ಪಣಜಿ: ಸದ್ಯ ಕೋವಿಡ್ ಸೋಂಕು ಜನ ಜೀವನವನ್ನು ಕಹಿಯಾಗಿಸಿದ್ದರೆ, ಗೋವಾದಲ್ಲಿ ಕೆಂಪು ಖಾರದ ಮೆಣಸು ಭಾರಿ ಬೆಲೆಯೇರಿಕೆಯಿಂದಾಗಿ ಇನ್ನಷ್ಟು ಖಾರ ಎಂಬಂತಾಗಿದೆ.
ಗೋವಾದ ಕೆಂಪು ಖಾರದ ಮೆಣಸು ಪ್ರತಿ ಕೆ.ಜಿಗೆ 1200 ರೂಗೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೌದು ಗೋವಾದಲ್ಲಿ ವಿಶೇಷವಾಗಿ ಮಾಂಸಹಾರ ಪದಾರ್ಥದಲ್ಲಿ ಬಳಕೆಯಾಗುವ ಕೆಂಪು ಖಾರದ ಮೆಣಸಿಗೆ ಬಂಗಾರದ ಬೆಲೆ ಬಂದಿದೆ. ಸದ್ಯ ಅಕಾಲಿಕ ಮಳೆಯಿಂದಾಗಿ ಗೋವಾದಲ್ಲಿ ಬೆಳೆಯುವ ಈ ಕೆಂಪು ಖಾರದ ಮೆಣಸಿನ ಬೆಳೆ ಹಾನಿಯಾಗಿದೆ. ಇದರಿಂದಾಗಿ ಬೆಳೆ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಗೋವಾದ ಕೆಂಪು ಖಾರದ ಮೆಣಸು ಪ್ರತಿ ಕೆಜಿಗೆ 1200 ರೂ.ಗೆ ತಲುಪಿದೆ.
ಇದನ್ನೂ ಓದಿ:ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ :ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ
ಗೋವಾದ ಮಾರುಕಟ್ಟೆಗಳಲ್ಲಿ ಕೆಂಪು ಖಾರದ ಮೆಣಸನ್ನು ಸದ್ಯ ಪ್ರತಿ ಕೆಜಿಗೆ 1200 ರೂಗಳಂತೆ ಮಾರಾಟ ಮಾಡಲಾಗುತ್ತಿದೆ. ಕಳೆದ ತಿಂಗಳು ಈ ಮೆಣಸಿನ ಬೆಲೆ ಪ್ರತಿ ಕೆಜಿಗೆ 1000 ರೂ ಇತ್ತು. ಆದರೆ ಈ ಬೆಲೆ ಇದೀಗ ಇನ್ನೂ 200 ರೂ. ಬೆಲೆ ಏರಿಕೆಯಾಗಿದೆ.