Advertisement

ಕೊನೆಗೂ ಮಣಿಯಿತೇ ಚೀನ?

02:58 AM Mar 18, 2019 | |

ಹೊಸದಿಲ್ಲಿ: ಜೈಶ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸುವ ವಿಶ್ವಸಂಸ್ಥೆಯಲ್ಲಿ ಉಗ್ರರ ಪಟ್ಟಿಗೆ ಸೇರಿಸಲು ಅಡ್ಡಿಪಡಿಸುತ್ತಲೇ ಇದ್ದ ಚೀನ ಕೊನೆಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಂತಿದೆ. ಈ ಕುರಿತಂತೆ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದು ಭಾರತಕ್ಕೆ ಚೀನ ರಾಯಭಾರಿ ಲುವೋ ಝವೊಹುಯಿ ಹೇಳಿದ್ದು, ಇದು ಕೇವಲ ತಾಂತ್ರಿಕ ಅಡ್ಡಿ. ಅಂದರೆ ಚರ್ಚೆಗೆ ಸಾಕಷ್ಟು ಅವಕಾಶವಿದೆ ಎಂದರ್ಥ. ಇದು ಶೀಘ್ರ ಪರಿಹಾರವಾಗುತ್ತದೆ, ನನ್ನನ್ನು ನಂಬಿ ಎಂದಿದ್ದಾರೆ.

Advertisement

ನಾಲ್ಕು ಬಾರಿ ಚೀನ ಈ ಪ್ರಸ್ತಾವನೆಗೆ ತಾಂತ್ರಿಕ ಕಾರಣ ನೀಡಿ ಅಡ್ಡಿಪಡಿಸಿತ್ತು. ಆದರೆ ಈ ಬಾರಿ ಚೀನಗೆ ಅಮೆರಿಕ ಕಠಿಣ ಸಂದೇಶ ರವಾನಿಸಿದೆ ಎನ್ನಲಾಗಿದೆ. ಚೀನ ಇದೇ ವರ್ತನೆಯನ್ನು ಮುಂದುವರಿಸಿದರೆ ಚೀನ ವಿರುದ್ಧ ಇತರ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪಾಕಿಸ್ಥಾನಅಥವಾ ಯಾವುದೇ ದೇಶದ ಉಗ್ರರನ್ನು ಪೋಷಿಸುವ ಕೆಲಸವನ್ನು ಚೀನ ಮಾಡಬಾರದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.

ಗಲ್ಫ್, ಆಫ್ರಿಕಾಕ್ಕೆ ಹೋಗಿದ್ದ ಮಸೂದ್‌: ಭಾರತದಲ್ಲಿ ಪೊಲೀಸ್‌ ಅಧಿಕಕಾರಿಗಳಿಗೆ 1994ರಲ್ಲಿ ಸಿಕ್ಕಿ ಬೀಳುವುದಕ್ಕೂ ಮೊದಲು ಮಸೂದ್‌ ಅಜರ್‌, ಕಾಶ್ಮೀರದಲ್ಲಿ ಉಗ್ರ ಕೃತ್ಯ ನಡೆಸುತ್ತಿರುವವರನ್ನು ಬೆಂಬಲಿಸಲು ಹಣ ಸಂಗ್ರಹಕ್ಕೆ ತೊಡಗಿದ್ದ. ಇದಕ್ಕಾಗಿ ಈತ ಸೌದಿ ಅರೇಬಿಯಾ, ಇಂಗ್ಲೆಂಡ್‌ ಹಾಗೂ ಆಫ್ರಿಕಾಕ್ಕೆ ಪ್ರಯಾಣಿಸಿದ್ದ ಎನ್ನಲಾಗಿದೆ. ಇಂಗ್ಲೆಂಡ್‌ನ‌ಲ್ಲಿ ಆತನಿಗೆ ಆಗ ಬರೀ 15 ಲಕ್ಷ ರೂ. ಸಿಕ್ಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next