Advertisement

ಎಲ್ಲ ಕಡೆ ಚೀನದ ಫಿಂಗರ್‌ ಪ್ರಿಂಟ್‌ : ಪ್ರಧಾನಿ ಮೋದಿಗೆ ಓವೈಸಿ ಟೀಕೆ

10:57 AM Mar 14, 2019 | Team Udayavani |

ಹೈದರಾಬಾದ್‌ : ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಯತ್ನವನ್ನು ಚೀನ ನಿರಂತರ ನಾಲ್ಕನೇ ಬಾರಿ ತಡೆದಿರುವುದಕ್ಕೆ  ಎಐಎಂಐಎಂ ಪಕ್ಷದ ಮುಖ್ಯಸ್ಥ ಮತ್ತು ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ ಅವರು ಪ್ರಧಾನಿ ಮೋದಿ ವಿದೇಶ ನೀತಿಯ ಸರಣಿ ವೈಫ‌ಲ್ಯವನ್ನು ಕಟುವಾಗಿ ಟೀಕಿಸಿದ್ದಾರೆ. 

Advertisement

ಓವೈಸಿ ಮಾಡಿರುವ ಟ್ಟಿàಟ್‌ನಲ್ಲಿ ಹೀಗೆ ಬರೆದಿದ್ದಾರೆ : ನಮ್ಮ ಬುಲೆಟ್‌ ಪ್ರೂಫ್ ಜ್ಯಾಕೆಟ್‌ಗಳಲ್ಲಿ ಚೀನದ ಫಿಂಗರ್‌ ಪ್ರಿಂಟ್‌, ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ತಡೆ ಒಡ್ಡುವಲ್ಲಿ ಚೀನದ ಫಿಂಗರ್‌ ಪ್ರಿಂಟ್‌; ನಮ್ಮ ವಿದೇಶ ನೀತಿಗಳ ಸರಣಿ ವೈಫ‌ಲ್ಯದಲ್ಲಿ ಮೋದಿ ಜೀ ಫಿಂಗರ್‌ ಪ್ರಿಂಟ್‌. 

ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಅನಂತನಾಗ್‌ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು  ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಮೂರು ಹಂತಗಳಲ್ಲಿ ನಡೆಸುವ ವಿರುದ್ಧವೂ ಓವೈಸಿ ವಾಗ್ಧಾಳಿ ನಡೆಸಿದ್ದಾರೆ.

”ಒಂದು ಸಂಸತ್‌ ಕ್ಷೇತ್ರದ ಚುನಾವಣೆಯನ್ನು ಮೂರು ಹಂತಗಳಲ್ಲಿ ನಡೆಸುವುದನ್ನು ನೀವು ಎಲ್ಲಾದರೂ ಕೇಳಿದ್ದೀರಾ ? ಅನಂತ್‌ನಾಗ್‌ ನಲ್ಲಿ ನಾಲ್ಲು ಜಿಲ್ಲೆಗಳಿವೆ. ಎರಡು ಜಿಲ್ಲೆಗಳಲ್ಲಿ ಒಂದು ಹಂತ, ಒಂದು ಜಿಲ್ಲೆಯಲ್ಲಿ ಎರಡನೇ ಹಂತ ಮತ್ತು ಒಂದು ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ವಾಹ್‌ ಮೋದಿ ವಾಹ್‌, ಕಾಶ್ಮೀರವನ್ನು ನೀವು ಏನು ಮಾಡಿದ್ದೀರಿ; ನಿಮ್ಮ ಆಡಳಿತೆಯಿಂದಾಗಿ ಒಂದೇ ಸಂಸತ್‌ ಕ್ಷೇತ್ರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ”  ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next