ನವದೆಹಲಿ: ಕೆಲ ದಿನಗಳ ಹಿಂದೆ ಅರುಣಾಚಲ ಪ್ರದೇಶದಿಂದ ಅಪಹರಣಗೊಳಿಸಿದ್ದ ಯುವಕನನ್ನು ಭಾರತಕ್ಕೆ ಹಸ್ತಾಂತರಗೊಳಿಸಲ ಚೀನ ಸೇನೆ ಒಪ್ಪಿದೆ.
ಈ ಬಗ್ಗೆ ಬುಧವಾರ ಎರಡೂ ದೇಶಗಳ ಸೇನೆಯ ಅಧಿಕಾರಿಗಳ ನಡುವೆ ಹಾಟ್‌ಲೈನ್ ಮೂಲಕ ಮಾತುಕತೆ ವೇಳೆ ಚರ್ಚೆ ನಡೆಸಿ, ಅಂತಿಮಗೊಳಿಸಲಾಗಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಕಿರಣ್ ರಿಜಿಜು ಮಾತನಾಡಿ ಪ್ರತಿಕೂಲ ಹವಾಮಾನದ ಕಾರಣದಿಂದ ಯುವಕನ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ. ಎರಡೂ ದೇಶಗಳ ಸೇನೆಗಳ ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾತುಕತೆ ನಡೆಸಿ, ತೀರ್ಮಾನ ಕೈಗೊಂಡಿದ್ದಾರೆ.
ಯಾವ ಸ್ಥಳ ಮತ್ತು ಸಮಯದಲ್ಲಿ ಯುವಕನನ್ನು ಹಸ್ತಾಂತರಿಸಲಾಗುತ್ತದೆ ಎಂಬ ಬಗ್ಗೆ ಶೀಘ್ರದಲ್ಲಿಯೇ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಸಚಿವ ರಿಜಿಜು ತಿಳಿಸಿದ್ದಾರೆ.
ಜ.19ರಂದು ಚೀನ ಸೇನೆ ಯುವಕನನ್ನು ಭಾರತದ ನೆಲಕ್ಕೆ ನುಗ್ಗಿ ಅಪಹರಿಸಿತ್ತು ಎಂದು ಅರುಣಾಚಲ ಪೂರ್ವ ಕ್ಷೇತ್ರದ ಸಂಸದ ತಪಿರ್ ಗಾವೋ ಆರೋಪಿಸಿದ್ದರು.