ಹೊಸದಿಲ್ಲಿ: ಭಾರತ- ಚೀನ ಗಡಿ ಭಾಗದಲ್ಲಿ ಚೀನ ಅಕ್ರಮ ನಿರ್ಮಾಣ ಗಳನ್ನು ಮಾಡುತ್ತಿರುವ ವಿಚಾರ ಆತಂಕಕಾರಿಯಾಗಿದೆ ಎಂದು ಅಮೆರಿ ಕದ ಸೇನಾಧ್ಯಕ್ಷ ಜನರಲ್ ಚಾರ್ಲ್ಸ್ ಎ. ಫ್ಲೈಯಿನ್ ಅವರು ಹೇಳಿದ ಬೆನ್ನಲ್ಲೇ, ಪೂರ್ವ ಲಡಾಖ್‌ನ ಬಳಿ ಚೀನದ ಗಡಿ ರೇಖೆಯೊಳಗಿರುವ ಹೋಟನ್ ವಾಯು ನೆಲೆಗೆ ಚೀನದ 24 ಯುದ್ಧ ವಿಮಾನಗಳು ಆಗಮಿಸಿವೆ.
ಕೇಂದ್ರ ಸರಕಾರದ ಮೂಲಗಳು ಕೂಡ ಇದನ್ನು ಖಚಿತಪಡಿಸಿದ್ದು, “ವಾಯು ದಾಳಿಯಲ್ಲಿ ಮಂಚೂಣಿ ಯಲ್ಲಿ ಕಾರ್ಯನಿರ್ವಹಿಸುವ ಜೆ-11, ಜೆ-20 ಯುದ್ಧ ವಿಮಾನಗಳನ್ನು ಹೋಟನ್ ವಾಯುನೆಲೆಯಲ್ಲಿ ತಂದು ನಿಲ್ಲಿಸಲಾಗಿದೆ’ ಎಂದು ಹೇಳಿವೆ.
ಈ ಮೊದಲು ಇದೇ ವಾಯು ನೆಲೆಯಲ್ಲಿ ಮಿಗ್-21 ವಿಮಾನಗ ಳಿದ್ದು, ಅವುಗಳನ್ನು ಕ್ರಮೇಣ ನೇಪಥ್ಯಕ್ಕೆ ಸರಿಸಿದ ಚೀನ, ಅವುಗಳ ಬದಲಿಗೆ ಅತ್ಯಂತ ಶಕ್ತಿಶಾಲಿಯಾದ ಹಾಗೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಿಮಾನ ಗಳನ್ನು ತಂದು ನಿಲ್ಲಿಸಿದೆ. ಜತೆಗೆ, ಮತ್ತಷ್ಟು ವಿಮಾನಗಳನ್ನು ತಂದು ನಿಲ್ಲಿಸಲು ಅನುಕೂಲವಾಗುವ ನಿಟ್ಟಿ ನಲ್ಲಿ ಇನ್ನೂ ಕೆಲವಾರು ಕಡೆಗೆ ಏರ್‌ಫೀಲ್ಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಹದ್ದಿನ ಕಣ್ಣಿಡಲಾಗಿದೆ: ಪೂರ್ವ ಲಡಾಖ್‌ನ ಬಳಿ ಆಗಿರುವ ಬೆಳವಣಿ ಗೆಯ ಕಡೆ ಹದ್ದಿನ ಕಣ್ಣಿಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಹೋಟನ್ ಮಾತ್ರವಲ್ಲದೆ, ಗಡಿ ರೇಖೆಯ ಬಳಿಯಿರುವ ಚೀನ ಇನ್ನಿತರ ವಾಯು ನೆಲೆಗಳ ಭಾಗಗಳಾದ ಗರ್ ಗುನ್ಸಾ, ಹಾಪ್ಪಿಂಗ್, ಡ್ಕೊಂಡಾ ಡಿಝೊಂಗ್ ಹಾಗೂ ಪಗತ್ ವಾಯು ನೆಲೆಗಳ ಮೇಲೂ ಗಮನ ಇಡಲಾಗಿದೆ ಎಂದು ಭಾರತ ತಿಳಿಸಿದೆ.