Advertisement

ಇಬ್ಬರು ಚೀನೀಯರ ಹಂತಕರನ್ನು ಶಿಕ್ಷಿಸಲು ಪಾಕಿಗೆ ಚೀನ ಆಗ್ರಹ

03:50 PM Oct 31, 2017 | Team Udayavani |

ಬೀಜಿಂಗ್‌ : ಬಲೂಚಿಸ್ಥಾನದ ಕ್ವೆಟ್ಟಾದಲ್ಲಿನ ಜಿನ್ನಾ ಪಟ್ಟಣದಿಂದ ಕಳೆದ ಮೇ 24ರಂದು ಐಸಿಸ್‌ ಉಗ್ರರಿಂದ ಅಪಹರಿಸಲ್ಪಟ್ಟು ಹತ್ಯೆಗೀಡಾಗಿದ್ದ ಚೀನದ ಜೋಡಿ ಲೀ ಝಿಂಗ್‌ ಯಾಂಗ್‌ (24) ಮತ್ತು ಮೆಂಗ್‌ ಲೀ ಸೀ (26) ಇವರ ಕೊಲೆಗಾರರನ್ನು ಹಿಡಿದು ಕಾನೂನಿನ ಪ್ರಕಾರ ಶಿಕ್ಷಿಸುವಂತೆ ಚೀನ, ತನ್ನ ಸರ್ವ ಋತು ಮಿತ್ರನಾಗಿರುವ ಪಾಕಿಸ್ಥಾನವನ್ನು ಒತ್ತಾಯಿಸಿದೆ. 

Advertisement

ವ್ಯಾಪಾರ ಚಟುವಟಿಕಗಳಿಗೆಂದು ಬಂದ ಈ ಚೀನೀ ಜೋಡಿ ಉರ್ದು ಕಲಿಯುವ ನೆಪದಲ್ಲಿ “ಬೋಧನೆ’ಗೆ ತೊಡಗಿತ್ತು ಎಂದು ಪಾಕ್‌ ಸರಕಾರ ಈ ಮೊದಲು ಚೀನಕ್ಕೆ ತನ್ನ ಆಕ್ಷೇಪವನ್ನು ತಿಳಿಸಿತ್ತು. ಚೀನದ ಈ ಜೋಡಿಯನ್ನು ಅಪಹರಿಸಿ ಕೊಂದವರು ನಾವೇ ಎಂದು ಐಸಿಸ್‌ ಉಗ್ರರು ಹೇಳಿಕೊಂಡಿದ್ದರು. 

“ಚೀನ ಎಲ್ಲ ರೀತಿಯ ಭಯೋತ್ಪಾದನೆಯನ್ನು ಮತ್ತು ಅಮಾಯಕರ ಮೇಲಿನ ಹಿಂಸಾ ಕೃತ್ಯಗಳನ್ನು  ಖಂಡಿಸುತ್ತದೆ. ವಿದೇಶಗಳಲ್ಲಿನ ಚೀನೀಯರ ಭದ್ರತೆಗೆ ಬೀಜಿಂಗ್‌ ಅತ್ಯಧಿಕ ಮಹತ್ವವನ್ನು ನೀಡುತ್ತದೆ. ಅಂತೆಯೇ ಉಗ್ರರಿಂದ ಅಪಹರಿಸಲ್ಪಟ್ಟ ಹತರಾಗಿರುವ ಚೀನೀ ಜೋಡಿಯ ಕೊಲೆಗಾರರನ್ನು ಪತ್ತೆ ಹಚ್ಚಿ ಅವರನ್ನು ಕಾನೂನಿನ ಕೈಗೆ ಒಪ್ಪಿಸಿ ಶಿಕ್ಷಿಸುವುದಕ್ಕೆ ಪಾಕಿಸ್ಥಾನಕ್ಕೆ ಚೀನ ಸರ್ವ ರೀತಿಯಲ್ಲಿ ನೆರವಾಗಬಯಸುತ್ತದೆ’ ಎಂದು ಚೀನದ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next