Advertisement
ನಗರದ ರಂಗ ಮಂದಿರದಲ್ಲಿ ಶನಿವಾರ ನಡೆದ ನೊಬೆಲ್ ಶಾಂತಿ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಅವರ ನೇತೃತ್ವದ “ಭಾರತ ಯಾತ್ರಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳೇ ನಮ್ಮ ದೊಡ್ಡ ಆಸ್ತಿಯಿದ್ದಂತೆ. ಮಕ್ಕಳ ಸಂರಕ್ಷಣೆಗಾಗಿ ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನಗೊಳ್ಳಬೇಕು. ಬಾಲ ಕಾರ್ಮಿಕ ಪದ್ಧತಿ, ಭ್ರೂಣ ಹತ್ಯೆ, ಮಕ್ಕಳ ಸಾಗಣೆ, ಮಕ್ಕಳ ವ್ಯಾಪಾರದಂತಹ ಕೃತ್ಯಗಳು ಕೊನೆಗೊಳ್ಳಬೇಕು. ಈ ಕೆಟ್ಟ ಪದ್ಧತಿಗಳನ್ನು ತೊಲಗಿಸುವ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು. ಮಕ್ಕಳ ಸಂರಕ್ಷಣೆಯಲ್ಲಿ ತಂದೆ- ತಾಯಂದಿರ ಪಾತ್ರವೂ ಇದೆ ಎಂಬುದನ್ನು ಅರಿಯಬೇಕು ಎಂದರು.
ಜಾಗೃತರಾಗಬೇಕಿದೆ. ಮಕ್ಕಳ ಸಮಸ್ಯೆಗಳು ಗೊತ್ತಿದ್ದೂ ಆ ಬಗ್ಗೆ ಧ್ವನಿ ಎತ್ತದಿರುವುದು ಸರಿಯಲ್ಲ. ನಾವೆಲ್ಲರೂ ಸೇರಿ ಹೃದಯವನ್ನು ಬದಲಿಸುವ ಕಾರ್ಯ ಮಾಡಬೇಕಿದೆ. ಮಕ್ಕಳಿಗೆ ಸಂಪತ್ತನ್ನು ಕೊಡುವುದು ಬೇಡ, ಅವರಿಗೆ ಪ್ರೀತಿಯನ್ನು ಧಾರೆ ಎರೆಯೋಣ ಎಂದು ಹೇಳಿದರು.
Related Articles
Advertisement
ಮಕ್ಕಳ ಹಕ್ಕುಗಳ ಹೋರಾಟಗಾರ ಭುವನ ರೀಬು ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಸಕರ ರಹೀಂ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಬಳಿಕ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ ತಡೆ ಜಾಗ್ರತಿ ಮೂಡಿಸುವ ನಾಟಕಗಳು ವಿವಿಧ ಶಾಲಾ ಮಕ್ಕಳಿಂದ ನಡೆದವು.
ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಬುಡಾ ಅಧ್ಯಕ್ಷ ಅಧ್ಯಕ್ಷ ಸಂಜಯ ಜಾಗೀರದಾರ್, ಜಿಪಂ ಸಿಇಒಡಾ| ಆರ್. ಸೆಲ್ವಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಐ.ಎಚ್ ಪಾಂಚಾಳೆ, ಮಕ್ಕಳ
ರಕ್ಷಣಾ ಅ ಕಾರಿ ಪಾಂಡುರಂಗ ಬಿ., ಪ್ರಶಾಂತ ಬಿರಾದಾರ, ಸಂಘ ಸಂಸ್ಥೆಗಳ ಪ್ರಮುಖರಾದ ಡಾ| ಅಬ್ದುಲ್ ಖದೀರ, ಪುನಿತ ಸಾಳೆ, ಬಸವಕುಮಾರ ಪಾಟೀಲ ಪಾಲ್ಗೊಂಡಿದ್ದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌರಿಶಂಕರ ಪರ್ತಾಪುರೆ ನಿರೂಪಿಸಿದರು. ರತ್ನಾ ಪಾಟೀಲ ಸ್ವಾಗತಿಸಿದರು. ಪ್ರಕಾಶ ಡೋಳೆ ವಂದಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕೈಲಾಸ್ ಸತ್ಯಾರ್ಥಿ ಮಕ್ಕಳ ಫೌಂಡೇಶನ್, ಸಮೃದ್ಧಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.