ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳನ್ನು ಸಮಾಜಮುಖೀಯಾಗಿ ಬೆಳೆಸುವ ಹೊಣೆ ಶಿಕ್ಷಕರ ಮೇಲಿದ್ದು, ಶಿಕ್ಷಕರು ಈ ನಿಟ್ಟಿನಲ್ಲಿ ತಮ್ಮ ಬದ್ಧತೆ ಹಾಗೂ ಪ್ರಾಮಾ ಣಿಕತೆಯನ್ನು ಮರೆತರೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕರು ಜವಾಬ್ದಾರಿಯುತ ವಾಗಿ ಮಕ್ಕಳನ್ನು ಬೆಳೆಸಬೇಕಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶಾಂತಲಾ ತಿಳಿಸಿದರು.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಪ್ರಸಿಡೆನ್ಸಿ ಶಾಲಾ ವಾರ್ಷಿ ಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ವಾರ್ಷಿ ಕೋತ್ಸವಗಳು ಆಡಂಬರಕ್ಕಿಂತ ಅರ್ಥ ಪೂರ್ಣವಾಗಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ನಡೆಯಬೇಕು ಎಂದರು.
ವಿದ್ಯಾರ್ಥಿ ಜೀವನ ತಳಹದಿ: ವಿದ್ಯಾರ್ಥಿ ಜೀವನವನ್ನು ನಿರ್ಲಕ್ಷಿಸದೇ ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು, ಪ್ರತಿಯೊಬ್ಬರ ಜೀವನಕ್ಕೂ ವಿದ್ಯಾರ್ಥಿ ಜೀವನ ತಳಹದಿಯಾಗಿದ್ದು, ಪ್ರಾಥಮಿಕ ಹಂತದಲ್ಲಿ ಪಡೆಯುವ ಜ್ಞಾರ್ನಾಜನೆ ಜೀವನದುದ್ದಕ್ಕೂ ಕಲಿಕೆಗೆ ಸಹಕಾರಿ ಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆ ಹಾಗೂ ಶಿಸ್ತಿನಿಂದ ಪಾಠ ಅಭ್ಯಾಸ ಮಾಡಬೇಕು ಎಂದರು.
ಮಕ್ಕಳ ಮೇಲೆ ಒತ್ತಡ ಬೇಡ: ಪ್ರತಿಯೊಬ್ಬರ ಜೀವನವನ್ನು ಪರಿ ಪೂರ್ಣವಾಗಿಸಬಲ್ಲ ಶಕ್ತಿ ಶಿಕ್ಷಣಕ್ಕಿದೆ. ಪೋಷಕರು ಕೂಡ ಮಕ್ಕಳಿಗೆ ಆಸ್ತಿ, ಹಣ ಸಂಪಾದಿಸಿ ಇಡುವುದಕ್ಕಿಂತ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಟ್ಟರೆ ಅವರೇ ಭವಿಷ್ಯದಲ್ಲಿ ಆಸ್ತಿವಂತರಾಗು ತ್ತಾರೆ. ಶೈಕ್ಷಣಿಕ ಪ್ರಗತಿಗೆ ಖಾಸಗಿ ಶಾಲೆಗಳ ಕೊಡುಗೆ ಕೂಡ ಅಪಾರ ವಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಮೇಲೆ ಒತ್ತಡ ಹೇರ ಬಾರದು ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕಿ ನಯಮತ್ ಬೇಗಂ ಮಾತನಾಡಿ, ಶಿಕ್ಷಣದಿಂದ ಮಾತ್ರ ಇಂದು ಸಮಾಜದಲ್ಲಿ ಪ್ರತಿ ಯೊಬ್ಬರು ಉನ್ನತ ಸ್ಥಾನಕ್ಕೇರಲು ಸಾಧ್ಯವಿದೆ. ಪ್ರತಿಯೊಂದು ಕ್ಷೇತ್ರ ದಲ್ಲಿಯೂ ಪ್ರಬಲ ಪೈಪೋಟಿ ಇರುವುದರಿಂದ ವಿದ್ಯಾರ್ಥಿಗಳು ಪಠ್ಯೇ ತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಜೃನಶೀಲತೆ ಹಾಗೂ ಕೌಶಲ್ಯತೆಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ಪ್ರಾಂಶುಪಾಲ ಮುಷ್ತಾಕ್ ಅಹ ಮ್ಮದ್, ಡಾ.ರಾಮು, ಪ್ರೊ.ಮಾಧವ್, ಶಿಕ್ಷಕರಾದ ಹರೀಶ್, ಮುಖ್ತಾರ್, ಪರ್ವಿನ್, ಹೇಮಾವತಿ, ಶ್ರೀನಿವಾಸ್, ಹರೀಶ್, ಶಿಕ್ಷಕರು ಇದ್ದರು.