Advertisement
ಆಗ ಒಂದು ಪರ್ವತದ ನೆತ್ತಿಯಿಂದ ಈ ಬೆಳಕು ಹೊಮ್ಮುತ್ತಿರುವುದು ಗೋಚರಿಸಿತು. ವ್ಯಾಪಾರಿಗಳು ಅಲ್ಲಿಗೆ ಹೋಗಲು ಪ್ರಯತ್ನಿಸಿದರು. ಆದರೆ ಅಲ್ಲಿ ಮಲಗಿದ್ದ ಒಂದು ಪೆಡಂಭೂತದ ಕೊರಳಿನಲ್ಲಿರುವ ಗುಲಾಬಿ ವರ್ಣದ ಮುತ್ತಿನಿಂದ ಇಂತಹ ಬೆಳಕು ಬರುತ್ತಿರುವುದು ಅವರಿಗೆ ತಿಳಿಯಿತು. ಆಗ ಅವರು ಪೆಡಂಭೂತದ ಸನಿಹ ಹೋಗುವಾಗ ಅದು ಬಾಯೆ¤ರೆದು ಜೋರಾಗಿ ವಿಷದ ಗಾಳಿಯನ್ನು ಹೊರಬಿಟ್ಟಿತು. ಇದರಿಂದ ಅವರೆಲ್ಲ ಭಯಭೀತರಾಗಿ ಓಡಿಬಂದು ಹಡಗನ್ನೇರಿದರು. ಈ ಕಥೆಯನ್ನು ವ್ಯಾಪಾರಿಗಳು ಚಕ್ರವರ್ತಿಗೆ ಹೇಳಿದರು. ಆದರೂ ವಿಷವನ್ನುಗುಳುವ ಪೆಡಂಭೂತದ ಕೊರಳಿನಿಂದ ಗುಲಾಬಿ ಮುತ್ತನ್ನು ತರುವುದು ಸುಲಭವಲ್ಲವೆಂದೇ ತಿಳಿಸಿದರು.
Related Articles
Advertisement
ಆದರೆ ಆಗ ಪೆಡಂಭೂತ ಜೋರಾಗಿ ವಿಷದುಸಿರು ಹೊರಬಿಡುತ್ತ ಇತ್ತು. ಅದನ್ನು ಕಂಡು ವೀಸ್ಯಾನ್ ಭಯಭೀತನಾಗಿ, “”ಅಣ್ಣ, ನಮಗೆ ಈ ಮುತ್ತಿನ ಸಹವಾಸ ಬೇಡ. ಇದರ ಸುದ್ದಿಗೆ ಹೋದರೆ ಪ್ರಾಣ ಉಳಿಯುವುದಿಲ್ಲ. ಮರಳಿ ಹೋಗೋಣ” ಎಂದು ಹೇಳಿದ. ಈ ಮಾತಿಗೆ ವೀವಿಂಗ್ ಅವನಿಗೆ ಏನೂ ಹೇಳಲಿಲ್ಲ. ರಾತ್ರೆಯಾಗುವ ವರೆಗೂ ಸುಮ್ಮನೆ ಕುಳಿತ. ಬಳಿಕ ಭಾರೀ ಗಾತ್ರದ ಒಂದು ಗಾಳಿಪಟವನ್ನು ತಯಾರಿಸಿ ಅದಕ್ಕೆ ಉದ್ದನೆಯ ಹಗ್ಗವನ್ನು ಕಟ್ಟಿದ. ತಮ್ಮನೊಂದಿಗೆ ಹಗ್ಗದ ತುದಿಯನ್ನು ಹಿಡಿದುಕೊಳ್ಳಲು ತಿಳಿಸಿದ. ತಾನು ಪಟವನ್ನು ಹಿಡಿದುಕೊಂಡ. ಪಟ ಅವನೊಂದಿಗೆ ಗಾಳಿಯಲ್ಲಿ ಮೇಲೇರುತ್ತ ಬೆಟ್ಟದ ನೆತ್ತಿಯನ್ನು ತಲಪಿತು. ಪೆಡಂಭೂತ ಮಲಗಿ ಗೊರಕೆ ಹೊಡೆಯುತ್ತ ಇತ್ತು. ವೀವಿಂಗ್ ತಕ್ಷಣ ಕೆಳಬಾಗಿ ಅದರ ಕೊರಳಿನಲ್ಲಿದ್ದ ಗುಲಾಬಿ ಮುತ್ತಿನ ಹಾರವನ್ನು ತೆಗೆದುಕೊಂಡ. ಅದೇ ವೇಗದಿಂದ ಮರಳಿ ಕೆಳಗೆ ಬಂದ. ಅಣ್ಣನ ಕೈಯಲ್ಲಿ ಬೆಳಗುತ್ತಿದ್ದ ಮುತ್ತನ್ನು ನೋಡಿದ ಕೂಡಲೇ ವೀಸ್ಯಾನ್ ಹಗ್ಗವನ್ನು ಕತ್ತರಿಸಿಬಿಟ್ಟ. “”ಅಣ್ಣ, ಹಗ್ಗ ತುಂಡಾಗಿದೆ. ಮುತ್ತು ಕೈಯಲ್ಲಿದ್ದರೆ ಪೆಡಂಭೂತದಿಂದ ಅಪಾಯ ಬರಬಹುದು. ಮುತ್ತನ್ನು ಕೆಳಗೆ ಹಾಕು. ಗಾಳಿ ಕಡಿಮೆಯಾದಾಗ ಪಟ ತಾನಾಗಿ ಕೆಳಗಿಳಿಯಬಹುದು” ಎಂದು ಕೂಗಿದ. ಅವನ ಮಾತು ನಂಬಿ ವೀವಿಂಗ್ ಮುತ್ತನ್ನು ಕೆಳಗೆ ಎಸೆದ. ವೀಸ್ಯಾನ್ ಮುತ್ತನ್ನು ಹೆಕ್ಕಿಕೊಂಡ. ಅಣ್ಣನ ಕಡೆಗೆ ತಿರುಗಿಯೂ ನೋಡದೆ ಯಾವುದೋ ಹಡಗಿನಲ್ಲಿ ಕುಳಿತು ಚಕ್ರವರ್ತಿಯ ಬಳಿಗೆ ಬಂದು ಮುತ್ತನ್ನು ಅವನಿಗೆ ಒಪ್ಪಿಸಿದ.
ಚಕ್ರವರ್ತಿ ತುಂಬ ಸಂತೋಷಗೊಂಡ. ಮಗಳ ಜೊತೆಗೆ ವೀಸ್ಯಾನ್‌ನ ಮದುವೆ ಮಾಡಲು ಸಿದ್ಧನಾದ. ಆದರೆ ಅವನ ಮಗಳು ಕೂಡಲೇ ಅದಕ್ಕೆ ಸಿದ್ಧಳಾಗಲಿಲ್ಲ. “”ಇವನು ಪೆಡಂಭೂತದ ಬಳಿಗೆ ಗಾಳಿಪಟದಲ್ಲಿ ಕುಳಿತು ಸಲೀಸಾಗಿ ಹೋದೆ ಎಂದನಲ್ಲವೆ? ಆಗ ಪಟದ ದಾರ ಹಿಡಿದುಕೊಂಡವರು ಯಾರು? ಇವನು ಒಂದು ಸಲ ಅರಮನೆಯ ಅಂಗಳದಿಂದ ಹೀಗೆಯೇ ಮಹಡಿಯಲ್ಲಿರುವ ನನ್ನ ಅಂತಃಪುರಕ್ಕೆ ಬರಬಹುದೇ?” ಎಂದು ಕೇಳಿದಳು. ಈ ಮಾತು ಕೇಳಿ ವೀಸ್ಯಾನ್ ಮುಖ ಕಪ್ಪಿಟ್ಟಿತು. ಅವನಿಗೆ ಗಾಳಿಪಟದಲ್ಲಿ ಹಾರಲು ಸಾಧ್ಯವೇ ಆಗಲಿಲ್ಲ. ತಲೆತಗ್ಗಿಸಿ ನಿಂತು, ತಾನು ಒಡಹುಟ್ಟಿದ ಅಣ್ಣನಿಗೆ ಮೋಸ ಮಾಡಿ ಬಂದೆನೆಂದು ಒಪ್ಪಿಕೊಂಡ. ಚಕ್ರವರ್ತಿಯ ಮಗಳು ದೂತರನ್ನು ಮೂಲೆ ಮೂಲೆಗೂ ಅಟ್ಟಿ ವೀವಿಂಗ್ ಎಲ್ಲಿದ್ದರೂ ಹುಡುಕಿ ಕರೆತರಲು ಹೇಳಿದಳು. ತಾನು ದೇಶದಲ್ಲಿದ್ದರೆ ತನ್ನ ತಮ್ಮನ ಮೋಸ ಬಯಲಾಗಿ ಅವನಿಗೆ ತೊಂದರೆಯಾಗಬಹುದೆಂದು ಅವನು ಹಡಗಿನಲ್ಲಿ ಕುಳಿತು ಬೇರೆ ದೇಶದೆಡೆಗೆ ಹೊರಟಿದ್ದ. ಅವನನ್ನು ದೂತರು ಚಕ್ರವರ್ತಿಯ ಬಳಿಗೆ ಕರೆತಂದರು. ವೀವಿಂಗ್ ಕೋರಿಕೆಯಂತೆ ಚಕ್ರವರ್ತಿ ಅವನ ತಮ್ಮನನ್ನು ಕ್ಷಮಿಸಿದ. ತನ್ನ ಮಗಳನ್ನು ವೀವಿಂಗ್‌ನಿಗೆ ಕೊಟ್ಟು ಮದುವೆ ನೆರವೇರಿಸಿದ. – ಪರಾಶರ