ನವದೆಹಲಿ : ಪರಮಾಣು ಇಂಧನವನ್ನು ವಾಣಿಜ್ಯಿಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಚೀನಾ ಜಗತ್ತಿನ ಮೊದಲ ಸಣ್ಣ ಪ್ರಮಾಣದ ರಿಯಾಕ್ಟರ್‌ಗಳನ್ನು ನಿರ್ಮಿಸಲು ಶುರು ಮಾಡಿದೆ. ದಕ್ಷಿಣ ಚೀನಾದ ಹನಿನಾನ್ ಪ್ರಾಂತ್ಯದಲ್ಲಿ ಚೀನಾದ ರಾಷ್ಟ್ರೀಯ ಪರಮಾಣು ನಿಗಮ ನಿಯಮಿತ ಈ ಯೋಜನೆ ಕೈಗೆತ್ತಿಕೊಂಡಿದೆ. ಮೇ ಮತ್ತು ಜೂನ್‌ನಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿರುವುದು ಉಪಗ್ರಹಗಳಿಂದ ದೊರೆತ ಫೋಟೋಗಳನ್ನು ಪರಿಶೀಲಿಸಿದಾಗ ತಿಳಿದುಬಂದಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯ ಸುಬಿ ರೀಫ್ ಎಂಬ ದ್ವೀಪದ ಸುತ್ತ ವೈ-9 ಸರಕು ಸಾಗಣೆ ವಿಮಾನ ಮತ್ತು ಜೆಡ್-8 ಹೆಲಿಕಾಪ್ಟರ್ ನಿಯೋಜನೆ ಮಾಡಿರುವುದು ಉಪಗ್ರಹ ಫೋಟೋಗಳಿಂದ ದೃಢಪಟ್ಟಿದೆ. ಅಲ್ಲದೆ, ಸ್ಪಾರ್ಟ್ಲಿ ದ್ವೀಪದ ಸಮೀಪವೇ ಇರುವ ಮತ್ತೂಂದು ದ್ವೀಪ, ಮಿಸ್ಚೀಫ್ ರೀಫ್ ಸುತ್ತಮುತ್ತ ವಿಮಾನ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗಿದೆ. ಈ ದ್ವೀಪ ಸಮೂಹಗಳು ತಮಗೆ ಸೇರಿದ್ದು ಎಂದು ತೈವಾನ್, ವಿಯೆಟ್ನಾಮ್, ಫಿಲಿಪ್ಪೀನ್ಸ್, ಮಲೇಷ್ಯಾ ಮತ್ತು ಚೀನಾ ವಾದಿಸುತ್ತಿವೆ. ಆದರೆ, 2018ರಿಂದ ಚೀನಾ ಸೇನೆ ಈ ಪ್ರದೇಶದಲ್ಲಿ ಹೆಚ್ಚಿನ ಪಾರಮ್ಯ ಸಾಧಿಸುತ್ತಿದೆ.
ಇದನ್ನೂ ಓದಿ : ಮುಂದಿನ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ : ಶೈಕ್ಷಣಿಕ ಚಟುವಟಿಕೆ ಇನ್ನಷ್ಟು ಚುರುಕು
ಈ ಬಗ್ಗೆ ವಾಷಿಂಗ್ಟನ್ ಪೋಸ್ಟ್ ಜತೆಗೆ ಮಾತನಾಡಿದ ಅಮೆರಿಕದ ನೌಕಾಪಡೆಯ ನಿವೃತ್ತ ಅಧಿಕಾರಿ ಜೆ.ಮೈಕೆಲ್ ಧಮ್, ಈ ವರ್ಷ ಸುಬಿ ಮತ್ತು ಮಿಸಿcàಫ್ ರೀಫ್ ಸುತ್ತ ಚೀನಾದ ವಿಶೇಷ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ನಿಯೋಜನೆಯಾಗಲಿವೆ. ಇದರ ಜತೆಗೆ ದ್ವೀಪ ಸಮೂಹಕ್ಕೆ ಮತ್ತಷ್ಟು ರಕ್ಷಣೆ ನೀಡುವ ನಿಟ್ಟಿನಲ್ಲಿ ಗಸ್ತು ವಿಮಾನಗಳು, ಕ್ಷಿಪಣಿ ಛೇದನ ವ್ಯವಸ್ಥೆಯನ್ನು ನಿಯೋಜಿಸಲಿದೆ ಎಂದು ಹೇಳಿದ್ದಾರೆ.
ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿ ಪ್ರದೇಶದಲ್ಲಿ ಚೀನಾ ಸೇನೆ ನಿಯೋಜನೆ ಹೆಚ್ಚುವುದರಿಂದ ಅಮೆರಿಕ ಕೂಡ ಕ್ರುದ್ಧಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದರ ಜತೆಗೆ ಪೂರ್ವ ಏಷ್ಯಾದ ರಾಷ್ಟ್ರಗಳೂ ಕೂಡ ಚೀನಾದ ಪ್ರದೇಶ ವಿಸ್ತರಣಾ ನೀತಿ ವಿರುದ್ಧ ಬಹಿರಂಗವಾಗಿಯೇ ಆಕ್ಷೇಪ ಎತ್ತುವ ಸಾಧ್ಯತೆ ಇದೆ ಎಂದು ಜಿಯೋಪೊಲಿಟಿಕಲ್ ಫ್ಯೂಚರ್ ಸಂಸ್ಥೆಯ ಫಿಲಿಪ್ ಆರ್ಕರ್ಡ್ ಹೇಳಿದ್ದಾರೆ.