Advertisement

ಗುಳೆ ತಪ್ಪಿಸಲು ಕಲಬುರ್ಗಿಗೆ ಚೀನಾ ಕಂಪನಿ: ಜಾಧವ

02:27 PM May 12, 2020 | Suhan S |

ವಾಡಿ: ಉದ್ಯೋಗ ಅರಸಿ ವಿವಿಧ ರಾಜ್ಯಗಳಿಗೆ ಗುಳೆ ಹೋಗುವ ಕಾರ್ಮಿಕರ ಗೋಳು ತಪ್ಪಿಸಲು ಕಲಬುರಗಿಯಲ್ಲಿ ಚೀನಾ ಕಂಪನಿಗಳ ಸ್ಥಾಪನೆಗೆ ಚಿಂತನೆ ನಡೆದಿದೆ. ಮುಚ್ಚಿರುವಶಹಾಬಾದ ಮತ್ತು ಕುರಕುಂಟಾ ಸಿಮೆಂಟ್‌ ಕಾರ್ಖಾನೆಗಳ ಮರು ಸ್ಥಾಪನೆಗೂ ಚರ್ಚೆಗಳು ನಡೆದಿವೆ ಎಂದು ಸಂಸದ ಡಾ|ಉಮೇಶ ಜಾಧವ ತಿಳಿಸಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ಹೊಸ ಕಾರ್ಖಾನೆಗಳನ್ನು ತರಲು ಚಿಂತನೆ ನಡೆದಿದೆ. ಚೀನಾ ದೇಶದ ನೂರಾರು ಕಂಪನಿಗಳು ವಿವಿಧ ದೇಶಗಳಲ್ಲಿ ಹೂಡಿಕೆ ಮಾಡಲು ಮುಂದಾಗಿವೆ. ಅವುಗಳನ್ನು ಕಲಬುರಗಿಗೆ ತರುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ. ಬಹಳ ವರ್ಷಗಳಿಂದ ಮುಚ್ಚಿರುವ ಕುರಕುಂಟಾ ಸಿಸಿಐ ಸಿಮೆಂಟ್‌ ಕಂಪನಿ ಮತ್ತು ಶಹಾಬಾದ ನಗರದ ಜೆಪಿ ಮತ್ತು ಜೆಇ ಕಾರ್ಖಾನೆಗಳ ದಾಖಲೆಗಳು ಸಿಕ್ಕಿವೆ. ಕಾನೂನು ಹೋರಾಟದ ಮೂಲಕ ಮರು ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

ಇದಾದ ಬಳಿಕ ಎಸಿಸಿ ಗ್ಯಾಲಕ್ಸಿ ಗೆಸ್ಟ್‌ ಹೌಸ್‌ನಲ್ಲಿ ಸಭೆ ನಡೆಸಿದ ಡಾ| ಉಮೇಶ ಜಾಧವ, ಕೇಂದ್ರ ಸರಕಾರ ಅಕ್ಕಿ ಜತೆಗೆ ಬೇಳೆ ವಿತರಿಸುತ್ತಿದೆ. ಕೆಲವು ತಾಲೂಕುಗಳ ನ್ಯಾಯಬೆಲೆ ಅಂಗಡಿಗಳಿಗೆ ಕಳಪೆ ಬೇಳೆ ಪೂರೈಕೆಯಾಗಿರುವುದು ಬೆಳಕಿಗೆ ಬಂದಿದೆ. ಚಿತ್ತಾಪುರ ತಾಲೂಕಿಗೆ ಕಳಪೆ ಬೇಳೆ ಬಂದಿದ್ದರೆ ತಕ್ಷಣ ಅವುಗಳನ್ನು ವಾಪಸ್‌ ಕಳಿಸಿರಿ. ಪಡಿತರದಾರರಿಗೆ ಕಳಪೆ ಬೇಳೆ ವಿತರಣೆಯಾದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಅವರಿಗೆ ಎಚ್ಚರಿಕೆ ನೀಡಿದರು.

ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿಪಂ ಸದಸ್ಯ ಅರವಿಂದ ಚವ್ಹಾಣ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಹಿರಿಯ ಮುಖಂಡರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಶಿವಲಿಂಗಪ್ಪ ವಾಡೇದ, ಅಣ್ಣಾರಾವ ಬಾಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next