Advertisement

ತೈವಾನ್‌ ಸ್ವತಂತ್ರ ರಾಷ್ಟ್ರವೇ ಅಲ್ಲ: ಚೀನ ಎಚ್ಚರಿಕೆ

06:05 AM Sep 28, 2017 | Team Udayavani |

ಬೀಜಿಂಗ್‌: ತೈವಾನ್‌ ಎನ್ನುವುದು ಸ್ವತಂತ್ರ ರಾಷ್ಟ್ರವೇ ಅಲ್ಲ. ಒಂದು ವೇಳೆ ಸ್ವತಂತ್ರ ಎಂದು ಘೋಷಿಸಿಕೊಂಡರೆ ಪರಿಸ್ಥಿತಿ ನೆಟ್ಟಗಿರದು ಎಂದು ಚೀನ ಬುಧವಾರ ಎಚ್ಚರಿಕೆ ನೀಡಿದೆ.

Advertisement

ಅದಕ್ಕೆ ಪ್ರತ್ಯುತ್ತರ ನೀಡಿರುವ ತೈವಾನ್‌ನ ಪ್ರಧಾನಿ ವಿಲಿಯಂ ಲೈ ಚೀನ ದಾಖಲೆಗಳನ್ನು ನೋಡಿಕೊಂಡು ಪ್ರತಿಕ್ರಿಯೆ ನೀಡಲಿ ಎಂದು ತಿರುಗೇಟು ನೀಡಿದ್ದಾರೆ. ಮಂಗಳವಾರ ತೈವಾನ್‌ನ ಸಂಸತ್‌ನಲ್ಲಿ ಮಾತನಾಡಿದ್ದ ಪ್ರಧಾನಿ ವಿಲಿಯಂ ಲೈ ತಮ್ಮ ದೇಶ ಸ್ವತಂತ್ರವಾಗಬೇಕು. ಅದುವೇ ತಮ್ಮ ಆದ್ಯತೆ ಎಂದು ಹೇಳಿಕೆ ನೀಡಿದ್ದರು. 

ಚೀನದ ಈ ಹೇಳಿಕೆಯಿಂದ ಸಿಡಿಮಿಡಿಗೊಂಡಿದ್ದು, ಅಂಥ ಕ್ರಮಕ್ಕೆ ಮನಸ್ಸು ಮಾಡಿದರೆ ತಕ್ಕ ಶಾಸ್ತಿ ಮಾಡಬೇಕಾದೀತು ಎಂದಿದ್ದಾರೆ. ಆ ರಾಷ್ಟ್ರ ಸ್ವತಂತ್ರವಾಗಿದ್ದರೂ ಚೀನದ್ದೇ ಆಗಿದೆ ಎಂದಿದೆ. ಅದಕ್ಕೆ ತಿರುಗೇಟು ನೀಡಿದ ತೈವಾನ್‌, ಬೀಜಿಂಗ್‌ ಏನು ಬೇಕಾದರೂ ಹೇಳಿಕೊಳ್ಳಲಿ. ಒಂದು ಕಾಲದಲ್ಲಿ ಈ ಭೂಪ್ರದೇಶ ಚೀನಕ್ಕೆ ಸೇರಿದ್ದಾಗಿತ್ತು. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲಿ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next