Advertisement
ತೈವಾನ್‌ನನ್ನು ಅತಿಕ್ರಮಿಸಿಕೊಂಡಿರುವ ಚೀನ, ಇಡೀ ತೈವಾನ್ ತನ್ನ ದೇಶದ್ದೇ ಭಾಗ ಎಂಬ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ಆದರೆ, ನೆಪಮಾತ್ರಕ್ಕೊಂದು ಸ್ವಾಯತ್ತ ಸರ್ಕಾರವನ್ನು ಅಲ್ಲಿ ಚೀನ ನೇಮಿಸಿದೆ. ಅಮೆರಿಕ, ತೈವಾನ್ ಬೆಂಬಲಕ್ಕೆ ನಿಂತಿದ್ದು, ನ್ಯಾನ್ಸಿ ಅವರು ತೈವಾನ್‌ಗೆ ಆಗಮಿಸುತ್ತಿರುವುದು ಚೀನಾ ಕಣ್ಣು ಕೆಂಪಾಗಿಸಿದೆ.
ಚೀನದ ಎಚ್ಚರಿಕೆಯ ನಡುವೆಯೇ ನ್ಯಾನ್ಸಿಯವರು ತೈವಾನ್‌ನತ್ತ ಮಂಗಳವಾರ ಪ್ರಯಾಣ ಬೆಳೆಸಿದ್ದಾರೆ. ಅವರು ತೈವಾನ್‌ಗೆ ಆಗಮಿಸುವ ಮುನ್ನವೇ ಅಮೆರಿಕದ ನಾಲ್ಕು ಯುದ್ಧ ನೌಕೆಗಳು ತೈವಾನ್-ಚೀನ ಕಡಲಿನಲ್ಲಿ ಬೀಡುಬಿಟ್ಟಿವೆ. ಇದರಲ್ಲೊಂದು ಯುದ್ಧ ವಿಮಾನಗಳನ್ನು ಹೊತ್ತೂಯ್ಯಬಲ್ಲ ಹಡಗಾಗಿದೆ.