Advertisement

ಚೀನ ಹಿಡಿತಕ್ಕೆ ಬಂದ ಶ್ರೀಲಂಕಾ : ವಿವಾದಿತ ಮಸೂದೆಗೆ ಒಪ್ಪಿಗೆ

02:48 AM May 27, 2021 | Team Udayavani |

ಕೊಲಂಬೋ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಶ್ರೀಲಂಕಾ ಸಂಸತ್‌ ಕೊಲೊಂಬೊ ಬಂದರು ನಗರ ಆರ್ಥಿಕ ಆಯೋಗ ಮಸೂದೆಗೆ ಅನುಮೋದನೆ ನೀಡಿದೆ. ಈ ಮಸೂದೆ ಬಗ್ಗೆ ಅಲ್ಲಿನ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇಂಥ ಕ್ರಮದಿಂದಾಗಿ ದೇಶದ ಮೇಲೆ ಚೀನ ಸರಕಾರದ ಹಿಡಿತ ಮತ್ತಷ್ಟು ಬಿಗಿಗೊಳ್ಳಲಿದೆ ಎಂದು ಆರೋಪಿಸಿವೆ. 225 ಸದಸ್ಯ ಬಲದ ಸಂಸತ್‌ನಲ್ಲಿ ಮಸೂದೆಯ ಪರ 148 ಮತ್ತು ವಿರೋಧವಾಗಿ 59 ಮತಗಳು ಬಿದ್ದಿವೆ.

Advertisement

ಮಸೂದೆಯನ್ನು ಸಮರ್ಥಿಸಿಕೊಂಡ ಸರಕಾರ ಸುಪ್ರೀಂ ಕೋರ್ಟ್‌ ನಿರ್ದೇಶನದ ಅನ್ವಯವೇ ವಿಧೇಯಕಕ್ಕೆ ತಿದ್ದುಪಡಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿಕೊಂಡಿತು. ಮಸೂದೆಯ ಕೆಲವು ಅಂಶಗಳಲ್ಲಿ ಬದಲು ಮಾಡಬೇಕು ಎಂದು ದ್ವೀಪ ರಾಷ್ಟ್ರದ ಸುಪ್ರೀಂಕೋರ್ಟ್‌ ಸೂಚಿಸಿತ್ತು. 1.4 ಬಿಲಿಯನ್‌ ಡಾಲರ್‌ ಮೊತ್ತದ ಕೊಲಂಬೋ ಮಸೂದೆ ಚೀನದ “ಮಾರಿಟೈಮ್‌ ಸಿಲ್ಕ್ ರೂಟ್‌’ನ ಯೋಜನೆ ವ್ಯಾಪ್ತಿಯಲ್ಲಿದೆ. ಅಲ್ಲಿ ಚೀನ ಸರಕಾರ ಬೃಹತ್‌ ಪ್ರಮಾಣದಲ್ಲಿ ಹೂಡಿಕೆ ಮಾಡಲಿದೆ. ದಕ್ಷಿಣ ಚೀನ ಸಮುದ್ರ ವ್ಯಾಪ್ತಿಯಲ್ಲಿ ಈಗಾಗಲೇ ಹಿಡಿತ ಸಾಧಿಸುತ್ತಿರುವ ಡ್ರ್ಯಾಗನ್‌, ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿಯೂ ಮುಂದಿನ ದಿನಗಳಲ್ಲಿ ಶ್ರೀಲಂಕೆಯ ಮೂಲಕ ಪರೋಕ್ಷವಾಗಿ ತನ್ನ ನಿಲುವುಗಳನ್ನು ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ. ದ್ವೀಪರಾಷ್ಟ್ರದ ಹಂಬಂತೋಟ ಬಂದರನ್ನು ಚೀನ ಕಂಪೆನಿಯೊಂದಕ್ಕೆ 99 ವರ್ಷಗಳ ಕಾಲ ಭೋಗ್ಯಕ್ಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next