Advertisement

ಮಕಳು ಸದ್ಗುಣಿಗಳಾಗಬೇಕು: ಶ್ರೀ ಶೈಲ ಜಗದ್ಗುರು

02:25 PM Apr 18, 2022 | Team Udayavani |

ರಬಕವಿ-ಬನಹಟ್ಟಿ: ಮಕ್ಕಳು ಸಾಕ್ಷರರಾಗುವ ಜೊತೆಗೆ ಸದ್ಗುಣಿಗಳಾಗಿ ಬೆಳೆಯಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸುಸಂಸ್ಕೃತರನ್ನಾಗಿ ರೂಪಿಸುವಲ್ಲಿ ಶಿಕ್ಷಕರು, ಪಾಲಕರ ಜವಾಬ್ದಾರಿಯೂ ಇದೆಯೆಂದು ಶ್ರೀಶೈಲ ಮಹಾಪೀಠದ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

Advertisement

ಸುಕ್ಷೇತ್ರ ಹಿಪ್ಪರಗಿ ಶ್ರೀ ಸಿದ್ಧರಾಮೇಶ್ವರ ಜನಕಲ್ಯಾಣ ಪ್ರತಿಷ್ಠಾನದ ಶ್ರೀ ಜಗದ್ಗುರು ಪಂಚಾಚಾರ್ಯ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಶ್ರೀ ಜಗದ್ಗುರು ಪಂಡಿತಾರಾಧ್ಯ ಪ್ರೌಢಶಾಲೆಯ 14ನೇ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಲಾ ರಂಗೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಾರಂಭವನ್ನು ಜಮಖಂಡಿ ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೋಳ್ಳಿ ಉದ್ಘಾಟಿಸಿ, ಮಕ್ಕಳು ಮೊಬೈಲ್‌ ದಾಸರಾಗದಂತೆ ಪಾಲಕರು ಮನೆಯಲ್ಲಿ ಗಮನಹರಿಸಿ. ಓದಿನೆಡೆಗೆ ಮಕ್ಕಳು ಚಿತ್ತ ಹರಿಸುವಂತೆ ಮಾಡಲು ಕರೆ ನೀಡಿದರು. ಮಕ್ಕಳ ಹಿತದೃಷ್ಟಿಯಿಂದ ಹಿಪ್ಪರಗಿ ಗ್ರಾಮಕ್ಕೆ ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರ ಬಂದಿದ್ದು ಅದನ್ನು ಉಳಿಸಿಕೊಳ್ಳಬೇಕು ಎಂದರು.

ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನೇಮಗೌಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಶಾಲೆಗಳು ಸರಿಯಾಗಿ ನಡೆಯದೆ ಇರುವುದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಕೆಯಾಗಲು ಕಲಿಕಾ ಚೇತರಿಕೆ ಸಹಕಾರಿಯಾಗಲಿದೆ. ಶಿಕ್ಷಕರಿಗೆ ಬೇಸಿಗೆ ರಜೆಯಲ್ಲಿ ತರಬೇತಿ ನಡೆಸಲಾಗುತ್ತಿದೆ ಎಂದರು.

ಹಿಪ್ಪರಗಿ ಸಂಗಮೇಶ್ವರ ಮಠದ ಸ. ಸ. ಪ್ರಭೂಜಿ ಮಹಾರಾಜರು, ನಂದೇಶ್ವರ ಕಮರಿಮಠದ ಶ್ರೀ ದುರದುಂಡೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

Advertisement

ನಾಡೋಜ ಜಗದೀಶ ಗುಡಗುಂಟಿಮಠ, ರಬಕವಿ-ಬನಹಟ್ಟಿ ತಾಲೂಕಾ ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ, ರವೀಂದ್ರ ಸಂಪಗಾಂವಿ, ವ್ಹಿ.ಜಿ. ಮಠಪತಿ, ಅಣ್ಣಪ್ಪ ಪಾಟೀಲ, ಕರೆಪ್ಪ ಪೂಜಾರಿ, ಡಾ| ಪಿ.ಬಿ. ಬಾಗೇವಾಡಿ, ಸೋಮಲಿಂಗ ಪೂಜಾರಿ, ತಾಲೂಕಾ ರಾಜ್ಯ ಸರಕಾರಿ ನೌಕರರ ಸಂಘದ ಕೋಶಾಧ್ಯಕ್ಷ ಪ್ರಶಾಂತ ಹೊಸಮನಿ, ಪತ್ರಕರ್ತ ವಿರುಪಾಕ್ಷಯ್ಯ ಮಠಪತಿ, ಜೀ ಟಿವಿ ಸರಿಗಮಪ ಕಲಾವಿದ ಜ್ಞಾನೇಶ, ಐ.ಎಂ. ಲಕ್ಕಪ್ಪಗೋಳ, ರುದ್ರಪ್ಪ ನ್ಯಾಮಗೌಡ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ. ಆರ್‌. ಪಾಲಬಾಂವಿ ಸನ್ಮಾನ ಸ್ವೀಕರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಡಹಳ್ಳಿ ಕೆಪಿಎಸ್‌ ಪ್ರಾಚಾರ್ಯ ಆರ್‌. ಬಿ. ಹಿರೇಮಠ ಅವರಿಗೆ ಅತ್ಯುತ್ತಮ ಶಿಕ್ಷಕ ಹಾಗೂ ಹಿಪ್ಪರಗಿ ಎಚ್‌. ಪಿ. ಎಸ್‌ ಸ್ನೇಹಾ ಸೋಹಾನಿ ಅವರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖ್ಯಗುರು ಬಿ. ಎಸ್‌. ಬೀಳಗಿ ಸ್ವಾಗತಿಸಿದರು. ಐ. ಆರ್‌. ಕುಂದರಗಿಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next