Advertisement

ಮಕ್ಕಳೇ, ಪೋಷಕರಿಗೆ ಸೈಕಲ್‌ ಕೊಡಬೇಡಿ

08:26 PM Oct 05, 2019 | Lakshmi GovindaRaju |

ಕೆ.ಆರ್‌.ನಗರ: ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸರ್ಕಾರ ಉಚಿತ ಸೈಕಲ್‌ ವಿತರಿಸುತ್ತಿದ್ದು, ಸೌಲಭ್ಯಗಳನ್ನು ಬಳಸಿಕೊಂಡು ಚೆನ್ನಾಗಿ ಓದಬೇಕು ಎಂದು ಶಾಸಕ ಸಾ.ರಾ.ಮಹೇಶ್‌ ಸಲಹೆ ನೀಡಿದರು ಪಟ್ಟಣದ ಬನ್ನಿಮಂಟಪ ಬಡಾವಣೆಯ‌ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಿ ಮಾತನಾಡಿದರು.

Advertisement

ವಿದ್ಯಾರ್ಥಿಗಳು ತಮಗೆ ಒದಗಿಸಿರುವ ಸೈಕಲ್‌ಗ‌ಳನ್ನು ಪೋಷಕರಿಗೆ ನೀಡದೆ ಶಾಲೆಗೆ ಹೋಗಿ ಬರಲು ಮಾತ್ರ ಬಳಸಬೇಕು. ನಿತ್ಯ ಸೈಕಲ್‌ ತುಳಿಯುವುದರಿಂದ ದೈಹಿಕವಾಗಿ ಬೆಳವಣಿಗೆಯಾಗುವುದರ ಜತೆಗೆ ಸಕಾಲದಲ್ಲಿ ಶಾಲೆಗೆ ತೆರಳಲು ಅನುಕೂಲವಾಗಲಿದೆ. ಯಾವುದೇ ಕಾರಣಕ್ಕೂ ಸೈಕಲ್‌ ಮಾರಿಕೊಳ್ಳಬಾರದು ಎಂದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂಕು ಹಾಗೂ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳಿಗೆ 947 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿತ್ತು. ಆದರೆ, ಇದೀಗ ತಾಲೂಕಿಗೆ ಮಂಜೂರಾಗಿದ್ದ 40 ಕೋಟಿ ರೂ. ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಎಂ.ಮಂಜುಳಾ, ಪುರಸಭೆ ಸದಸ್ಯ ಕೆ.ಎಲ್‌.ಜಗದೀಶ್‌, ಸಾ.ರಾ.ಸ್ನೇಹ ಬಳಗದ ಅಧ್ಯಕ್ಷ ವಿಜಯಕುಮಾರ್‌, ಜೆಡಿಎಸ್‌ ವಕ್ತಾರ ಕೆ.ಎಲ್‌.ರಮೇಶ್‌, ನಗರಾಧ್ಯಕ್ಷ ಎಂ.ಕೆ.ಮಹದೇವ್‌, ಜೆಡಿಎಸ್‌ ಮುಖಂಡರಾದ ಕೆ.ಎಸ್‌.ಮಲ್ಲಪ್ಪ, ಆಕಾಶ್‌ಬಾಬು, ಮಾದೇಗೌಡ, ರಾಮರಾಜು, ಮಂಜುನಾಥ್‌, ಕೃಷ್ಣ, ಸೋಮಶೇಖರ್‌, ಶಾಸಕರ ಆಪ್ತ ಸಹಾಯಕ ಹೆಚ್‌.ಆರ್‌.ಅರುಣ್‌ಕುಮಾರ್‌, ಬಿಇಒ ಎಂ.ರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next