Advertisement

ಹಂದಿಗಳ ತಳಿ ಸುಧಾರಣೆಗೆ ಮುಂದಾದ ಚೀನಾ..! ಉದ್ದೇಶವೇನು..?

03:34 PM Apr 29, 2021 | Team Udayavani |

ಚೀನಾ : ಚೀನಾ ದೇಶದ ಆಹಾರ ಪದ್ಧತಿಯೇ ಬೇರೆ. ಕಾಡು ಸಸ್ತನಿಗಳಿಗೆ, ಕಾಡು ಪ್ರಾಣಿಗಳ ಮಾಂಸಗಳಿಗೆ ಉಪ್ಪು ಖಾರ ಹಾಕಿ ತಿನ್ನುವುದೇ ಅಲ್ಲಿನ ಆಹಾರ ಪದ್ಧತಿ. ಅದಿಲ್ಲದೇ ಚೀನಾದ ಜನರಿಗೆ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಅಂತನ್ನಬಹುದೇನೋ.

Advertisement

ಹೌದು, ಮುಂಬರುವ ದಶಕಗಳಲ್ಲಿ ಮಾಂಸಗಳು ಹೆಚ್ಚು ಒದಗಿಸುತ್ತವೆ ಎಂಬ ಕಾರಣದಿಂದ ಚೀನಾ ತನ್ನ ಹಂದಿ ಮರಿಗಳ ತಳಿಶಾಸ್ತ್ರವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಅವುಗಳ ವಂಶವಾಹಿಯಲ್ಲಿ ಸುಧಾರಣೆ ತಂದು ಹೆಚ್ಚು ಮಾಂಸ ಉತ್ಪಾಸಿಸುವಂತೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಓದಿ : ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದಲೇ ಲಸಿಕೆ ನೀಡುವುದು ಅನುಮಾನ!

ಈ ಬಗ್ಗೆ ಪ್ರತಿಕ್ರಿಯಿಸಿದ ಅಲ್ಲಿನ ಕೃಷಿ ಸಚಿವಾಲಯದ ನ್ಯಾಶನಲ್ ಲೈವ್ ಸ್ಟಾಕ್ ಆ್ಯಂಡ್ ಪೌಲ್ಟ್ರಿ ಜೆನೆಟಿಕ್ ರಿಸೋರ್ಸ್ ಕಮಿಟಿಯ ಅಧಿಕಾರಿ ಶಿ ಜಿಯಾನ್‌ಜಾಂಗ್, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ, ಬಿತ್ತನೆ  ಉತ್ಪಾದಕತೆ ಚೀನಾದಲ್ಲಿ ಶೇಕಡಾ 30 ರಷ್ಟು ಕಡಿಮೆಯಾಗಿದೆ. ಹಸುಗಳು ಕೇವಲ 80 ಪ್ರತಿಶತದಷ್ಟು ಹಾಲನ್ನು ಮಾತ್ರ ನೀಡುತ್ತಿವೆ ಎಂದು ಹೇಳಿದ್ದಾರೆ.

ಹಂದಿ ಮತ್ತು ಕೋಳಿ ಸಾಕಾಣಿಕೆ ಕೇಂದ್ರಗಳಿಗೂ ಈ ಕ್ರಮ ಉತ್ತೇಜಿಸಿದಂತಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.

Advertisement

ಬಿಳಿ ಗರಿಯನ್ನು ಹೊಂದಿರುವ ಬ್ರಾಯ್ಲರ್ ಕೋಳಿಗಳನ್ನು ಉತ್ಪಾದಿಸಲು ಚೀನಾ ಆಮದಿನ ಮೇಲೆ ಅವಲಂಬಿತವಾಗಿದೆ. ಚೀನಾದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದ್ದು,ದೇಶದ ಬೃಹತ್ ಮತ್ತು ಹೆಚ್ಚುತ್ತಿರುವ  ಜನಸಂಖ್ಯೆಗೆ ಬೇಕಾಗುವಷ್ಟು ಮಾಂಸಗಳು ಲಭ್ಯವಿರುವಂತೆ ಉತ್ಪಾದನೆ ಈ ಕ್ರಮದ ಹಿಂದಿನ ಗುರಿಯಾಗಿದೆ ಎಂದು ಬ್ಲೂಮ್‌ ಬರ್ಗ್ ವರದಿ ತಿಳಿಸಿದೆ.

ಇನ್ನು, ಇತ್ತೀಚೆಗೆಷ್ಟೇ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಯಾವುದೇ ಮಾರುಕಟ್ಟೆಯಲ್ಲಿ ಸಸ್ತನಿಗಳ ಮಾಂಸವನ್ನು, ಕಾಡು ಪ್ರಾಣಿಗಳ ಮಾಂಸವನ್ನು ಮಾರುವುದಕ್ಕೆ ನಿಷೇಧ ಹೇರಿತ್ತು.

ಓದಿ : ಪ್ಲಾಸ್ಮಾ ದಾನ ಮಾಡಿ; ಸೋಂಕಿತರ ಜೀವ ಉಳಿಸಿ

Advertisement

Udayavani is now on Telegram. Click here to join our channel and stay updated with the latest news.

Next