Advertisement
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 70ನೇ ವರ್ಷದ ಭಾರತ ಗಣರಾಜ್ಯೋತ್ಸವದಲ್ಲಿ ನಗರದ ವಿವಿಧ ಶಾಲೆಯ ಸಾವಿರಾರು ಮಕ್ಕಳು ಆಕರ್ಷಕವಾದ ಕವಾಯತ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
Related Articles
Advertisement
ಉತ್ತಮ ಸರ್ಕಾರಿ ಸೇವೆಗಾಗಿ ಪ್ರಶಸ್ತಿ: ಉತ್ತಮ ಸರ್ಕಾರಿ ಸೇವೆಗಾಗಿ ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳು ಇಲಾಖೆಯ ಸಹಾಯಕ ನಿರ್ದೇಶಕಿ ಗಾಯತ್ರಿ, ಮಧುಗಿರಿ ತಾಲೂಕು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ. ರುಕ್ಮಿಣಿ, ಗುಬ್ಬಿ ತಾಲೂಕು ಎಂ.ಎಚ್.ಪಟ್ಟಣದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಮ್ಮ ಹಾಗೂ ತಿಪಟೂರು ಉಪವಿಭಾಗಾ ಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ಬಿ. ಮಲ್ಲಿಕಾರ್ಜುನ ಅವರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ: ಜಕಾರ್ತದಲ್ಲಿ ಜರುಗಿದ ಇಂಡೋನೆಷಿಯಾ ಓಪನ್ ಮಾಸ್ಟರ್ 800 ಮೀ. ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ಕ್ರೀಡಾಪಟು ಸಿ.ಜಗದೀಶ್, ನ್ಯಾಷನಲ್ ಸ್ಕೂಲ್ ಗೇಮ್ಸ್ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಖೋ-ಖೋ ಪಂದ್ಯದಲ್ಲಿ ವಿಶೇಷ ಸಾಧನೆಗಾಗಿ ಸರ್ವೋದಯ ಶಾಲೆಯ ಜಿ.ಆರ್. ಯಶ ವಂತ್, ಜಿ.ಬಿ.ರೋಷನ್, ಆರ್.ಶಶಾಂಕ್, ಪಿ.ಧನುಷ್, ಬಿ.ಷಣ್ಮಖ್, ಎನ್‌ಸಿಸಿ ವಿಭಾಗದ ವಿಶೇಷ ಸಾಧನೆ ಗಾಗಿ ಕಿರಣ್‌ನಂದನ್ ಹಾಗೂ ಖೋಖೋ ಕೋಚ್ ದೈಹಿಕ ಶಿಕ್ಷಕ ವೈ.ರಮೇಶ್‌ರನ್ನು ಸನ್ಮಾನಿಸ ಲಾಯಿತು.
ಉತ್ತಮ ಸೇನಾ ಸೇವೆಗಾಗಿ ಗೌರವ: ರಾಷ್ಟ್ರಪತಿಗಳಿಂದ ಶೌರ್ಯ ಪ್ರಶಸ್ತಿಗೆ ಭಾಜನರಾಗಿ ಭಾರತೀಯ ಸೇನಾ ಪಡೆಯಲ್ಲಿ ಸೇವೆ ಸಲ್ಲಿ ಸುತ್ತಿರುವ ನಗರದ ಪುರಸ್ ಕಾಲೋನಿ ನಿವಾಸಿ ಎಂ. ಸಾದಿಕ್ ಕುಟುಂಬವನ್ನು ಗೌರವಿಸಲಾಯಿತು.
ಸಾರಿಗೆ ಚಾಲಕರಿಗೆ ಪುರಸ್ಕಾರ: ಅಪಘಾತ ರಹಿತ ರಾಜ್ಯ ಸಾರಿಗೆ ಸಂಸ್ಥೆಯ ಚಾಲಕ ಕಂ ನಿರ್ವಾಹಕ ಮಹೇಶ್ ಅಂಗಡಿ, ಶಿವರಾಜ್ ಟಿ., ಉಮೇಶ್, ಮಹದೇವಪ್ಪ ಅವರಿಗೆ ಸುರಕ್ಷಾ ಚಾಲಕ ಎಂಬ ಬಿರುದು ನೀಡಿ ಬೆಳ್ಳಿ ಪದಕದ ಜೊತೆಗೆ 30 ಸಾವಿರ ರೂ.ಗಳ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.