Advertisement

ಚೀನಾದಿಂದ ಭಾರತಕ್ಕೆ ಬರಲಿದೆ ಔಷಧಿ ಹಾಗೂ ವೈದ್ಯಕೀಯ ಪರಿಕರಗಳು

09:23 PM Apr 22, 2020 | Hari Prasad |

ನವದೆಹಲಿ: ಮುಂದಿನ ವಾರದೊಳಗೆ ಚೀನವು 20 ವಿಮಾನಗಳಲ್ಲಿ ಔಷಧ ಮತ್ತು ಇತರ ವೈದ್ಯಕೀಯ ಪರಿಕರಗಳನ್ನು ಭಾರತಕ್ಕೆ ರವಾನಿಸಲಿದೆ. ಕೋವಿಡ್ 19 ವೈರಸ್ ನ ಹಲವು ಬಿಕ್ಕಟ್ಟುಗಳ ನಡುವೆಯೂ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದಿಂದಲೇ ಮುಂದುವರಿಯುತ್ತಿವೆ.

Advertisement

ಚೀನವು ಏಪ್ರಿಲ್‌ ಮೊದಲ ವಾರದಲ್ಲಿ 24 ವಿಮಾನಗಳಲ್ಲಿ ಮೆಡಿಕಲ್‌ ಉಪಕರಣಗಳನ್ನು ಕಳುಹಿಸಿಕೊಟ್ಟಿತ್ತು. ಈ ಮೂಲಕ ಆರ್‌ಟಿ- ಪಿಸಿಆರ್‌ ಟೆಸ್ಟ್‌ ಕಿಟ್‌, ರ್ಯಾಪಿಡ್‌ ಆ್ಯಂಟಿಬಾಡಿ ಟೆಸ್ಟ್‌ ಕಿಟ್‌, ಪಿಪಿಇ ಸೇರಿದಂತೆ ಇನ್ನಷ್ಟು ಉಪಕರಣಗಳು ಭಾರತಕ್ಕೆ ಲಭ್ಯವಾಗಲಿವೆ.

ಕರ್ನಾಟಕ, ತಮಿಳುನಾಡು, ಅಸ್ಸಾಂ ಮತ್ತು ರಾಜಸ್ಥಾನಗಳಿಗೆ ಉಪಕರಣಗಳು ತಲುಪಲಿವೆ. ವುಹಾನ್‌ನಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದಾಗ, ಭಾರತವು ಚೀನಕ್ಕೆ ಇದೇ ರೀತಿಯಲ್ಲಿ ಸ್ನೇಹ ಹಸ್ತ ಚಾಚಿತ್ತು.

Advertisement

Udayavani is now on Telegram. Click here to join our channel and stay updated with the latest news.

Next