Advertisement

ಬ್ರಿಕ್ಸ್‌ನಲ್ಲಿ ಪಾಕ್‌ ಭಯೋತ್ಪಾದನೆ ಚರ್ಚೆ ಇಲ್ಲ: ಭಾರತಕ್ಕೆ ಚೀನ

04:33 PM Aug 31, 2017 | Team Udayavani |

ಬೀಜಿಂಗ್‌ : ಮುಂದಿನ ವಾರ ನಡೆಯಲಿರುವ ಬ್ರಿಕ್ಸ್‌ ಶೃಂಗದಲ್ಲಿ ಭಾರತಕ್ಕೆ ಪಾಕಿಸ್ಥಾನದಿಂದ ಹೊರಹೊಮ್ಮುವ ಭಯೋತ್ಪಾದನೆಯ ಬಗ್ಗೆ ಇರುವ ಕಳವಳವನ್ನು ಚರ್ಚಿಸುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಚೀನ ಭಾರತಕ್ಕೆ ಸ್ಪಷ್ಟಪಡಿಸಿದೆ. 

Advertisement

ಚೀನಕ್ಕೆ ಪಾಕಿಸ್ಥಾನವು ಸರ್ವಋತು ಸ್ನೇಹಿತನಾಗಿರುವ ಕಾರಣ ಅದು ಪಾಕಿನಿಂದ ಹೊರಹೊಮ್ಮುವ ಭಯೋತ್ಪಾದನೆಯ ಯಾವತ್ತೂ ಖಂಡಿಸಿಲ್ಲ; ಬದಲಾಗಿ ಪಾಕಿಸ್ಥಾನ ಸ್ವತಃ ಭಯೋತ್ಪಾದನೆಯ ಬಲಿಪಶುವಾಗಿದ್ದು ಉಗ್ರವಾದದ ವಿರುದ್ಧ ಹೋರಾಡುತ್ತಲೇ ಎಂದು ವಿಶ್ವ ಸಮುದಾಯಕ್ಕೆ ಹೇಳುತ್ತಾ ಬಂದಿದೆ. 

ಚೀನದ ವಿದೇಶಾಂಗ ವಕ್ತಾರ ಹುವಾ ಶುನ್ಯಿಂಗ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ಇಸ್ಲಾಮಾಬಾದ್‌ ಯಾವತ್ತೂ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಉಗ್ರವಾದವನ್ನು ಕೊನೆಗಾಣಿಸಲು ಅಪರಿಮಿತ ತ್ಯಾಗಗಳನ್ನು ಮಾಡಿದೆ; ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ಥಾನದ ಈ ತ್ಯಾಗವನ್ನು ಪರಿಗಣಿಸಬೇಕಾಗಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next