Advertisement

ವ್ಯಕ್ತಿತ್ವ ವಿಕಸನಕ್ಕೆ ಮೊದಲ ಆದ್ಯತೆ ನೀಡಿ: ಪೀರಜಾದೆ

04:17 PM Sep 07, 2018 | Team Udayavani |

ಹಾನಗಲ್ಲ: ಆಧುನಿಕ ಶೈಕ್ಷಣಿಕ ಸಾಮಾಜಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೆಶಕ ಎಸ್‌.ಸಿ.ಪೀರಜಾದೆ ಹೇಳಿದರು.

Advertisement

ಗುರುವಾರ ತಾಲೂಕಿನ ಅರಳೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸೌಲಭ್ಯಗಳ ಕೊರತೆಯಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಪ್ರತಿಭೆ ಮೆರೆಯುತ್ತಿರುವುದು ಮೆಚ್ಚುಗೆಯ ಸಂಗತಿ. ಜ್ಞಾನ ಸಂಪಾದನೆಯ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಬೆಳವಣಿಗೆಯೂ ಬೇಕು. ನಾವು ಕೇವಲ ಅಂಕಪಟ್ಟಿಯ ಶಿಕ್ಷಣಕ್ಕೆ ಮುಂದಾಗದೇ ಅದರೊಂದಿಗೆ ದೇಶ ಪ್ರೇಮ, ದುರ್ಬಲರಿಗೆ ಸಹಾಯ ಸಹಕಾರವನ್ನು ನೀಡುವುದನ್ನೂ ಕಲಿಯಬೇಕು ಎಂದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ತಿಪ್ಪನಗೌಡ ಪಾಟೀಲ, ಆಟಗಳಲ್ಲಿ ನಿರ್ಣಾಯಕರ ತೀರ್ಮಾನಕ್ಕೆ ತಲೆಬಾಗಲೇಬೇಕು. ಕ್ರೀಡೆ ಸ್ಪರ್ಧಾತ್ಮಕವಾಗಿರಬೇಕೆ ಹೊರತು ಇದರಲ್ಲಿ ದ್ವೇಶಕ್ಕೆ ಅವಕಾಶವಿರಬಾರದು ಎಂದರು.

ಸರ್ಕಾರಿ ಪ್ರೌಢಶಾಲಾ ಸುಧಾರಣಾ ಸಮಿತಿ ಉಪಾಧ್ಯಕ್ಷ ಜಗದೀಶಯ್ಯ ಹಿರೇಮಠ ಕ್ರೀಡಾ ಜ್ಯೋತಿ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಎಚ್‌.ಜಿ.ಅರುಣಕುಮಾರ ಅಧ್ಯಕ್ಷತೆ ವಹಿಸಿದ್ದರು. ಡಾ| ಎನ್‌.ಎಫ್‌. ಕಮ್ಮಾರ, ಗ್ರಾಪಂ ಅಧ್ಯಕ್ಷ ಉದಯ ತಳವಾರ, ಉಪಾಧ್ಯಕ್ಷೆ ಪರ್ವಿನಬಾನು ಕಮ್ಮಾರ, ಪ್ರಾಥಮಿಕ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಚಿನ್ನಪ್ಪ ಬಡಿಗೇರ, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಟಿ.ಕಲಗೌಡ್ರ, ಸಾಹಿತಿ ಪ್ರೊ| ಮಾರುತಿ ಶಿಡ್ಲಾಪೂರ, ಕಾಲೇಜು ಅಭಿವೃದ್ಧಿ ಸಮತಿ ಸದಸ್ಯರಾದ ಬಸವರಾಜ ತೋಟದ, ನಾಗಪ್ಪ ದೊಡ್ಡಮನಿ, ಮಾರುತಿ ಕರಭೀಮಣ್ಣನವರ, ಸುಧಾಗಾಜಿಪುರ, ಜಯಮ್ಮ ಮರೆಕ್ಕನವರ, ಪ್ರಾಚಾರ್ಯ ಎಂ.ಬಿ.ಮುದಗೋಳ, ಗ್ರಾಪಂ ಸದಸ್ಯರಾದ ನಾಗಪ್ಪ ಚಿಕ್ಕೇರಿ, ಶಿವಕುಮಾರ ಸಣ್ಣಗೌಡರ, ಶೇಕಣ್ಣ ಗೂಳಿ, ಮಲ್ಲೇಶ ಕೂಡಲ, ಮುರಿಗೆಪ್ಪ ಡಂಬಳಪ್ಪನವರ, ಎಂ.ಪಿ.ಮೂಡೂರ, ಬಿ.ಆರ್‌.ಹಂಚಿನಮನಿ, ಸುಮಿತ್ರವ್ವ ಮಡಿವಾಳರ, ಸುಮಂಗಲಾ ನಾಯಿನೇಗಿಲ, ಆನಂದ ಮುದುಕಣ್ಣನವರ ಅತಿಥಿಗಳಾಗಿದ್ದರು. ಉಪನ್ಯಾಸಕ ಎಸ್‌.ಬಿ.ಕಮಾಟಿ ಸ್ವಾಗತಿಸಿದರು. ಉಪನ್ಯಾಸಕ ಗಣೇಶ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next