Advertisement

ಕುಮಾರಧಾರಾ ದಡದಲ್ಲಿ ಪುಟಾಣಿಗಳ ಕಲರವ

11:49 AM Apr 06, 2018 | Team Udayavani |

ಬನ್ನೂರು: ಇಲ್ಲಿನ ಬೀರಿಗ ಮತ್ತು ಕೊಡಿಮರ ಅಂಗನವಾಡಿ ಕೇಂದ್ರದ ಪುಟಾಣಿಗಳನ್ನು ಬೆಳ್ಳಿಪ್ಪಾಡಿ ಕಠಾರ ಕುಮಾರಧಾರಾ ನದಿ ದಡಕ್ಕೆ ಹೊರ ಸಂಚಾರಕ್ಕೆ ಕರೆದುಕೊಂಡು ಹೋಗಲಾಯಿತು.

Advertisement

ನದಿ ದಡದಲ್ಲಿ ಪುಟಾಣಿಗಳಿಗೆ ಮರಳಿನಾಟ, ನೀರಿನಾಟ, ಕಾಗದ ದೋಣಿ ರಚನೆ ಮಾಡಿ ನೀರಿನಲ್ಲಿ ಬಿಡುವುದು, ಅಡಿಕೆ ಹಾಳೆಯಲ್ಲಿ ಮಕ್ಕಳನ್ನು ಕೂರಿಸಿ ಎಳೆಯುವ ಆಟ, ಗುಂಪಿನಾಟ, ಅಭಿನಯಗೀತೆ ಮೊದಲಾದ ಶಾಲಾಪೂರ್ವ ಶಿಕ್ಷಣದ ಪ್ರಾತ್ಯಕ್ಷಿಕೆ ನಡೆಯಿತು. ವಿಶೇಷವಾದ ಚಟುವಟಿಕೆಗಳಲ್ಲಿ ಪುಟಾ ಣಿಗಳು ಆಸಕ್ತಿಯಿಂದ ಪಾಲ್ಗೊಂಡರು. ಪುಟಾಣಿಗಳ ಜತೆಗೆ ಮಕ್ಕಳ ಹೆತ್ತವರು, ಹಿರಿಯ ವಿದ್ಯಾರ್ಥಿಗಳು, ಸ್ಥಳೀಯರು ಭಾಗವಹಿಸಿದರು. 

ಬೆಳಗ್ಗೆಯ ಉಪಾಹಾರವನ್ನು ಕಠಾರ ರಮೇಶ್‌ ಶೆಟ್ಟಿ, ಮಧ್ಯಾಹ್ನದ ಊಟವನ್ನು ಸುದೀಪ್‌ ಶೆಟ್ಟಿ ಮತ್ತು ಪ್ರವೀಣ್‌ ಶೆಟ್ಟಿ ಕಠಾರ ವ್ಯವಸ್ಥೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆಯರಾದ ಅರುಣಾ ಡಿ. ಬೀರಿಗ, ರೇವತಿ ಕೊಡಿಮರ, ಸಹಾಯಕಿಯರಾದ ಮುತ್ತಮ್ಮ ಬೀರಿಗ, ಸುಶೀಲಾ ಕೊಡಿಮರ ಕಾರ್ಯಕ್ರಮ ಸಂಘಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next