Advertisement
ಈ ಬಾರಿಯ ಚಳಿಗಾಲದಲ್ಲೂ ಇದೇ ಪರಿಸ್ಥಿತಿ ಮುಂದುವರಿದರೆ, ಭಾರತ- ಚೀನಾ ನಡುವಿನ ನೈಜ ಗಡಿ ರೇಖೆಯು (ಎಲ್‌ಎಸಿ), ಪಾಕಿಸ್ತಾನದ ಗಡಿ ರೇಖೆಯ ಬಳಿಯಾದಂತೆ, ಗಡಿ ನಿಯಂತ್ರಣ ರೇಖೆಯಾಗಿ (ಎಲ್‌ಒಸಿ) ಪರಿವರ್ತನೆಗೊಳ್ಳಬಹುದು. ಇಂಥ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ ಎಂದು ಭಾರತೀಯ ಭೂಸೇನೆಯ ಮುಖ್ಯಸ್ಥ ಎಂ.ಎಂ. ನರವಣೆ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಅಸ್ಥಿ ರತೆ ದೂರಾಗಿ ಅಲ್ಲಿನ ಪರಿಸ್ಥಿತಿ ಸ್ಥಿರಗೊಂಡರೆ, ಜಮ್ಮು ಕಾಶ್ಮೀರದಲ್ಲಿ ತಾಲಿಬಾನ್ ಬೆಂಬಲಿತ ಉಗ್ರರ ಒಳನುಸುಳುವಿಕೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಆದರೆ, ಭಾರತೀಯ ಸೇನೆ ಇಂಥ ಯಾವುದೇ ಸವಾಲನ್ನು ಮೆಟ್ಟಲು ಹಿಂದೆಂದಿಗಿಂತಲೂ ಸಮರ್ಥವಾಗಿದೆ” ಎಂದೂ ಅವರು ತಿಳಿಸಿದ್ದಾರೆ.
Related Articles
ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವೆ ಏರ್ಪಟ್ಟಿರುವ ಬಿಗುವಿನ ವಾತಾವರಣ ನಿವಾರಣೆಗಾಗಿ, ಉಭಯ ದೇಶಗಳ ಉನ್ನತ ಮಟ್ಟದ ಸೇನಾಧಿಕಾರಿಗಳ ನಡುವಿನ 13ನೇ ಸುತ್ತಿನ ಸಭೆ ಇದೇ ಭಾನುವಾರ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
Advertisement
ಇದನ್ನೂ ಓದಿ:ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!
ಎಲ್‌ಎಸಿ, ಎಲ್‌ಒಸಿ ನಡುವಿನ ವ್ಯತ್ಯಾಸನೈಜ ಗಡಿ ರೇಖೆಯಡಿ (ಎಲ್‌ಎಸಿ) ಎರಡೂ ದೇಶಗಳ ಗಡಿಯನ್ನು ನಿಖರವಾಗಿ ಗುರುತಿಸಲಾಗಿರುತ್ತದೆ. ಆದರೆ, ಎಲ್‌ಒಸಿ ರೇಖೆಯಡಿ ಗಡಿ ರೇಖೆಯ ನಿಖರತೆ ಇರುವುದಿಲ್ಲ. ಹಾಗಾಗಿ, ಎರಡೂ ದೇಶಗಳು ತಮ್ಮ ಸೇನೆಗಳ ಮೂಲಕ ಕಾರ್ಯಾಚರಣೆ ನಡೆಸಿ ತಮಗೆ ಸೇರಿದ್ದೆಂದು ಹೇಳುವ ಜಾಗವನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಅವಕಾಶವಿರುತ್ತದೆ. ಭಾರತ-ಚೀನಾ ನಡುವಿನ ಗಡಿ ಭಾಗದಲ್ಲಿ ಇಂಥ ಅಸ್ಪಷ್ಟತೆಯಿದೆ. ಆದರೂ ಅದನ್ನು ಈವರೆಗೆ ಎಲ್‌ಎಸಿ ಎಂದೇ ಕರೆಯಲಾಗಿದೆ. ಚೀನಾ ಉದ್ಧಟತನ ಮುಂದುವರಿದರೆ ಭಾರತ, ತನ್ನ ಸೇನಾ ಶಕ್ತಿ ಬಳಸಿ ತನಗೆ ಸೇರಬೇಕಾದ ಜಾಗವನ್ನು ಬಲವಂತಾಗಿ ಆಕ್ರಮಿಸುತ್ತದೆ ಎಂಬುದು ನರವಾಣೆ ಮಾತಿನ ಹಿಂದಿನ ತಾತ್ಪರ್ಯ.