Advertisement
ಕೋವಿಡ್ ಸೋಂಕುಗಳ ಪತ್ತೆಗಳು ಇತ್ತೀಚ್ಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದರೂ,ಹೆಚ್ಚಿನ ಜನರು ಮಾಸ್ಕ್ ಗಳನ್ನು ಧರಿಸಿ ಹೊರ ಬರುತ್ತಿದ್ದಾರೆ. ಮಾಸ್ಕ ಗಳು ಚೀನದಲ್ಲಿ ಕೊರೊನಾ ಪ್ರಕರಣವನ್ನು ಕಡಿಮೆ ಆಗಲು ಒಂದು ಕಾರಣವಾಗಿದೆ. ನಾವು ಸುರಕ್ಷಿತರಾಗಿದ್ದಾರೆಂದು ಎಂದು ಜನರು ಹೇಳುತ್ತಾರೆ. ಈ ಎಲ್ಲ ಕಾರಣಗಳಿಂದ ಬೀಜಿಂಗ್ ಎರಡನೇ ಬಾರಿಗೆ ಕೋವಿಡ್ ನಿಯಂತ್ರಣ ನಿರ್ಬಂಧಗಳನ್ನು ಸರಕಾರ ಸಡಿಲಗೊಳಿಸಿದೆ. ಈ ಹಿಂದೆ ಎಪ್ರಿಲ್‌ನಲ್ಲಿ ಸ್ಥಳೀಯ ಆಡಳಿತ ಮಾಸ್ಕ್ ಇಲ್ಲದೇ ಹೊರಬರಲು ಅವಕಾಶ ಮಾಡಿಕೊಟ್ಟಿತ್ತು.
ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ (ಮೆಕ್ಸಿಕೋ, ಬ್ರೆಜಿಲ್, ಪೆರು ಮತ್ತು ಅರ್ಜೆಂಟೀನಾ), ಸಾವಿನ ಸಂಖ್ಯೆ 2 ಲಕ್ಷ ದಾಟಿದೆ. ಈ ನಾಲ್ಕು ದೇಶಗಳಲ್ಲಿ 3.5 ಮಿಲಿಯನ್ ಸೋಂಕು ದಾಖಲಾಗಿದೆ. ಒಟ್ಟಾರೆ ಪ್ರಕರಣಗಳಲ್ಲಿ ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. 5 ದಶಲಕ್ಷಕ್ಕೂ ಹೆಚ್ಚು ಸೋಂಕಿಗೆ ಒಳಗಾದ ಮೆಕ್ಸಿಕೊ ಎರಡನೇ ಸ್ಥಾನದಲ್ಲಿದೆ. ಇದರೊಂದಿಗೆ ಪೆರು ಮತ್ತು ಅರ್ಜೆಂಟೀನಾದಲ್ಲೂ ಹೊಸ ಪ್ರಕರಣಗಳು ಹೆಚ್ಚಿವೆ. ಕಳೆದ ವಾರದಲ್ಲಿ ಈ ದೇಶಗಳಲ್ಲಿ ಪ್ರತಿದಿನ ಸುಮಾರು 3 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ.