ಯ ರವಾನಿಸಿದ ಮಿಲಿಟರಿ ಸರಕುಗಳು ಸೈನಿಕ ಯುದ್ಧಾಭ್ಯಾಸಕ್ಕಾಗಿಯೋ ಅಥವಾ ಬೇರೆ ಕಾರಣಕ್ಕೋ ಎಂಬುದನ್ನೂ ಪಿಎಲ್‌ಎ ಡೈಲಿ ಹೇಳಿಲ್ಲ.
ಅತಿ ವೇಗವಾಗಿ ಸರಕು ಸಾಗಣೆ: ಅಂತಾರಾಷ್ಟ್ರೀಯ ವಿಚಾರಗಳ ಕುರಿತ ಶಾಂಘಾç ಇನ್‌ಸ್ಟಿಟ್ಯೂಟ್‌ನ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರದ ಪರಿಣತ ವಾಂಗ್ ದೆಹುವಾ ಪ್ರಕಾರ, ತನ್ನ ಪಶ್ಚಿಮ ಗಡಿಗಳನ್ನು ರಕ್ಷಿಸಿಕೊಳ್ಳಲು ಚೀನ ಅತಿ ವೇಗವಾಗಿ ಮಿಲಿಟರಿ ಸರಕುಗಳನ್ನು ರವಾನೆ ಮಾಡಿದೆ. ಅದು ರವಾನೆ ಮಾಡಿದ ರೀತಿ, ಅಗತ್ಯ ಬಿದ್ದರೆ ಎಷ್ಟು ವೇಗವಾಗಿ ಅದು ಸರಕುಗಳನ್ನು ರವಾನೆ ಮಾಡುತ್ತದೆ ಎಂಬುದನ್ನು ತೋರಿಸಿದೆ. ಯಶಸ್ವಿ ಮಿಲಿಟರಿ ಕಾರ್ಯಾಚರಣೆಗೆ, ಶೀಘ್ರ ಸರಕು ಸಾಗಣೆ ಸೇವೆ ಅಗತ್ಯ ವಾಗಿದೆ ಎಂದಿದ್ದಾರೆ. ಟಿಬೆಟ್‌ಗೆ ರೈಲು, ಹೈವೇ ಸಂಪರ್ಕಗಳನ್ನು ಚೀನ ಇತರ ಪ್ರಾಂತ್ಯಗಳಿಂದ ಹೊಂದಿದ್ದು, ತ್ವರಿತವಾಗಿ ಸೇನೆ ಜಮಾವಣೆ ಮಾಡಬಹುದಾಗಿದೆ.
ಪಾಕ್ ಜತೆ ಚೀನ ದಾಳಿಗೆ ಸಿದ್ಧ: ಮುಲಾಯಂ
ಪಾಕಿಸ್ಥಾನ ಜತೆ ಸೇರಿ ಭಾರತದ ಮೇಲೆ ದಾಳಿ ನಡೆಸಲು ಚೀನ ಸನ್ನದ್ಧವಾಗಿದೆ ಎಂದು ಸಮಾಜವಾದಿ ಮುಖಂಡ, ಮಾಜಿ ರಕ್ಷಣಾ ಸಚಿವ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ. ಚೀನ-ಭಾರತ ಗಡಿ ತಂಟೆ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಮಾತನಾಡಿದ ಮುಲಾಯಂ, “ಚೀನದ ಸವಾಲನ್ನು ಎದುರಿಸಲು ಸರಕಾರ ಏನು ಸಿದ್ಧತೆ ಮಾಡಿ ಕೊಂಡಿದೆ ಎಂಬುದನ್ನು ಸಂಸತ್ತಿಗೆ ತಿಳಿಸಬೇಕು’ ಎಂದಿದ್ದಾರೆ.
“ಚೀನ ಸೈನಿಕರು ಪಾಕ್ ಮಿಲಿಟರಿಯವರೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾಣಿಸಿಕೊಂಡಿದ್ದು, ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಂಥ ಯತ್ನಗಳನ್ನು ನಾವು ರಾಜತಾಂತ್ರಿಕವಾಗಿ ವಿರೋಧಿಸ ಬೇಕಿದೆ ಎಂದು ಅವರು ಹೇಳಿ ದ್ದಾರೆ. ಚೀನದಿಂದ ನಾವು ಭಾರೀ ಅಪಾಯವನ್ನು ಎದುರಿಸುತ್ತಿದ್ದೇವೆ. ಇದನ್ನು ನಾನು ಹಲವು ವರ್ಷ ಗಳಿಂದ ಹೇಳುತ್ತ ಬಂದಿದ್ದೇನೆ. ಈ ಬಗ್ಗೆ ಯಾರೂ ಗಮನ ಕೊಡುತ್ತಿಲ್ಲ. ಪಾಕ್‌ನೊಂದಿಗೆ ಅವರು ಕೈ ಜೋಡಿಸಿದ್ದು, ಭಾರತದ ಮೇಲೆ ದಾಳಿಗೆ ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ’ ಎಂದಿದ್ದಾರೆ.