ವಾಷಿಂಗ್ಟನ್: ಭಾರತದ ಬಂದರು ವ್ಯವಸ್ಥೆಯ ಇಡೀ ಕಂಪ್ಯೂಟರ್ ಜಾಲವನ್ನು ಹಾಳುಗೆಡವಲು ಚೀನ ಹ್ಯಾಕರ್‌ಗಳು ಸಂಚು ರೂಪಿಸಿದ್ದಾರೆಂಬ ಆತಂಕಕಾರಿ ವಿಚಾರವನ್ನು ಅಮೆರಿಕದ “ರೆಕಾರ್ಡೆಡ್ ಫ್ಯೂಚರ್’ ಎಂಬ ಸಂಸ್ಥೆ ಹೊರಗೆಡವಿದೆ.
ಇದೇ ಸಂಸ್ಥೆ, 3 ದಿನಗಳ ಹಿಂದಷ್ಟೆ, 2020 ರಲ್ಲಿ ಜರಗಿದ್ದ ಮುಂಬಯಿನ ವಿದ್ಯುತ್ ಜಾಲ ಏಕಾಏಕಿ ತಟಸ್ಥಗೊಂಡಿದ್ದ ಪ್ರಕರಣವನ್ನು ಭೇದಿಸಿ ಅದು ಚೀನ ಹ್ಯಾಕರ್‌ಗಳದ್ದೇ ಕೃತ್ಯ ಎಂದು ವರದಿ ಮಾಡಿತ್ತು. ಇದನ್ನು ಮಹಾರಾಷ್ಟ್ರ ಹಾಗೂ ಕೇಂದ್ರ ಒಪ್ಪಿಕೊಂಡಿವೆ.
ಆ ತಂಡದ ಹೆಸರು “ರೆಡ್‌ಎಕೊ’: ರೆಕಾರ್ಡೆಡ್ ಫ್ಯೂಚರ್ ಸಂಸ್ಥೆಯ ಮುಖ್ಯಸ್ಥ ಸ್ಟುವರ್ಟ್ ಫಾಲೋಮನ್ ಪ್ರಕಾರ, “ಚೀನದ ಸರಕಾರಿ ಪ್ರಾಯೋಜಿತ ಹ್ಯಾಕರ್‌ಗಳ ತಂಡದ ಹೆಸರು ಹೆಡ್ ಎಕೋ. ಈ ತಂಡ, ಈಗಾಗಲೇ ಭಾರತೀಯ ವಿದ್ಯುತ್ ಗ್ರಿಡ್‌ನ 10 ಸಂಸ್ಥೆಗಳ ಕಂಪ್ಯೂಟರ್ ಜಾಲಕ್ಕೆ, ಎರಡು ಬಂದರು ಗಳಲ್ಲಿನ ಕಂಪ್ಯೂಟರ್‌ಗಳಿಗೂ ಮಾಲ್‌ವೇರ್ ರವಾನೆ ಮಾಡಿದೆ. ಇದನ್ನು ಭಾರತದ ಕಂಪ್ಯೂಟರ್ ಎಮ ರ್ಜೆನ್ಸಿ ರೆಸ್ಪಾನ್ಸ್ ತಂಡ (ಸಿಇಆರ್‌ಟಿ) ಕೂಡ ಫೆ. 10ರಂದೇ ಪತ್ತೆ ಮಾಡಿದ್ದು, ಈಗಲೂ ಈ ಹ್ಯಾಕರ್‌ಗಳು ಸಕ್ರಿಯವಾಗಿಯೇ ಇದ್ದಾರೆ” ಎಂದು ಎಚ್ಚರಿಸಿದೆ.
ಚೀನ ನಿರಾಕರಣೆ: ತನ್ನ ವಿರುದ್ಧದ ಆರೋಪಗಳನ್ನು ಚೀನ ನಿರಾಕರಿಸಿದೆ. ಯಾವುದೇ ಪುರಾ ವೆ ಯಿಲ್ಲದೆ ನಮ್ಮತ್ತ ಬೆರಳು ಮಾಡುವುದು ಬೇಜವಾಬ್ದಾರಿ ತನ ಎಂದು ಚೀನದ ವಿದೇಶಾಂಗ ಸಚಿವ ವಾಂಗ್ ವೆನ್‌ಬಿನ್ ತಿಳಿಸಿದ್ದಾರೆ.
ಭಾರತದ ಮೇಲೆ ಚೀನ ಈಗ ಸೈಬರ್ ದಾಳಿ ನಡೆಸಲಾರಂಭಿಸಿದೆ. ಈಗಾ ಗಲೇ, ನಾವು ದೆಪ್ಸಾಂಗ್ ಪ್ರಾಂತ್ಯ ದಲ್ಲಿದ್ದ ನಮ್ಮ ಭೂಮಿಯನ್ನು ಕಳೆದುಕೊಂಡಿದ್ದೇವೆ. ದೌಲತ್ ಬೇಗ್ ಓಲ್ಡಿ ಕೂಡ ಕೈತಪ್ಪುವ ಅಪಾಯವಿದೆ. ಸರಕಾರ ಇನ್ನೂ ಹೇಡಿತನ ಪ್ರದರ್ಶಿಸಿದರೆ ನಾವು ಶೋಚನೀಯ ಸ್ಥಿತಿಗೆ ತಲುಪಬೇಕಾಗುತ್ತದೆ.
– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ