ಬೀಜಿಂಗ್: ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯಿರುವ ದೇಶ ಚೀನಾದಲ್ಲಿ 2010ರಿಂದ ಜನಸಂಖ್ಯೆಯ ಬೆಳವಣಿಗೆ ಕುಂಠಿತವಾಗಿದ್ದು, ಕೇವಲ ಶೇ.5.38ರಷ್ಟು ಮಾತ್ರ ಪ್ರಗತಿ ಕಂಡಿದೆ.
2010ರಿಂದ ಈವರೆಗೆ ಚೀನಾದ ಜನಸಂಖ್ಯೆಯು 72.06 ಲಕ್ಷದಷ್ಟು ಮಾತ್ರ ಹೆಚ್ಚಾಗಿದ್ದು, ಈಗ 1.41178 ಶತಕೋಟಿಗೆ ತಲುಪಿದೆ.
ಚೀನಾ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದ 7ನೇ ರಾಷ್ಟ್ರೀಯ ಜನಗಣತಿ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ.
ವಿಶೇಷವೆಂದರೆ, ಈ ಗಣತಿಯ ವರದಿಯಲ್ಲಿ ಹಾಂಕಾಂಗ್ ಮತ್ತು ಮಕಾವೋ ಅಂಕಿ ಅಂಶಗಳನ್ನು ಸೇರ್ಪಡೆ ಮಾಡಿಲ್ಲ. ಜನ ಸಂಖ್ಯೆಯ ವಿಚಾರದಲ್ಲಿ 2027ರ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕಿ, ಅತಿ ಹೆಚ್ಚು ಜನಸಂಖ್ಯೆಯಿರುವ ದೇಶವಾಗಿ ಹೊರ ಹೊಮ್ಮಲಿದೆ ಎಂದು 2019ರಲ್ಲಿ ಬಿಡುಗಡೆಯಾದ ವಿಶ್ವ ಸಂಸ್ಥೆಯ ವರದಿಯೊಂದು ಹೇಳಿತ್ತು.
ಇದನ್ನೂ ಓದಿ :ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಪ್ರತಿ ವ್ಯಕ್ತಿಯ ಮಾಹಿತಿ ನೀಡಲು ಗೌರವ್ ಗುಪ್ತ ಸೂಚನೆ