Advertisement

ಬಾಬಾ ಆಗಿ ಮಿಂಚಿದ ಪುಟಾಣಿಗಳು 

06:00 AM Nov 16, 2018 | |

ಶ್ರೀ ಸಾಯಿ ಸಾಂತ್ವನ ಮಂದಿರ ಶಂಕರಪುರ ಹಾಗೂ ಉಡುಪಿ ಕೊಡವೂರು ತೋಟದಮನೆ ಶಿರ್ಡಿ ಸಾಯಿ ಬಾಬಾ ಮಂದಿರ ಇವರ ಜಂಟಿ ಆಯೋಜನೆಯಲ್ಲಿ ಶಿರ್ಡಿ ಶ್ರೀಸಾಯಿಬಾಬಾ ಅವರ 183ನೇ ಜನ್ಮ ದಿನಾಚರಣೆ ಅಂಗವಾಗಿ ಉಡುಪಿಯ ಕೊಡವೂರು ಸಾಯಿ ಬಾಬಾ ಮಂದಿರದಲ್ಲಿ ಮಕ್ಕಳಿಗಾಗಿ ಸಾಯಿ ಬಾಬಾ ಛದ್ಮ ವೇಷ ಸ್ಪರ್ಧೆ ಜರಗಿತು. ಸಾಯಿ ಬಾಬಾರ ಕುರಿತಾದ ವೇಷಗಳು, ಜೀವನ ಕಥಾ ತುಣುಕುಗಳನ್ನು ಮಾತ್ರ ವೇದಿಕೆಯಲ್ಲಿ ಪ್ರದರ್ಶಿಸಲು ಅವಕಾಶವಿತ್ತು. ಮಕ್ಕಳು ಬಾಬಾರ ಜೀವನ ಗಾಥೆ, ಪವಾಡಗಳ ಬಗ್ಗೆ ಚುಟುಕು ಮೌನ ರೂಪಕಗಳನ್ನು ರಂಗದಲ್ಲಿ ತೋರಿಸಿ ಪ್ರಶಂಸೆಗೆ ಪಾತ್ರರಾದರು. 

Advertisement

 3 ರಿಂದ 6 ವರ್ಷದ ಒಳಗಿನ ಪುಟಾಣಿಗಳು ಮತ್ತು 7 ರಿಂದ 12 ವರ್ಷದೊಳಗಿನ ಮಕ್ಕಳು ಹೀಗೆ ಎರಡು ವಿಭಾಗದಲ್ಲಿ ಛದ್ಮ ವೇಷ ಸ್ಪರ್ಧೆಯು ನಡೆಯಿತು. ಸುಮಾರು 40 ಮಕ್ಕಳು ಭಾಗವಹಿಸಿ ಅಂದಿನ ಕಾಲಘಟ್ಟದಲ್ಲಿ ಶ್ರೀ ಸಾಯಿ ಬಾಬಾರು ಪವಾಡ ತೋರಿದ ಘಟನಾವಳಿಗಳನ್ನು ಮಕ್ಕಳು ಸಾಯಿ ಬಾಬಾರಂತೆ ವೇಷ ಧರಿಸಿ ಅನಾವರಣಗೊಳಿದರು. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ, ಚಿಂತನೆಗಳು, ಕಲೆ, ಸಂಸ್ಕಾರಗಳು ಬಾಲ್ಯದಲ್ಲಿಯೆ ಮೂಡ ಬೇಕು ಎನ್ನುವ ಸಾಮಾಜಮುಖೀ ಚಿಂತನೆಯಲ್ಲಿ ಈ ಕಾರ್ಯಕ್ರಮ ರೂಪುಗೊಂಡಿತು. 

 7 ರಿಂದ 12 ವರ್ಷದ ಮಕ್ಕಳ ವಿಭಾಗದಲ್ಲಿ ರುಕ್ಷಿ ಕಿನ್ನರರಾಜ್‌ ಪ್ರಥಮ ಸ್ಥಾನ, ವಂಶಿ ದ್ವಿತೀಯ, ಸಿಂಚನ ತೃತೀಯ ಸ್ಥಾನಗಳನ್ನು ಕ್ರಮವಾಗಿ ಪಡೆದರು. 3 ರಿಂದ 6 ವರ್ಷದ ಚಿಣ್ಣರ ವಿಭಾಗದಲ್ಲಿ ಕನಿಷ್ಕಾ ಪ್ರಥಮ, ಸಾನಿಧ್ಯ ದ್ವಿತಿಯ, ಧೃಶಾಲ್‌ ತೃತೀಯ ಸ್ಥಾನ ಪಡೆದು ಬಹುಮಾನಕ್ಕೆ ಭಾಜನರಾದರು.

 ತಾರಾನಾಥ್‌ ಮೇಸ್ತ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next